*ಶಿವಮೊಗ್ಗದ ಹೋಂ ಗಾರ್ಡ್ ಚೀಲೂರು ಬಳಿ ಸಾವು* *ಅಪರಿಚಿತ ವಾಹನದಿಂದ ಹಿಟ್ ಎಂಡ್ ರನ್…*

*ಶಿವಮೊಗ್ಗದ ಹೋಂ ಗಾರ್ಡ್ ಚೀಲೂರು ಬಳಿ ಸಾವು*

*ಅಪರಿಚಿತ ವಾಹನದಿಂದ ಹಿಟ್ ಎಂಡ್ ರನ್…*

ಶಿವಮೊಗ್ಗದಲ್ಲಿ ಹೋಂ ಗಾರ್ಡ್ ಕೆಲಸ ಮುಗಿಸಿಕೊಂಡು ತಮ್ಮ ಪತ್ನಿಯನ್ನು ಭೇಟಿ ಮಾಡಲು ಹೊನ್ನಾಳಿಗೆ ಹೊರಟಿದ್ದ ವ್ಯಕ್ತಿಯನ್ನು ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಹೋಂ ಗಾರ್ಡ್ ಸ್ಥಳದಲ್ಲೇ ಸಾವುಕಂಡ ಘಟನೆ ಚೀಲೂರು- ಹೊಸಮಳಲಿ ಮಧ್ಯದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ದ್ವಿಚಕ್ರ ವಾಹನದಲ್ಲಿ ಹೊನ್ನಾಳಿ ಬಳಿಯ ನೇರಲಗುಂಡಿ ಗ್ರಾಮಕ್ಕೆ ಪತ್ನಿಯನ್ನು ಭೇಟಿ ಮಾಡಲು ಜಯಂತಿ ಗ್ರಾಮದ ಆರ್.ನಂದೀಶ್ ಹೊರಟಿದ್ದರು.

ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿಹೊಡೆದ ಪರಿಣಾಮ ನಂದೀಶ್ ರಸ್ತೆ ಪಕ್ಕಕ್ಕೆ ಬಿದ್ದು ಸಾವು ಕಂಡಿದ್ದಾರೆ. ಅಪಘಾತಕ್ಕೆ ಒಳಗಾದ ದ್ವಿಚಕ್ರ ವಾಹನ ಕೂಡ ಅಲ್ಲೇ ಸಿಕ್ಕಿದೆ.