*ಶಿಕಾರಿಪುರದಲ್ಲಿ ಭಾರತ್ ಜೋಡೋ 2.0 ಪಾದಯಾತ್ರೆ;* *ಗಮನ ಸೆಳೆದ ಭದ್ರಾವತಿ ಶಾಸಕ ಸಂಗಮೇಶ್-ಶಿವಕುಮಾರ್- ಬಿ.ಎಸ್.ಗಣೇಶ್- ಬಿ.ಎಸ್.ಬಸವೇಶ್…*
*ಶಿಕಾರಿಪುರದಲ್ಲಿ ಭಾರತ್ ಜೋಡೋ 2.0 ಪಾದಯಾತ್ರೆ;*
*ಗಮನ ಸೆಳೆದ ಭದ್ರಾವತಿ ಶಾಸಕ ಸಂಗಮೇಶ್-ಶಿವಕುಮಾರ್- ಬಿ.ಎಸ್.ಗಣೇಶ್- ಬಿ.ಎಸ್.ಬಸವೇಶ್…*

ಶಿಕಾರಿಪುರದ ಕೆಟ್ಟದಹಳ್ಳಿ ಗ್ರಾಮದಿಂದ ಶಿಕಾರಿಪುರ ಪಟ್ಟಣದ ಸಂತೆ ಮೈದಾನದವರೆಗೆ ಹಮ್ಮಿಕೊಳ್ಳಲಾಗಿದ್ದ ಭಾರತ್ ಜೋಡೋ 2.0 ಪಾದಯಾತ್ರೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಪಾದಯಾತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ, ಭದ್ರಾವತಿ ಶಾಸಕರಾದ ಬಿ.ಕೆ. ಸಂಗಮೇಶ್ವರ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿಯ ಉಪಾಧ್ಯಕ್ಷರಾದ ಬಿ.ಕೆ. ಶಿವಕುಮಾರ್, ಭದ್ರಾವತಿ ಪಂಚ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಬಿ.ಎಸ್. ಗಣೇಶ್, ಯುವ ಮುಖಂಡರಾದ ಬಿ.ಎಸ್. ಬಸವೇಶ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಹೆಜ್ಜೆ ಹಾಕಿದರು.
ಪಾದಯಾತ್ರೆಯ ಬಳಿಕ ಶಿಕಾರಿಪುರದ ಸಂತೆ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು, ಒಗ್ಗಟ್ಟು, ಸಾಮಾಜಿಕ ನ್ಯಾಯ ಹಾಗೂ ಜನಪರ ಆಶಯಗಳ ಕುರಿತು ನಡೆದ ಕಾರ್ಯಕ್ರಮದಲ್ಲಿ ವಿಶೇಷ ಗಮನ ಸೆಳೆದರು.


