*ದೊಡ್ಡಪೇಟೆಯ ಹೆಚ್ ಸಿ ಮಂಜಪ್ಪರಿಗೂ ಪಿಸಿ ಚಂದ್ರಾನಾಯ್ಕರಿಗೂ ಸೆಲ್ಯೂಟ್ ಅಂದು ಬಿಡಿ…*

*ದೊಡ್ಡಪೇಟೆಯ ಹೆಚ್ ಸಿ ಮಂಜಪ್ಪರಿಗೂ ಪಿಸಿ ಚಂದ್ರಾನಾಯ್ಕರಿಗೂ ಸೆಲ್ಯೂಟ್ ಅಂದು ಬಿಡಿ…*

ಈ ಪೊಲೀಸರಿಗೆ ಸೆಲ್ಯೂಟ್ ಮಾಡಲೇಬೇಕಾದ ಪ್ರಸಂಗವೊಂದು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ!

ಶಿವಮೊಗ್ಗದಿಂದ ತರಿಕೆರೆಗೆ ಪ್ರಯಾಣಿಸುವ ಖಾಸಗಿ ಬಸ್ ನಲ್ಲಿಯೇ ಪ್ರಯಾಣಿಕ ಮಹಿಳೆ 2 ಲಕ್ಷ ಮೌಲ್ಯದ ಬಂಗಾರದ ಒಡವೆ, 60 ಸಾವಿರ ರೂ., ನಗದು ಹಣ, ಮೊಬೈಲ್ ಇದ್ದ ಬ್ಯಾಗ್ ಬಿಟ್ಟಿಳಿದಿದ್ದರು.

ಈ ಬಗ್ಗೆ ಮಹಿಳೆ ಕೂಡಲೇ ದೊಡ್ಡಪೇಟೆ ಠಾಣೆಗೆ ದೌಡಾಯಿಸಿ ಬಂದು ಇರುವ ವಿಚಾರ ಹೇಳಿಕೊಂಡಿದ್ದಾರೆ.

ಕೂಡಲೇ ಕಾರ್ಯ ಪ್ರವೃತ್ತರಾದ ಹೆಚ್ ಸಿ ಮಂಜಪ್ಪ ಮತ್ತು ಪಿಸಿ ಚಂದ್ರಾನಾಯ್ಕ ಖಾಸಗಿ ಬಸ್ ಪತ್ತೆಹಚ್ಚಿ, ಮಹಿಳೆ ಬಿಟ್ಟಿದ್ದ ಬ್ಯಾಗನ್ನು ಮರಳಿ ತಂದು ಮಹಿಳೆಗೆ ಒಪ್ಪಿಸಿದ್ದಾರೆ.