ಸ್ವೀಪ್ ಮೂಲಕ ವಿಶೇಷ ಚೇತನರಿಗೆ ಪಾಸ್ ಇನ್ ದ ಬಾಲ್ ಮೂಲಕ ಮತದಾನ ಜಾಗೃತಿ
ಲೋಕಸಭಾ ಚುನಾವಣೆ ಸಂಬಂದ ದಿನಾಂಕ:19/04/2024 ರಂದು ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ SVEEP ಮತದಾನ ಜಾಗೃತಿ ಕಾರ್ಯಕ್ರಮದ ಅಡಿ ಶಿವಮೊಗ್ಗದ ಡಾ||.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದ ಅವರಣದಲ್ಲಿ ವಿಶೇಷ ಚೇತನರಿಗೆ ಪಾಸ್ ಇನ್ ದ ಬಾಲ್ ಆಟ ಅಡಿಸುವ ಮೂಲಕ ಹಾಗೂ ಅಂದ ಕಲಾವಿದ ಬಸವರಾಜ್ ರವರ ತಂಡದಿಂದ ಮತದಾನ ಜಾಗೃತಿ ಗೀತೆಗಳನ್ನು ಹಾಡಿಸಲಾಯಿತು. ಹಾಗೂ ವಿಜೇತರಿಗೆ ಬಹುಮಾನ ವಿತರಣೆ ಮಾಡುವ ಮುಖಾಂತರ ಮತ್ತು ನೇಸರ ಕಲಾ ತಂಡದಿಂದ ಮತದಾನದ ಜಾಗೃತಿ ಬೀದಿ ನಾಟಕ ಪ್ರದರ್ಶಿಸು ಮೂಲಕ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಐಕಾನ್ ಆದ ಶ್ರೀರಜತ್ ದೀಕ್ಷಿತ್ ಮತದಾನದ ಬಗ್ಗೆ ಮಾತನಾಡಿದರು, ವಿಕಲ ಚೇತನ ಅಧಿಕಾರಿ ಶ್ರೀಮತಿ ಶಶಿರೇಖಾ, ಪಾಲಿಕೆ, ಸ್ವೀಪ್ ನೋಡಲ್ ಅಧಿಕಾರಿ ಸಿಬ್ಬಂಧಿಗಳು ಹಾಜರಿದ್ದರು ಜಿಲ್ಲಾ ಪಂಚಾಯಿಂದ ನನ್ನ ನಡೆ ಮತಗಟ್ಟೆ ಕಡೆ ಕಾರ್ಯಕ್ರಮವನ್ನು ಕಲಾ ಮತ್ತು ವಾಣಿಜ್ಯ ಕಾಲೇಜ್ ನ ಬೂತ್ ನಲ್ಲಿ ಆಯೋಜಿಸಲಾಗಿತ್ತು.


