*🔴 BRAKING NEWS FOR MALENADU EXPRESS* *ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ* ಶಿವಮೊಗ್ಗ ಜಿಲ್ಲೆಗೊಲಿದ ಒಂದೇ ಒಂದು ಪ್ರಶಸ್ತಿ!
*🔴 BRAKING NEWS FOR MALENADU EXPRESS*
*ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ*
ಶಿವಮೊಗ್ಗ ಜಿಲ್ಲೆಗೊಲಿದ ಒಂದೇ ಒಂದು ಪ್ರಶಸ್ತಿ!
*ಸಾಗರ:* ಕರ್ನಾಟಕ ಸರ್ಕಾರದ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ *ಕಾಗೋಡು ತಿಮ್ಮಪ್ಪ* ಅವರು ಆಯ್ಕೆಯಾಗಿದ್ದಾರೆ.
ಮಲೆನಾಡಿನ ಮಣ್ಣಿನಿಂದ ಬಂದು ವಿಧಾನಸಭೆಯ ಅಧ್ಯಕ್ಷರಾಗಿ, ಸಚಿವರಾಗಿ, ಸ್ಪೀಕರ್ ಆಗಿ ಸೇವೆ ಸಲ್ಲಿಸಿದ ಕಾಗೋಡು ಅವರಿಗೆ ರಾಜ್ಯ ಸರ್ಕಾರ ಅತ್ಯುನ್ನತ ಗೌರವ ನೀಡಿದೆ. ಕಾಗೋಡು ತಿಮ್ಮಪ್ಪನವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಗೋಡಿನವರು.
ಅ.30ರಂದು ಹೊರಬಿದ್ದ ಸರ್ಕಾರಿ ಆದೇಶ ಕಸಂವಾ 365 ಕಸಧ 2026ರ ಪ್ರಕಾರ 71 ಜನರಿಗೆ ಪ್ರಶಸ್ತಿ ಘೋಷಣೆಯಾಗಿದ್ದು, ಅದರಲ್ಲಿ ಕಾಗೋಡು ಅವರು ಪ್ರಮುಖರು.
*ಪ್ರಶಸ್ತಿ ವಿವರ:* 25 ಗ್ರಾಂ ಚಿನ್ನದ ಪದಕ, 5 ಲಕ್ಷ ನಗದು, ನ.1 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಪ್ರದಾನ.


