*ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ನಿರ್ದೇಶಕರಾಗಿ ಶಿವಮೊಗ್ಗದ ಆರೀಫ್ ಉಲ್ಲಾ ನೇಮಕ*
*ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ನಿರ್ದೇಶಕರಾಗಿ ಶಿವಮೊಗ್ಗದ ಆರೀಫ್ ಉಲ್ಲಾ ನೇಮಕ*
ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿಗೆ ಶಿವಮೊಗ್ಗದ ಕ್ರಿಯಾಶೀಲ ಕಾಂಗ್ರೆಸ್ ಮುಖಂಡ ಆರೀಫ್ ಉಲ್ಲಾರವರನ್ನು ನಿರ್ದೇಶಕರಾಗಿ ನೇಮಿಸಿ ಆದೇಶ ಹೊರಡಿಸಿದೆ.
ಕಾಂಗ್ರೆಸ್ ಗಾಗಿ ದುಡಿಯುತ್ತಾ ಬಂದ ಅಲ್ಪಸಂಖ್ಯಾತ ಪ್ರಮುಖರಲ್ಲಿ ಆರೀಫ್ ಉಲ್ಲಾ ಈ ಹಿಂದೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.


