*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ.ಯೋಗೇಶ್ ಪತ್ರಿಕಾಗೋಷ್ಠಿ* *ಶಿವಮೊಗ್ಗ ವಿಮಾನ- ಸಂಸದರಿಗೆ ಮಾಹಿತಿ ಕೊಟ್ಟು ಎಚ್ಚರಿಸಿದ ಅಧ್ಯಕ್ಷರು…* Night landing ಕೆಲಸ 98% ಮುಗಿದಿದೆ…
*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ.ಯೋಗೇಶ್ ಪತ್ರಿಕಾಗೋಷ್ಠಿ*
*ಶಿವಮೊಗ್ಗ ವಿಮಾನ- ಸಂಸದರಿಗೆ ಮಾಹಿತಿ ಕೊಟ್ಟು ಎಚ್ಚರಿಸಿದ ಅಧ್ಯಕ್ಷರು…*
Night landing ಕೆಲಸ 98% ಮುಗಿದಿದೆ…
ಗ್ಯಾರಂಟಿ ಸಮಿತಿ ಅಧ್ಯಕ್ಷ ಗಿರೀಶ್- ಗ್ಯಾರಂಟಿ ಸಮಿತಿ ಅಧ್ಯಕ್ಷ ಹಾಲಪ್ಪರಿಗೆ ಅಭಿನಂದಿಸಿದ ಅಧ್ಯಕ್ಷರು…
ವಿಮಾನ ನಿಲ್ದಾಣ ವಿಚಾರದ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ರಾಜ್ಯದ ಕೊಡುಗೆಯ ಬಗ್ಗೆ ಮಾತಾಡಲೇ ಇಲ್ಲ.
5.60 ಕೋಟಿ ರಾಜ್ಯ ಸರ್ಕಾರ ನೀಡಿದೆ. ನೈಟ್ ಲ್ಯಾಂಡಿಂಗ್ ವಿಚಾರದ ಬಗ್ಗೆ ಮಾತಾಡುತ್ತಲೇ ಇದ್ದ ಸಂಸದರು ಆ ಕೆಲಸ ಮುಗಿಯುತ್ತಾ ಬಂದರೂ ಈಗ ಮಾತಾಡುತ್ತಿಲ್ಲ. ಒಳಗೆ ಪ್ರವೇಶ ನೀಡುತ್ತಿಲ್ಲವೇ ಸಂಸದರೇ? ಇದಕ್ಕೆ 12.50 ಕೋಟಿ ಹಣ ನೀಡಿದೆ ರಾಜ್ಯ ಸರ್ಕಾರ.
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ನೀಡಲೇಬಾರದ? ಉಡಾನ್ ಸ್ಕೀಂ ಬಗ್ಗೆ ಮಾತಾಡ್ತೀರಲ್ಲ…ಒಂದೂವರೆ ವರ್ಷವಿದ್ದರೂ ಸ್ಪೈಸ್ ಜೆಟ್ ವಿಮಾನ ಸೇವೆ ಯಾಕೆ ನಿಂತಿದೆ ಸಂಸದರೇ?
ಇಲ್ಲಿರುವ ಉದ್ಯಮಿಗಳಿಗೆ ತೊಂದರೆ ಆಗ್ತಿದೆ ಅನ್ನೋ ನೀವು ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವವರು ಯಾರು? ನೀವೇ ಅಲ್ಲವೇ…
ವಿಮಾನ ನಿಲ್ದಾಣದಲ್ಲಿ ಕಮಲ ಸೃಷ್ಟಿಸಿದ್ದೀರಿ. ಈಗ ಕಮಲ ಬತ್ತಿ ಹೋಗುತ್ತಿದೆಯಾ? ನೀರು ಹಾಕಬೇಕಾದವರು ಯಾರು?
ಲೋಹದ ಹಕ್ಕಿ ಹಾರಬೇಕಾದ್ರೆ ಪ್ರಧಾನಿ ಎಂಬ ಐರನ್ ಲೆಗ್ ಕಾಲಿಟ್ಟಿದೆ. ಹಾಗಾಗಿ ಬಿಜೆಪಿ ಹೋಗಿ ಕಾಂಗ್ರೆಸ್ ಬಂತು. ಮೊದಲ ದಿನ ಫೋಸ್ ನೀಡಿದಂತೆಯೇ ನ.21 ರಂದು ಕೊನೆ ದಿನದ ಫ್ಲೈಟಿಗೂ ಬನ್ನಿ. ಬಂದು ದೃಢ ಸಂಕಲ್ಪ ಮಾಡಿ ಹೋಗಿ.
ಏರ್ ಇಂಡಿಯಾ ನಿಮ್ಮದೇ ಇದೆ. ಅದನ್ನೇ ತನ್ನಿ. ಅದಾನಿಗೆ ಮಾತ್ರ ಕರೆತರಬೇಡಿ. ಶಿವಮೊಗ್ಗದ ವಿಮಾನ ನಿಲ್ದಾಣವನ್ನು ಅದಾನಿ ಹೆಸರಿಗೆ ಬದಲಾಯಿಸಬೇಡಿ. ಕಾಂಗ್ರೆಸ್ ವಿರುದ್ಧ ಈ ವಿಚಾರದಲ್ಲಿ ಮಾತಾಡಲೇಬೇಡಿ.
ನಾವೂ ಕೂಡ ಹೊಸ ವಿಮಾನಯಾನಕ್ಕೆ ಮನವಿ ಮಾಡ್ತೇವೆ. ನೈಟ್ ಲ್ಯಾಂಡಿಂಗ್ ಇಲ್ಲ ಅಂತಿದ್ರಿ…ಈಗ ಲ್ಯಾಂಡಿಂಗೇ ಇಲ್ವಲ್ಲ ಸಂಸದರೇ…
ಸುಮಾರು ನೂರು ಜನ ಕೆಲಸದವರಿದ್ದಾರೆ. ಅವರ ಹಿತ ಕಾಪಾಡಲಾಗುತ್ತಿದೆ.
ಫ್ಯೂಯಲ್ ಫಿಲ್ಲಿಂಗ್ ಕೂಡ ನಾವೇ ವ್ಯವಸ್ಥೆ ಮಾಡುತ್ತಿದ್ದೇವೆ. ಅರ್ಧಂಬರ್ಧ ಏರ್ ಪೋರ್ಟ್ ಉದ್ಘಾಟಿಸಿದ್ದೇ ಈ ಸಮಸ್ಯೆಗಳಿಗೆ ಕಾರಣ.


