ಪತ್ರಿಕಾಗೋಷ್ಠಿಯಲ್ಲಿ ಸಚಿವ ಮಧು ಬಂಗಾರಪ್ಪ; ದಂಡಾವತಿ ವಿಚಾರದಲ್ಲಿ ದೊಡ್ಡ ಅಭಿವೃದ್ಧಿ ಹೆಜ್ಜೆ ಸಿಗಂದೂರು ಭಕ್ತರನ್ನು ಕಂಡರೆ ಇವರಿಗೆ ಆಗಲ್ಲ. ಇವತ್ತು ಅಣ್ಣ ತಮ್ಮ ಅಲ್ಲಿ ಹೋಗಿ ಫೋಸ್ ಕಟ್ತಾರೆ 2.84 ಕೋಟಿ ರೂ., ವೆಚ್ಚದಲ್ಲಿ ಚಂದ್ರಗುತ್ತಿ ಅಭಿವೃದ್ಧಿ ಮೆಗ್ಗಾನ್ ಆಸ್ಪತ್ರೆ- ಕುವೆಂಪು ವಿವಿ ವಿಚಾರಗಳು ಗಂಭೀರ ಸ್ಥಿತಿಯಲ್ಲಿ- ಯಡಿಯೂರಪ್ಪ ಸಿಮ್ಸ್ ಗೆ ಮೆಗ್ಗಾನ್ ಅಡವಿಟ್ಟವರು ಚೀಟರ್ಸ್! ಲೈಂಗಿಕ ಪ್ರಕರಣದ ಆರೋಪಿ ಡಾ.ಅಶ್ವಿನ್ ಹೆಬ್ಬಾರ್ ಬೇಲ್ ಪಡೆದು ಕೆಲಸಕ್ಕೆ ಹಾಜರಾದ ವಿಚಾರ ಗಮನಕ್ಕೆ ಬಂದಿದೆ. ಅಷ್ಟು ಈಸಿಯಾಗಿ ಬಿಡೋದಿಲ್ಲ. ಈಗಲೇ ಮಾತಾಡ್ತೀನಿ.
ಪತ್ರಿಕಾಗೋಷ್ಠಿಯಲ್ಲಿ ಸಚಿವ ಮಧು ಬಂಗಾರಪ್ಪ;
ದಂಡಾವತಿ ವಿಚಾರದಲ್ಲಿ ದೊಡ್ಡ ಅಭಿವೃದ್ಧಿ ಹೆಜ್ಜೆ
ಸಿಗಂದೂರು ಭಕ್ತರನ್ನು ಕಂಡರೆ ಇವರಿಗೆ ಆಗಲ್ಲ. ಇವತ್ತು ಅಣ್ಣ ತಮ್ಮ ಅಲ್ಲಿ ಹೋಗಿ ಫೋಸ್ ಕಟ್ತಾರೆ
2.84 ಕೋಟಿ ರೂ., ವೆಚ್ಚದಲ್ಲಿ ಚಂದ್ರಗುತ್ತಿ ಅಭಿವೃದ್ಧಿ
ಮೆಗ್ಗಾನ್ ಆಸ್ಪತ್ರೆ- ಕುವೆಂಪು ವಿವಿ ವಿಚಾರಗಳು ಗಂಭೀರ ಸ್ಥಿತಿಯಲ್ಲಿ- ಯಡಿಯೂರಪ್ಪ ಸಿಮ್ಸ್ ಗೆ ಮೆಗ್ಗಾನ್ ಅಡವಿಟ್ಟವರು ಚೀಟರ್ಸ್!
ಲೈಂಗಿಕ ಪ್ರಕರಣದ ಆರೋಪಿ ಡಾ.ಅಶ್ವಿನ್ ಹೆಬ್ಬಾರ್ ಬೇಲ್ ಪಡೆದು ಕೆಲಸಕ್ಕೆ ಹಾಜರಾದ ವಿಚಾರ ಗಮನಕ್ಕೆ ಬಂದಿದೆ. ಅಷ್ಟು ಈಸಿಯಾಗಿ ಬಿಡೋದಿಲ್ಲ. ಈಗಲೇ ಮಾತಾಡ್ತೀನಿ.
ನಂದಿಬೆಟ್ಟದಲ್ಲಿ ಐತಿಹಾಸಿಕ ಸಂಪುಟ ಸಭೆ ನಡೆದಿದೆ. 6 ಸಾವಿರ ಕೋಟಿ ವೆಚ್ಚದಲ್ಲಿ ಎತ್ತಿನ ಹೊಳೆ 75 ಲಕ್ಷ ಜನರಿಗೆ ನೀರಿನ ವ್ಯವಸ್ಥೆ ಆಗುತ್ತಿರೋದು ಐತಿಹಾಸಿಕ ನಿರ್ಧಾರ.
ಬಗರ್ ಹುಕುಂ ಪರವಾಗಿ ಹಾಗೂ ನೀರಿಗಾಗಿ ಜಿಲ್ಲೆಯಲ್ಲಿ ಹೋರಾಟ ಮಾಡಿದ್ದೇನೆ. ಈಗ ಅಧಿಕಾರ ಬಂದಿರೋದ್ರಿಂದ ಕೆಲಸ ಮಾಡಬೇಕಷ್ಟೇ. ವಿರೋಧ ಪಕ್ಷಗಳು ಟೀಕೆ ಮಾಡ್ತಿರೋದ್ರಲ್ಲಿ ಅರ್ಥವಿಲ್ಲ. ಗ್ಯಾರಂಟಿಗಳು ಸಫಲಗೊಂಡಿವೆ. 139 ಕೋಟಿ ವೆಚ್ಚದಲ್ಲಿ ಭದ್ರಾವತಿ ಕ್ಷೇತ್ರಕ್ಕೆ ನೀಡಲಾಗಿದೆ. ಇದು ಕೇವಲ ಒಂದು ಉದಾಹರಣೆ.
ಯಡಿಯೂರಪ್ಪರ ದುರುದ್ದೇಶ ಏನಿತ್ತೋ ಗೊತ್ತಿಲ್ಲ. ದಂಡಾವತಿ ಮಾಡೇ ತೀರ್ತೀವಿ ಅಂತಿದ್ರು. ಬಂಗಾರಪ್ಪ, ದೇವೇಗೌಡರು ಬಂದು ನಿಲ್ಲಿಸಿದ್ರು. ಓರ್ವರ ಮರಣವೂ ನಡೆದಿತ್ತು. ಪಕ್ಷಾತೀತವಾಗಿ ಶವ ಸಂಸ್ಕಾರಕ್ಕೆ ಹೋಗಿದ್ವಿ. ಸಿಎಂ ಆಗಿದ್ದ ಯಡಿಯೂರಪ್ಪರ ಹೆಲಿಕಾಪ್ಟರ್ ಕೂಡ ಅಲ್ಲಿ ಇಳಿಯಲು ಜನ ಬಿಟ್ಟಿರಲಿಲ್ಲ. ದುರಹಂಕಾರದಿಂದ ಮೆರೆದಿದ್ರು. ಮತ್ತೆ ಅಧಿಕಾರಕ್ಕೆ ಬಂದು ಲಾಠಿಯಲ್ಲಿ ಹೆಣ್ಣುಮಕ್ಕಳ ಮೇಲೆ ಹಲ್ಲೆ ಮಾಡಿದ್ರು. ನೀರು ಕೊಡಬೇಕಾದ್ರೆ ಮತ್ತೊಬ್ಬರ ಮನೆ ಹಾಳು ಮಾಡಬಾರದು.
ಈಗಲೂ ಪ್ರಕರಣಗಳು ನಡೆಯುತ್ತಿವೆ.
ದಂಡಾವತಿ ಜಾಗದಲ್ಲಿ 54 ಕೋಟಿ ಮಿನಿ ಬ್ಯಾರೇಜ್, ಗುಡವಿಯಲ್ಲೂ ನೀರಾವರಿಗೆ ಕ್ರಮ. 800 ಕೋಟಿ ರೂ.,ಗಳ ಅಭಿವೃದ್ಧಿ ದಂಡಾವತಿ ನೀರಾವರಿ ಅಭಿವೃದ್ಧಿಗೆ. ಮಲೆಶಂಕರ, ಚೋರಡಿ, ತಮ್ಮಡಿಹಳ್ಳಿಯಲ್ಲಿ ನೀರಾವರಿಗೆ ಹಂತ ಹಂತವಾಗಿ ಹಣ ಬಿಡುಗಡೆ ಆಗ್ತಿದೆ. ದಂಡಾವತಿ ವಿಚಾರದಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೇವೆ.
ಬಿಜೆಪಿಯವರೇ, ಬೇರೆಯವರನ್ನು ಮುಳುಗಿಸಿ, ಹಾಳು ಮಾಡಿ ಅಭಿವೃದ್ಧಿ ಕೆಲಸ ಮಾಡಬಾರದು. ಸಿಗಂದೂರು ಭಕ್ತರನ್ನು ಕಂಡರೆ ಇವರಿಗೆ ಆಗಲ್ಲ. ಇವತ್ತು ಅಣ್ಣ ತಮ್ಮ ಅಲ್ಲಿ ಹೋಗಿ ಫೋಸ್ ಕಟ್ತಾರೆ.
ಅಡಿಕೆ ಹಣದ ಟ್ಯಾಕ್ಸ್ ಕೊಟ್ರೆ ಸಾಕು ಇವರು, ನಮ್ಮ ಅಭಿವೃದ್ಧಿಗೆ. ಟೆಂಡರ್ ಕೊಟ್ಟರೂ ಕಳೆದ ಬಿಜೆಪಿ ಸರ್ಕಾರ ಹಣ ಇಟ್ಟಿರಲಿಲ್ಲ.
ಥರ್ಡ್ ಎಕ್ಸಾಂನಲ್ಲಿ 22,000 ಮಕ್ಕಳು ಪರೀಕ್ಷೆ ಕಟ್ಟಿದ್ದಾರೆ. 17395 ಮಕ್ಕಳು ಹೆಚ್ಚಿನ ಅಂಕ ಪಡೆದು ಪಾಸಾಗಿದ್ದಾರೆ.
ಶೇ. 85.19 ಪಿಯು ಮಕ್ಕಳು ಈವರೆಗೆ ಪಾಸಾಗಿದ್ದಾರೆ.
ಟೂರಿಸಂ- ಕ್ರೀಡೆಗೆ ಸಂಬಂಧಿಸಿದಂತೆ ಡಿಸಿ ಜೊತೆ ಸಭೆ ಮಾಡಿದ್ದೇನೆ. ಅನುದಾನ ತರುವ ಪ್ರಯತ್ನದಲ್ಲಿದ್ದೇನೆ. ಚಂದ್ರಗುತ್ತಿ ಪ್ರಾಧಿಕಾರದ ವಿಚಾರದಲ್ಲೂ 2.84 ಕೋಟಿ ಮೀಸಲಿದೆ. ಚಂದ್ರಗುತ್ತಿಯಲ್ಲಿ ಉಳಿಯೋಕೆ ವ್ಯವಸ್ಥೆ ಮಾಡಲಾಗುವುದು. ಒಂದೂವರೆ ವರ್ಷದಲ್ಲಿ ಅಭಿವೃದ್ಧಿ ಕಾರ್ಯ ಪೂರ್ಣ.
ಮೆಗ್ಗಾನ್ ಆಸ್ಪತ್ರೆ ಅಂದ ಕೂಡಲೇ ನೆನಪಾಗೋದು ಬಂಗಾರಪ್ಪ. ಮೆಡಿಕಲ್ ಕಾಲೇಜಿಗೆ ಮೆಗ್ಗಾನ್ ಆಸ್ಪತ್ರೆ ನೀಡಲಾಗಿದೆ. ಶಿವಮೊಗ್ಗ ಜಿಲ್ಲಾಸ್ಪತ್ರೆ ವಿಚಾರದಲ್ಲಿ ಯಡಿಯೂರಪ್ಪ ಮತ್ತು ಮಕ್ಕಳು ಚೀಟರ್ಸ್. ಶಿವಮೊಗ್ಗ ಜಿಲ್ಲೆಯನ್ನೇ ಒಡೆಯಲು ಹೋದವರು. ಮೆಗ್ಗಾನ್ ಆಸ್ಪತ್ರೆಯನ್ನು ಸಿಮ್ಸ್ ಗೆ ಆಗ ಅಡವಿಟ್ಟರು.ಕಿರೀಟಕ್ಕೋಸ್ಕರ ಮೆಗ್ಗಾನ್ ಅಡವಿಟ್ಟರು.
ಮೆಗ್ಗಾನ್ ಆಸ್ಪತ್ರೆಯನ್ನೇ ಮತ್ತಷ್ಟು ಅಭಿವೃದ್ಧಿ ಮಾಡಲು, ಉನ್ನತೀಕರಿಸಲು ಪ್ರಯತ್ನ ಮಾಡ್ತಿದ್ದೇನೆ.
ಲೈಂಗಿಕ ಪ್ರಕರಣದ ಆರೋಪಿ ಡಾ.ಅಶ್ವಿನ್ ಹೆಬ್ಬಾರ್ ಬೇಲ್ ಪಡೆದು ಕೆಲಸಕ್ಕೆ ಹಾಜರಾದ ವಿಚಾರ ಗಮನಕ್ಕೆ ಬಂದಿದೆ. ಅಷ್ಟು ಈಸಿಯಾಗಿ ಬಿಡೋದಿಲ್ಲ. ಈಗಲೇ ಮಾತಾಡ್ತೀನಿ.