*ಕೆ ಎಸ್ ಸಿ ಎ ಗೌರವ ಜಂಟಿ ಕಾರ್ಯದರ್ಶಿ ಬಿ.ಕೆ.ರವಿ- ವಲಯ ಸಂಚಾಲಕ ಡಿ.ಎಸ್.ಅರುಣ್ ಪತ್ರಿಕಾಗೋಷ್ಠಿ* *ಶಿವಮೊಗ್ಗದ ಮಲೆನಾಡಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಹಬ್ಬ!* *ಬಿಸಿಸಿಐ ವಿಜಯ್ ಮರ್ಚೆಂಟ್ ಟ್ರೋಫಿ – 16 ವರ್ಷದೊಳಗಿನವರ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ 2026-27* *ದೇಶದ 36 ತಂಡಗಳು, ಆರು ಗುಂಪುಗಳಲ್ಲಿ ಸೆಣಸಾಟ – ‘ಸಿ’ ಗುಂಪಿನ 15 ಪಂದ್ಯಗಳಿಗೆ ಶಿವಮೊಗ್ಗ ಅತಿಥ್ಯ* *ಕರ್ನಾಟಕ ತಂಡದಲ್ಲಿ ಶಿವಮೊಗ್ಗದ ಆಯುಷ್ ವೈ. ಎಸ್.*

*ಕೆ ಎಸ್ ಸಿ ಎ ಗೌರವ ಜಂಟಿ ಕಾರ್ಯದರ್ಶಿ ಬಿ.ಕೆ.ರವಿ- ವಲಯ ಸಂಚಾಲಕ ಡಿ.ಎಸ್.ಅರುಣ್ ಪತ್ರಿಕಾಗೋಷ್ಠಿ*

*ಶಿವಮೊಗ್ಗದ ಮಲೆನಾಡಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಹಬ್ಬ!*

*ಬಿಸಿಸಿಐ ವಿಜಯ್ ಮರ್ಚೆಂಟ್ ಟ್ರೋಫಿ – 16 ವರ್ಷದೊಳಗಿನವರ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ 2026-27*

*ದೇಶದ 36 ತಂಡಗಳು, ಆರು ಗುಂಪುಗಳಲ್ಲಿ ಸೆಣಸಾಟ – ‘ಸಿ’ ಗುಂಪಿನ 15 ಪಂದ್ಯಗಳಿಗೆ ಶಿವಮೊಗ್ಗ ಅತಿಥ್ಯ*

*ಕರ್ನಾಟಕ ತಂಡದಲ್ಲಿ ಶಿವಮೊಗ್ಗದ ಆಯುಷ್ ವೈ. ಎಸ್.*

ಶಿವಮೊಗ್ಗ: ಮಲೆನಾಡಿನ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗುತ್ತಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವತಿಯಿಂದ ಆಯೋಜಿಸಲಾಗುತ್ತಿರುವ ಪ್ರತಿಷ್ಠಿತ ವಿಜಯ್ ಮರ್ಚೆಂಟ್ ಟ್ರೋಫಿ – 16 ವರ್ಷದೊಳಗಿನವರ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ 2026-27ರ ಸಿ’ ಗುಂಪಿನ ಪಂದ್ಯಗಳು ನವೆಂಬರ್ 14ರಿಂದ ಡಿಸೆಂಬರ್ 8, 2026ರವರೆಗೆ ಶಿವಮೊಗ್ಗದಲ್ಲಿ ನಡೆಯಲಿದೆ.

ಶಿವಮೊಗ್ಗದಲ್ಲಿ ಬಿಸಿಸಿಐ ಈ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯನ್ನು ನಾಲ್ಕನೇ ಬಾರಿಗೆ ಆಯೋಜಿಸುತ್ತಿರುವುದು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಈ ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯಗಳ ಒಟ್ಟು 36 ತಂಡಗಳು ಭಾಗವಹಿಸಲಿದ್ದು, ಅವುಗಳನ್ನು ಆರು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಆರು ತಂಡಗಳು ಇರಲಿವೆ.

ಶಿವಮೊಗ್ಗದಲ್ಲಿ ‘ಸಿ’ ಗುಂಪಿನ ವಂದ್ಯಗಳು: ‘ಸಿ’ ಗುಂಪಿನಲ್ಲಿ ಚಂಡೀಗಢ, ಗುಜರಾತ್, ಉತ್ತರ ಪ್ರದೇಶ, ಹೈದರಾಬಾದ್, ಹರಿಯಾಣ ಹಾಗೂ ಒಡಿಶಾ ರಾಜ್ಯಗಳ ತಂಡಗಳು ಸೆಣಸಲಿವೆ. ಈ ಗುಂಪಿನ ಎಲ್ಲಾ ಪಂದ್ಯಗಳು ಶಿವಮೊಗ್ಗದ ನವುಲೆ ರಸ್ತೆಯಲ್ಲಿರುವ ಕೆ.ಎಸ್.ಸಿ.ಎ. ನವುಲೆ ಕ್ರೀಡಾಂಗಣ ಹಾಗೂ ಜಿ.ಎನ್.ಎನ್.ಸಿ.ಇ. ಕಾಲೇಜಿನ ಟರ್ಫ್ ಅಂಕಣದಲ್ಲಿ ನಡೆಯಲಿವೆ.

ವಿಜಯ್ ಮರ್ಚೆಂಟ್ ಟ್ರೋಫಿಯ ಹಿನ್ನೆಲೆ: ಭಾರತೀಯ ಕ್ರಿಕೆಟ್‌ನ ದಿಗ್ಗಜ ಆಟಗಾರರಲ್ಲಿ ಒಬ್ಬರಾದ ವಿಜಯ್ ಸಿಂಗ್ ಮಾಧವಿ

ಮರ್ಚೆಂಟ್ ಅವರ ಗೌರವಾರ್ಥವಾಗಿ ಬಿಸಿಸಿಐ ಈ ಪಂದ್ಯಾವಳಿಗೆ ವಿಜಯ್ ಮರ್ಚೆಂಟ್ ಟ್ರೋಫಿ ಎಂದು ಹೆಸರಿಸಿದೆ. 1929ರಿಂದ 1951ರವರೆಗೆ ಭಾರತ ತಂಡದ ಪರ 10 ಟೆಸ್ಟ್ ಪಂದ್ಯಗಳನ್ನು ಅಡಿದ್ದ ಅವರು, ದೇಶೀಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಸಾಧಾರಣ ಸಾಧನೆ ಮಾಡಿದ್ದರು. ಅವರ 71.64ರ ಪ್ರಥಮ ದರ್ಜೆ ಬ್ಯಾಟಿಂಗ್ ಸರಾಸರಿ, ಡಾನ್ ಬ್ರಾಡ್‌ಮನ್ ಅವರ ನಂತರದ ಅತ್ಯುತ್ತಮ ಸರಾಸರಿಗಳಲ್ಲಿ ಒಂದಾಗಿದೆ.

ದೇಶದ ಯುವ ಕ್ರಿಕೆಟಿಗರ ಪ್ರತಿಭೆಯನ್ನು ಗುರುತಿಸಿ, ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವುದು ಈ ಪಂದ್ಯಾವಳಿಯ ಪ್ರಮುಖ ಉದ್ದೇಶವಾಗಿದೆ.

ಕರ್ನಾಟಕ ತಂಡದಲ್ಲಿ ಶಿವಮೊಗ್ಗದ ಆಟಗಾರ: ಈ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡವು ‘ಬಿ’ ಗುಂಪಿನಲ್ಲಿ ಉತ್ತರ ಪ್ರದೇಶದ

ಲಕ್ಕೋದಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಈ ಗುಂಪಿನಲ್ಲಿ ಉತ್ತರಾಖಂಡ, ಗೋವಾ, ಮಹಾರಾಷ್ಟ್ರ, ಛತ್ತೀಸ್‌ಗಢ ಹಾಗೂ ರಾಜಸ್ಥಾನ ರಾಜ್ಯಗಳ ತಂಡಗಳು ಭಾಗವಹಿಸಲಿವೆ. ವಿಶೇಷವಾಗಿ, ಕರ್ನಾಟಕ ರಾಜ್ಯ ತಂಡದಲ್ಲಿ ಶಿವಮೊಗ್ಗ ಜಿಲ್ಲೆಯ ಆಯುಷ್ ವೈ. ಎಸ್. ಅವರು ಸ್ಥಾನ ಪಡೆದಿರುವುದು ಶಿವಮೊಗ್ಗ ಜಿಲ್ಲೆ ಹಾಗೂ ಶಿವಮೊಗ್ಗ ವಲಯಕ್ಕೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.

ವಲಯದಲ್ಲಿ ಯುವ ಕ್ರಿಕೆಟಿಗರಿಗೆ ನೀಡಲಾಗುತ್ತಿರುವ ಪ್ರೋತ್ಸಾಹ, ತರಬೇತಿ ಹಾಗೂ ಕ್ರಿಕೆಟ್ ಅಭಿವೃದ್ಧಿ ಚಟುವಟಿಕೆಗಳಿಗೆ ಇದು ದೊರೆತಿರುವ ಸಾರ್ಧಕ ಫಲವಾಗಿದೆ. ಇಂತಹ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳ ಆಯೋಜನೆಯು ಸ್ಥಳೀಯ ಯುವ ಆಟಗಾರರಿಗೆ ಉತ್ತಮ ಆಟದ ವಾತಾವರಣ, ಅನುಭವ ಹಾಗೂ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಅನ್ನು ಹತ್ತಿರದಿಂದ ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಶಿವಮೊಗ್ಗ ವಲಯದಿಂದ ಇನ್ನಷ್ಟು ಪ್ರತಿಭಾವಂತ ಆಟಗಾರರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರೇರಣೆಯಾಗಲಿದೆ.

ಪಂದ್ಯಾವಳಿಯ ವೇಳಾಪಟ್ಟಿ ಮತ್ತು ಆಟದ ನಿಯಮಗಳು: ನವೆಂಬರ್ 14, 2026ರಿಂದ ಡಿಸೆಂಬರ್ 8, 2026ರವರೆಗೆ

ನಡೆಯಲಿರುವ ‘ಸಿ’ ಗುಂಪಿನ ಪಂದ್ಯಾವಳಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಪ್ರತಿ ಪಂದ್ಯವು ಮೂರು ದಿನಗಳ ಅವಧಿಯಲ್ಲಿ ನಡೆಯಲಿದ್ದು, ಪಂದ್ಯಗಳ ನಡುವೆ ಅಗತ್ಯ ವಿರಾಮವನ್ನು ನಿಗದಿಪಡಿಸಲಾಗಿದೆ.

ಎಲ್ಲಾ ವಂದ್ಯಗಳು ಕೆಂಪು ಚೆಂಡಿನಲ್ಲಿ (Red Ball) ನಡೆಯಲಿದ್ದು, ಆಟಗಾರರು ಸಾಂಪ್ರದಾಯಿಕ ಬಿಳಿ ಬಣ್ಣದ ಕ್ರಿಕೆಟ್ ಸಮವಸ್ತ್ರದಲ್ಲಿ ಆಡಲಿದ್ದಾರೆ. ಬಿಸಿಸಿಐ ನಿಯಮಾವಳಿಗಳ ಪ್ರಕಾರ ಪ್ರತಿದಿನ ಬೆಳಿಗ್ಗೆ 9.30ಕ್ಕೆ ಪಂದ್ಯಗಳು ಆರಂಭವಾಗಲಿವೆ.

ಬಿಸಿಸಿಐ ಅಧಿಕಾರಿಗಳ ಮೇಲ್ವಿಚಾರಣೆ: ಪಂದ್ಯಾವಳಿಯು ಬಿಸಿಸಿಐನ ಅಧಿಕೃತ ತೀರ್ಪುಗಾರರು (Umpires) ಹಾಗೂ ಪಂದ್ಯ

ವೀಕ್ಷಕರ (Match Referees) ನೇತೃತ್ವದಲ್ಲಿ ನಡೆಯಲಿದೆ. ಇದಲ್ಲದೆ, ಬಿಸಿಸಿಐನ ರಾಷ್ಟ್ರೀಯ 16 ವರ್ಷದೊಳಗಿನವರ ತಂಡದ ಆಯ್ಕೆ ಸಮಿತಿಯ ಸದಸ್ಯರೂ ಪಂದ್ಯಗಳನ್ನು ವೀಕ್ಷಿಸಲು ಆಗಮಿಸಲಿದ್ದಾರೆ. ಇದರಿಂದ ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ರಾಷ್ಟ್ರೀಯ ಆಯ್ಕೆದಾರರ ಮುಂದೆ ಪ್ರದರ್ಶಿಸಲು ಉತ್ತಮ ಅವಕಾಶ ದೊರೆಯಲಿದೆ.

ಪಂದ್ಯಾವಳಿಯ ಯಶಸ್ವಿ ಆಯೋಜನೆಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯವು ಕ್ರೀಡಾಂಗಣಗಳ ಸಿದ್ಧತೆ, ವಸತಿ, ಸಾರಿಗೆ, ಊಟೋಪಚಾರ ಹಾಗೂ ಪಂದ್ಯಗಳ ಸುಗಮ ನಿರ್ವಹಣೆ ಸೇರಿದಂತೆ ಅಗತ್ಯವಿರುವ ಎಲ್ಲಾ ಪೂರ್ವಸಿದ್ಧತೆಗಳನ್ನು ಕೈಗೊಂಡಿದೆ.

ಉದ್ಘಾಟನಾ ಸಮಾರಂಭ ಹಾಗೂ ಗಣ್ಯರ ಉಪಸ್ಥಿತಿ: ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು 14ನೇ ನವೆಂಬರ್ 2026ರಂದು ಬೆಳಿಗ್ಗೆ 8.30ಕ್ಕೆ ಶಿವಮೊಗ್ಗದ ಎರಡು ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗಿದೆ.

1. ಕೆ.ಎನ್.ಸಿ.ಎ. ನವುಲೆ ಕ್ರೀಡಾಂಗಣ, ಶಿವಮೊಗ್ಗ

ಈ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ:

ಶ್ರೀ ನಿಖಿಲ್ ಬಿ., ಐ.ಪಿ.ಎಸ್. – ಜಿಲ್ಲಾ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ.

ಶ್ರೀ ಬಿ.ಕೆ. ರವಿ-ಗೌರವ ಜಂಟಿ ಕಾರ್ಯದರ್ಶಿಗಳು, ಕೆ.ಎಸ್.ಸಿ.ಎ., ಬೆಂಗಳೂರು

ಶ್ರೀ ಆರ್.ಪಿ. ನಾಗರಾಜ್- ವಲಯ ಉಸ್ತುವಾರಿಗಳು, ಕೆ.ಎಸ್.ಸಿ.ಎ., ಬೆಂಗಳೂರು

2. ಜಿ.ಎನ್.ಎನ್.ಸಿ.ಇ. ಕಾಲೇಜು ಕ್ರಿಕೆಟ್ ಕ್ರೀಡಾಂಗಣ, ಶಿವಮೊಗ್ಗ

ಈ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ:

ಶ್ರೀ ಎಸ್. ಎನ್. ನಾಗರಾಜ – ಕಾರ್ಯದರ್ಶಿಗಳು, ಎನ್.ಇ.ಎಸ್., ಶಿವಮೊಗ್ಗ,

ಡಾ. ವೈ. ವಿಜಯ ಕುಮಾರ್ – ಪ್ರಾಂಶುಪಾಲರು, ಜೆ.ಎನ್.ಎನ್.ಸಿ.ಇ., ಶಿವಮೊಗ್ಗ.

ಶ್ರೀ ಎ. ವಿ. ಚೇತನ್- ದೈಹಿಕ ಶಿಕ್ಷಣ ನಿರ್ದೇಶಕರು, ಜೆ.ಎನ್.ಎನ್.ಸಿ.ಇ., ಶಿವಮೊಗ್ಗ.

ಈ ಸಂದರ್ಭದಲ್ಲಿ ಕೆ.ಎಸ್‌.ಸಿ.ಎ. ಶಿವಮೊಗ್ಗ ವಲಯದ ಅಧ್ಯಕ್ಷರಾದ ಶ್ರೀ ನಾಗೇಂದ್ರ ಕೆ. ಪಂಡಿತ್ ಹಾಗೂ ವಲಯ ಸಂಚಾಲಕರು ಮತ್ತು ಆಡಳಿತ ಮಂಡಳಿ ಸದಸ್ಯರಾದ ಶ್ರೀ ಡಿ.ಎನ್. ಅರುಣ್ ಸೇರಿದಂತೆ ಶಿವಮೊಗ್ಗ ವಲಯದ ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿರಲಿದ್ದಾರೆ.

ಶಿವಮೊಗ್ಗದಲ್ಲಿ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಈ ಪಂದ್ಯಾವಳಿಯು ಯುವ ಕ್ರಿಕೆಟಿಗರಿಗೆ ಪ್ರೇರಣೆ ನೀಡುವುದರ ಜೊತೆಗೆ ಶಿವಮೊಗ್ಗವನ್ನು ರಾಷ್ಟ್ರೀಯ ಕ್ರಿಕೆಟ್ ಭೂಪಟದಲ್ಲಿ ಮತ್ತಷ್ಟು ಗುರುತಿಸುವಂತೆ ಮಾಡಲಿದೆ.

ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ವಿಶೇಷ ಆಹ್ವಾನ: ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಿತ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ಹಾಗೂ ಪಂದ್ಯಾವಳಿಯ ವಿವಿಧ ದಿನಗಳಲ್ಲಿ ನಡೆಯುವ ಪಂದ್ಯಗಳನ್ನು ವೀಕ್ಷಿಸಲು ಜಿಲ್ಲೆಯ ಎಲ್ಲಾ ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಪ್ರತಿನಿಧಿಗಳು, ಛಾಯಾಗ್ರಾಹಕರು ಹಾಗೂ ವರದಿಗಾರರು ಆಗಮಿಸಬೇಕೆಂದು ಅತ್ಮೀಯವಾಗಿ ಆಹ್ವಾನಿಸುತ್ತೇವೆ.

ಪಂದ್ಯಗಳ ವರದಿ, ಸುದ್ದಿ, ಛಾಯಾಚಿತ್ರಗಳು ಹಾಗೂ ದೃಶ್ಯಾವಳಿಗಳ ಮೂಲಕ ಈ ರಾಷ್ಟ್ರೀಯ ಕ್ರೀಡಾಕೂಟಕ್ಕೆ ವ್ಯಾಪಕ ಪ್ರಚಾರ ನೀಡುವಂತೆ ಹಾಗೂ ಪಂದ್ಯಾವಳಿಯ ಯಶಸ್ಸಿಗೆ ಮಾಧ್ಯಮದ ಸಹಕಾರ ನೀಡುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯ ವಿನಂತಿಸಿಕೊಂಡಿದೆ.