ಕೆಪಿಸಿಸಿಯ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಎನ್.ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?*ಮತ್ತೋರ್ವ ಕೆಪಿಸಿಸಿ ನೂತನ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌಡರು ಏನೆಂದರು?;*

*ಕೆಪಿಸಿಸಿಯ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಎನ್.ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?*

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆಗೋದಕ್ಕೆ ಎಲ್ಲರ ಪ್ರೀತಿ ಕಾರಣ…ನಾಗರಾಜ ಗೌಡರೂ ಕೂಡ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ…

ಪಕ್ಷದ ಗೆಲುವಿಗಾಗಿ ಗಟ್ಟಿ ತೀರ್ಮಾನ ತೆಗೆದುಕೊಂಡಿದೆ. ಜಿಲ್ಲಾಧ್ಯಕ್ಷರ ಬದಲಾವಣೆ ಕೂಡ ಆಗಿದೆ. ಪಕ್ಷದ ವರಿಷ್ಠರು ಕೊಟ್ಟ ಜವಾಬ್ದಾರಿ ನಿಭಾಯಿಸ್ತೇನೆ.
ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲೂ ಕಾಂಗ್ರೆಸ್ ಬಲವಾಗಿ ಪ್ರಚಾರ ಮಾಡ್ತಿದೆ.
ಭ್ರಷ್ಟಾಚಾರ, ಸುಳ್ಳು ಭರವಸೆ, 15 ಲಕ್ಷ ಹಣ ಅಕೌಂಟಿಗೆ ಹಾಕುವ ಸುಳ್ಳು ಭರವಸೆ, 35 ರೂ.,ಗಳಿಗೆ ಪೆಟ್ರೋಲ್ ಕೊಡ್ತೀವಿ ಅಂದಿದ್ರು ಬಿಜೆಪಿಯವರು. ಎಲ್ಲ ಸುಳ್ಳು ಭರವಸೆಗಳು.

ಮಣಿಪುರ ಸೇರಿದಂತೆ ಬಹಳ ರಾಜ್ಯಗಳಲ್ಲಿ ಮಹಿಳೆಯರ ಶೋಷಣೆ ವಿಪರೀತವಾಗಿದೆ. ನ್ಯಾಯಾಂಗ ವ್ಯವಸ್ಥೆ ಕೂಡ ಹಾಳುಗೆಡವುತ್ತಿರುವುದು, ಮಾಧ್ಯಮ ಬಳಕೆ, ಹಸಿವು, ಬಡತನ, ಪ್ರಜಾಪ್ರಭುತ್ವದ ಕಗ್ಗೊಲೆ…ಬಿಜೆಪಿಯ ಕೆಲಸಗಳಿವು.

ಕೆಲವರ ಕೈಯಲ್ಲಿ ದೇಶದ ಸಂಪತ್ತು ನೀಡಿ ಬಡವರನ್ನು ಹಸಿವಿನಲ್ಲಿಯೇ ಉಳಿಸಿದೆ.

ಕಾಂಗ್ರೆಸ್ಸಿಗೆ ಯಾಕೆ ವೋಟ್ ಕೊಡಬೇಕು? ಪಂಚ ಗ್ಯಾರಂಟಿಗಳ ಭರವಸೆ ನೀಡಿದ ಕಾಂಗ್ರೆಸ್, 9 ತಿಂಗಳಲ್ಲಿ ಈಡೇರಿಸಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಇಂಡಿಯಾ ಬಂದ್ರೆ 10 ಗ್ಯಾರಂಟಿಗಳನ್ನು ನೀಡುವ ಭರವಸೆ ಕಾಂಗ್ರೆಸ್ ಘೋಷಿಸಿದೆ.
ಈ ಹತ್ತು ಗ್ಯಾರಂಟಿಗಳ ಮೂಲಕ ದೇಶದ ಉದ್ಧಾರ ಸಾಧ್ಯ. ಜನ ದೇಶ ಕಾಪಾಡಲು ಮೋದಿಯನ್ನು ತ್ಯಜಿಸಿ ಕಾಂಗ್ರೆಸ್ ಗೆ ಮತ ಹಾಕಬೇಕು.

*ಮತ್ತೋರ್ವ ಕೆಪಿಸಿಸಿ ನೂತನ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌಡರು ಏನೆಂದರು?;*

ನಾಲ್ಕನೇ ಬಾರಿಗೆ ಚುನಾವಣೆಗೆ ಬಂದಿರೋ ಬಿಜೆಪಿಯ ರಾಘವೇಂದ್ರರವರು ಅಭಿವೃದ್ಧಿ ಮಾಡಿದ್ದಾರೆಂಬ ಭ್ರಮೆಯಲ್ಲಿದ್ದಾರೆ.
ತನಿಖಾ ಸಂಸ್ಥೆಗಳ ಅಪಬಳಕೆ ಮಾಡಿಕೊಂಡೇ ಬಿಜೆಪಿ ರಾಜಕಾರಣ ಮಾಡುತ್ತಿದೆ. ಜಿಲ್ಲೆಯ ಸಂಸದರು ಜಿಲ್ಲೆಯ ಜೀವಂತ ಸಮಸ್ಯೆಗಳನ್ನು ಹಾಗೇ ಉಳಿಸಿದ್ದಾರೆ. ಶರಾವತಿ ಸಂತ್ರಸ್ತರದು, ಬಗರ್ ಹುಕುಂ ರೈತರದಾಗಲೀ ಯಾವುದೂ ಸಮಸ್ಯೆ ಬಗೆಹರಿದಿಲ್ಲ.
ಯಾರಿಗಾದರೂ ಹಕ್ಕುಪತ್ರ ಕೊಟ್ಟಿದ್ದೀರಾ? ಭೂಗಳ್ಳರು ಅಂತ ಕೇಸುಗಳನ್ನು ಹಾಕಿಸಿದ್ರಿ. ಬರೀ ವಿಮಾನ, ರೈಲು, ರಸ್ತೆ ಅಂತೀರಿ. ರೈತರಿಗೆ ಏನು ಮಾಡಿದ್ದೀರಿ?

ಜಿಲ್ಲಾ ಸಚಿವರು ಈ ಹಿಂದೆ ಪಾದಯಾತ್ರೆ ಮಾಡಿದ್ದಕ್ಕೆ ಶಿಕಾರಿಪುರಕ್ಕೆ ಏತ ನೀರಾವರಿ ಯೋಜನೆ ಬಂತು. ಈಗ ಕುಡಿಯೋ ನೀರಿಗೇ ತೊಂದರೆ ಆಗಿದೆ.ಆದರೂ ಸಂಸದರು ತಲೆಕೆಡಿಸಿಕೊಳ್ಳುವುದಿಲ್ಲ. ಅಂತರಜಲ ಕುಸಿದಿದೆ. ಶಾಸಕ ವಿಜಯೇಂದ್ರ ಕೂಡ ಯಾವುದೇ ಕೆಲಸ ಮಾಡಿಲ್ಲ. ನಾಲ್ಕು ಬಾರಿ ಸಿಎಂ ಆದ್ರೂ ಯಡಿಯೂರಪ್ಪ ಏನು ಮಾಡಿದ್ದಾರೆ? ಸಚಿವ ಮಧುರವರ ಪ್ರಯತ್ನದ ಏತ ನೀರಾವರಿ ಯೋಜನೆಯನ್ನು ಹೈಜಾಕ್ ಮಾಡಿ ಸುಳ್ಳು ಹೇಳುತ್ತಿದ್ದೀರಿ..

ಚುನಾವಣೆಗಳ ಸಂದರ್ಭದಲ್ಲಿ ಹಿಂದುತ್ವ ಅಂತ ಬರುತ್ತೀರಿ. ಜನರಿಗೆ ಕಾಲ ಮೇಲೆ ನಿಲ್ಲುವ ಶಕ್ತಿಕೊಡಬೇಕಿತ್ತು. ಭದ್ರಾವತಿ ವಿಐಎಸ್ ಎಲ್ ಫ್ಯಾಕ್ಟರಿ ಕುರಿತೂ ಸುಳ್ಳು ಹೇಳುತ್ತಿದ್ದೀರಿ. ಬಂಗಾರಪ್ಪ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದ ಹಾಗೆ ಯಾವ ಕೆಲಸ ಮಾಡಿದ್ದೀರಿ? ವಿಪರೀತ ಜಮೀನು, ಆಸ್ತಿ ಖರೀದಿಸುತ್ತಿದ್ದೀರಿ ಅನ್ನೋದು ಬಿಟ್ಟರೆ ಮತ್ತೇನು ಮಾಡಿದ್ದೀರಿ?
ಹಣದ ಹೊಳೆ ಹರಿಸಿದರೂ ಜನ ಕಳೆದ ಚುನಾವಣೆಯಲ್ಲಿ ತಮ್ಮ ಶಕ್ತಿ ತೋರಿಸಿದ್ದಾರೆ.

*ಉಪಸ್ಥಿತಿ;*
ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಕಲಗೋಡು ರತ್ನಾಕರ್, ಹಾಲಪ್ಪ,, ಡಾ.ನೇತ್ರಾವತಿ, ಮಧು, ಎಲ್.ಸತ್ಯನಾರಾಯಣ, ಸುವರ್ಣ ನಾಗರಾಜ್, ಯು.ಶಿವಾನಂದ ಎಸ್ ಎ ಬಾಬು, ಆಸಿಫ್ ಸೇರಿದಂತೆ ಹಲವರಿದ್ದರು.