ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಆರ್.ಪ್ರಸನ್ನ ಕುಮಾರ್*;

*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಆರ್.ಪ್ರಸನ್ನ ಕುಮಾರ್*;
ಪಕ್ಷ ಕಟ್ಟಲು ಅವಕಾಶ ಕೊಟ್ಟ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷರಿಗೆ ಅಭಿನಂದನೆಗಳು

ಹತ್ತು ವರ್ಷ ಅಧ್ಯಕ್ಷನಾಗಿದ್ದೆ. ಎಲ್ಲರ ಒಗ್ಗಟ್ಟಿನಿಂದ ರಥ ಮುಂದಕ್ಕೊಯ್ಯಬೇಕು. ಎಲ್ಲರ ಸಹಕಾರ ಬೇಕು.

ಬಿಜೆಪಿ ಕೇಂದ್ರ ಸರ್ಕಾರ, ಮೋದಿ ಬರೀ ಸುಳ್ಳನ್ನೇ ಮಾತನಾಡೋದು. ಜನರಿಗೆ ದಾರಿ ತಪ್ಪಿಸಲಾಗುತ್ತಿದೆ. ಜನ ಅರ್ಥ ಮಾಡಿಕೊಳ್ಳಬೇಕು. ಗೀತಾರವರನ್ನು ಗೆಲ್ಲಿಸುವಲ್ಲಿ ಹಗಲರುಳು ಕೆಲಸ ಮಾಡೋಣ. ಎಲ್ಲರ ಶ್ರಮದಿಂದ ಅಭ್ಯರ್ಥಿ ಗೆಲ್ಲಿಸೋಣ

ಜನರ ಬಳಿ ಹೋಗೋಣ. ನನ್ನ ಬೂತು ನನ್ನ ಜವಾಬ್ದಾರಿ ಎಂ ರಾಹುಲ್ ಗಾಂಧಿಯವರ ಘೋಷವಾಕ್ಯದಂತೆ ಕೆಲಸ ಮಾಡೋಣ.

ಬಿಜೆಪಿಯ ಕರ್ಮಕಾಂಡಗಳು ಜನರಿಗೆ ಹೇಳೋಣ. ಪಕ್ಷ ಸಂಘಟನೆ ಮಾಡೋಣ. ದೇಶದ ಚುನಾವಣೆ ಇದು. ದೇಶ ಉಳಿಸಿಕೊಳ್ಳಲು ಹೋರಾಡೋಣ. ನಮಗೆ ಅಭ್ಯರ್ಥಿ ಮುಖ್ಯವಲ್ಲ. ನಾವೇ ಅಭ್ಯರ್ಥಿ. ನಮ್ಮ ಬೂತು ನಾವು ಕಾಪೋಡಣ. ಗೆಲ್ಲಿಸೋಣ

*ಆರ್.ಪ್ರಸನ್ನಕುಮಾರ್ ರವರಿಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಸೂಡಾ ಅಧ್ಯಕ್ಷರಾದ ಹೆಚ್.ಎಸ್‌. ಸುಂದರೇಶ್*;

ಚುನಾವಣೆ ಪ್ರಾರಂಭವಾಗಿದೆ. ಎಲ್ಲರನ್ನೂ ಜೊತೆಗೊಯ್ಯುವ ಮತ್ತು ಬಿಜೆಪಿಯನ್ನು ಕಿತ್ತೊಗೆಯಲು ಪ್ರಸನ್ನರ ಆಯ್ಕೆ. ಅಭಿನಂದನೆಗಳು ಎಲ್ಲರಿಗೂ

ಅತ್ಯಂತ ಕಷ್ಟಕಾಲದಲ್ಲಿ ಪಕ್ಷ ಸಂಘಟನೆಗೆ ನನಗೆ ಅಧ್ಯಕ್ಷರಾಗಿಸಿದ್ದರು. ಒಟ್ಟಿಗೆ ಒಯ್ಯುವ ಜವಾಬ್ದಾರಿ ಕೊಟ್ಟಿತ್ತು. 5.4 ವರ್ಷಗಳ ಕಾಲ ನಿಭಾಯಿಸಿದ್ದೇನೆ. ಬಿಜೆಪಿ ವಿರುದ್ಧ ಹೋರಾಟಕ್ಕೆ ಎಲ್ಲರ ಬೆಂವಲ ಸಿಕ್ಕಿತ್ತು. ಈ ಮಟ್ಟಕ್ಕೆ ಪಕ್ಷ ಬೆಳೆಸಿದವರಿಗೆ ಸಹಕರಿಸಲು ಅಧಿಕಾರ ಕೊಡಬೇಕು. ಪಕ್ಷ ಸಿದ್ಧಾಂತಕ್ಕೆ ಹೋರಾಡಬೇಕು.
ಕರೋನಾ ಸಂದರ್ಭದಲ್ಲೂ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ನಾಯಕರಿಂದ ಹಣ ಪಡೆಯದೇ ಪಕ್ಷ ಕಟ್ಟಿದ್ದೇವೆ. ಯಾರನ್ನೂ ಬದಲಾಯಿಸಬೇಕಾಗಿಲ್ಲ. ನಿಷ್ಠುರವಾಗಿ ನಡೆದುಕೊಳ್ಳುವ ಸಂದರ್ಭವೂ ಬಂದಿತ್ತು. ಎರಡೂ ರೀತಿಯ ಅಭಿಪ್ರಾಯಗಳು ಸಹಜ.

ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ರವರನ್ನು ಗೆಲ್ಲಿಸುವ ಕೆಲಸ ಆಗಬೇಕಿದೆ. ಬಿಜೆಪಿ ಕಿತ್ತೊಗೆಯಬೇಕಿದೆ.

ಎಂಥ ಸಂದರ್ಭದಲ್ಲೂ ಪಕ್ಷ ಬಿಡುವ, ದ್ರೋಹ ಬಗೆಯುವ ಕೆಲಸ ಮಾಡಿಲ್ಲ. ನಾನು ಟಿಕೆಟ್ ವಿಧಾನಸಭೆಗೆ ಕೇಳಿದ್ದೆ. ಸೂಡಾ ಕೇಳಿರಲಿಲ್ಲ…ಕೊಟ್ಟಿದ್ದಾರೆ. ಚುನಾವಣೆಗೆ ಹೊಸ ಅಧ್ಯಕ್ಷರನ್ನು ನೇಮಿಸಲು ಹೇಳಿದ್ದೆ. ಪಕ್ಷ ಸ್ಥಾನ ಕೊಟ್ಟಿದೆ. ಜಿಲ್ಲಾಧ್ಯಕ್ಷ ಸ್ಥಾನ ಬೇರೆಯವರಿಗೆ ಕೊಟ್ಟಿದೆ. ನನಗೆ ಆತ್ಮ ಸಂತೋಷವಾಗಿದೆ.

ಸಂತೋಷದ ಸಂದರ್ಭವಿದು.
ರಮೇಶ್ ರವರಿಗೂ ನಾಗರಾಜ ಗೌಡರಿಗೂ ಅಭಿನಂದನೆ…ಎಲ್ಲರಿಗೂ ವಂದನೆಗಳು

ಆರ್.ಪ್ರಸನ್ನ ಕುಮಾರ್, ನೂತನ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ

*ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೆಪಿಸಿಸಿ ನೂತನ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್*

ಚುನಾವಣೆಯ ಸಂದರ್ಭದಲ್ಲಿ ಹೈ ಕಮಾಂಡ್ ತನ್ನದೇ ಆದ ಮಾನದಂಡ ಉಪಯೋಗಿಸಿ ಈ ಬದಲಾವಣೆ ಮಾಡಿದೆ. ಸ್ವಯಂ ಅಧ್ಯಕ್ಷರಾಗಿದ್ದ ಸುಂದರೇಶ್ ರವರೇ ಬೇರೆಯವರಿಗೆ ಬಿಟ್ಟುಕೊಟ್ಟಿದ್ದಾರೆ. ಸಂಘಟನೆಗೆ ಬಲ ತುಂಬಿದ, ಅನುಭವಸ್ಥ ಪ್ರಸನ್ನ ಕುಮಾರ್ ರವರ ಆಯ್ಕೆ ಸೂಕ್ತವಾಗಿದೆ.

ಪ್ರತಿಯೊಬ್ಬ ಕಾರ್ಯಕರ್ತನೂ ಈ ಜವಾಬ್ದಾರಿ ನಿಭಾಯಿಸಬೇಕು. ಪಂಚ ಗ್ಯಾರಂಟಿಗಳ ಮೂಲಕ ಮತ ಕೇಳೋಣ. ಕೇಂದ್ರದ ಹತ್ತು ಗ್ಯಾರಂಟಿಗಳನ್ನು ಜಾರಿಗೆ ತರುವ ಭರವಸೆ ರಾಹುಲ್ ಗಾಂಧಿ ನೀಡಿದ್ದಾರೆ.

*ಉಪಸ್ಥಿತಿ;*
ಆರ್.ಎಂ.ಮಂಜುನಾಥ ಗೌಡ,
ಎನ್. ರಮೇಶ್, ನಾಗರಾಜ ಗೌಡ, ಶ್ರೀನಿವಾಸ ಕರಿಯಣ್ಣ, ಸಿ.ಎಸ್.ಚಂದ್ರಭೂಪಾಲ್, ದೇವೇಂದ್ರಪ್ಪ, ಕಲೀಂ ಪಾಷ, ಶಿವಕುಮಾರ್, ವಿಶ್ವನಾಥ ಕಾಶಿ, ಎಸ್ ಪಿ ದಿನೇಶ್, ಮಧು, ಯು.ಶಿವಾನಂದ್, ಬಲ್ಕೀಷ್ ಬಾನು