ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಏನಂದ್ರು? ಮೇ-2 ರಂದು ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಗೀತಕ್ಕ ಪರ ಪ್ರಚಾರಕ್ಕೆ ಬರಲಿದ್ದಾರೆ ದುನಿಯಾ ವಿಜಿ, ಡಾಲಿ ಧನಂಜಯ್, ದ್ರುವ ಸರ್ಜಾ, ಚಿಕ್ಕಣ್ಣ, ವಿಜಯರಾಘವೇಂದ್ರ, ಪ್ರೇಮ್, ಅನುಶ್ರೀ, ನಿಧಿ ಸುಬ್ಬಯ್ಯ, ಚಂದನ ಶೆಟ್ಟಿ, ಅತುಲ್
ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಏನಂದ್ರು?
ಮೇ-2 ರಂದು ರಾಹುಲ್ ಗಾಂಧಿ ಶಿವಮೊಗ್ಗಕ್ಕೆ
ಗೀತಕ್ಕ ಪರ ಪ್ರಚಾರಕ್ಕೆ ಬರಲಿದ್ದಾರೆ ದುನಿಯಾ ವಿಜಿ, ಡಾಲಿ ಧನಂಜಯ್, ದ್ರುವ ಸರ್ಜಾ, ಚಿಕ್ಕಣ್ಣ, ವಿಜಯರಾಘವೇಂದ್ರ, ಪ್ರೇಮ್, ಅನುಶ್ರೀ, ನಿಧಿ ಸುಬ್ಬಯ್ಯ, ಚಂದನ ಶೆಟ್ಟಿ, ಅತುಲ್
ಶಿವಮೊಗ್ಗ : ಪ್ರಚಾರ ತುಂಬಾ ಅದ್ಭುತವಾಗಿ ನಡೆಯುತ್ತಿದೆ. ಎಲ್ಲಾ ಭಾಗದಲ್ಲೂ ಉತ್ತಮವಾದ ಸ್ಪಂದನೆ ದೊರೆತಿದೆ ಎಂದು ಸಚಿವ ಮಧುಬಂಗಾರಪ್ಪ ಹೇಳಿದರು
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ, ಈ ದಿನಗಳಲ್ಲಿ ೪.೫ ಲಕ್ಷ ಜನರಿಗೆ ಮನೆಗೆ ಮನೆಗೆ ಗ್ಯಾರಂಟಿ ತಲುಪಿಸುವ ಕಾರ್ಯ ನಡೆಯುತ್ತಿದೆ. ನಗರ ಪ್ರದೇಶದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ನಮ್ಮ ಕಾರ್ಯಕರ್ತರು ಪ್ರಚಾರಕ್ಕೆ ಹೋದಾಗ ಜನರಿಂದ ಸಿಗುತ್ತಿರುವ ಬೆಂಬಲ ನೋಡಿ ಸಂತಸ ವಾಗಿದೆ ಎಂದರು.
ಗ್ಯಾರಂಟಿ ಯೋಜನೆಗೆ ಸಿಗುತ್ತಿರುವ ಬೆಂಬಲ ನೋಡಿದರೇ, ನನಗೆ ಗೀತಕ್ಕ ಅತ್ಯಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
ಗ್ರಾಮಾಂತರ ಭಾಗದಲ್ಲಿ ಕಾರ್ಯಕರ್ತರು ಮನೆಗೆ ಮನೆಗೆ ಗ್ಯಾರಂಟಿ ಯೋಜನೆ ಕಾರ್ಡ್ ತಲುಪಿಸಿ, ಕಾಂಗ್ರೆಸ್ ಯೋಜನೆಗಳ ಬಗ್ಗೆ ತಿಳಿ ಹೇಳುತ್ತಿದ್ದಾರೆ.
ಮೇ.೨ರಂದು ರಾಹುಲ್ ಗಾಂಧಿ ಶಿವಮೊಗ್ಗ ನಗರಕ್ಕೆ ಭೇಟಿ ಮಾಡಲಿದ್ದು, ಅಂದು ಮಧ್ಯಾಹ್ನ ೨ ರಿಂದ ೨.೩೦ ಸಮಯಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಲಿದೆ, ಈ ಸಂದರ್ಭದಲ್ಲಿ ಸಿ.ಎಂ.ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಹಲವಾರು ನಾಯಕರು ಭಾಗವಹಿಸಲಿದ್ದಾರೆಂದರು.
ಏ.೨೯ ರಿಂದ ಚಲನಚಿತ್ರ ನಿರ್ಮಾಪಕರ ಸಂಘದಿಂದ ೧೦೦-೧೫೦ ಜನರು ಬಂದು ಗೀತಕ್ಕನ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ ಹಾಗೂ ಅವರೊಂದಿಗೆ ಹಲವಾರು ಖ್ಯಾತ ನಾಯಕ ನಟರು ಈ ಪ್ರಚಾರ ಕಾರ್ಯದಲ್ಲಿ ಕೈಜೋಡಿಸಲಿದ್ದಾರೆ. ಇನ್ನು ಮುಂದೆ ಹೆಚ್ಚಾಗಿ ರೋಡ್ ಶೋಗಳು ನಡೆಯಲಿವೆ. ಕನ್ನಡ ಚಲನಚಿತ್ರ ನಟರಾದ ದುನಿಯಾ ವಿಜಿ, ಡಾಲಿ ಧನಂಜಯ್, ದ್ರುವ ಸರ್ಜಾ, ಚಿಕ್ಕಣ್ಣ, ವಿಜಯರಾಘವೇಂದ್ರ, ಪ್ರೇಮ್, ಅನುಶ್ರೀ, ನಿಧಿ ಸುಬ್ಬಯ್ಯ, ಚಂದನ ಶೆಟ್ಟಿ, ಅತುಲ್ ಸೇರಿದಂತೆ ಧಾರಾವಾಹಿ ನಾಯಕ-ನಾಯಕಿಯರು ಕೂಡ ಪ್ರಚಾರಕ್ಕೆ ಬರುವ ನಿರೀಕ್ಷೆಯಿದೆ ಎಂದರು.
ಇಂದು ಕೋರ್ಟ್ ಆವರಣದಲ್ಲಿ ಗೀತಾಕ್ಕನ ಪರವಾಗಿ ಮತಯಾಚನೆ ಮಾಡಲಾಯಿತು. ಲಾಯರ್‌ಗಳಿಮದ ಉತ್ತಮ ಸ್ಪಂದನೆ ಸಿಕ್ಕಿದೆ, ಕೋರ್ಟ್‌ಗೂ ನಮಗೂ ಇಂದು ಅವಿನುಭಾವ ಸಂಬಂಧವಿದೆ ನಮ್ಮ ತಂದೆಯವರಾ ಎಸ್.ಬಂಗಾರಪ್ಪನವರು ಇಲ್ಲಿಂದಲೇ ತಮ್ಮ ವೃತ್ತಿ ಜೀವನ ಆರಂಭ ಮಾಡಿದ್ದು ಎಂದುರ.
ಇಂದು ನಡೆಯುತ್ತಿರವ ಚುನಾವಣೆಯಲ್ಲಿ ಯಾವ ಕಾಂಗ್ರೆಸ್ ಅಭ್ಯರ್ಥಿ ಸೋಲುವುದಿಲ್ಲ ಎಂಬ ವಾತಾವರಣ ಸೃಷ್ಟಿಯಾಗಿದೆ, ನಮ್ಮ ಸರ್ಕಾರದ ಮೇಲೆ ಜನರ ವಿಶ್ವಾಸವಿಟ್ಟಿದ್ದಾರೆಂದರು.
ಮೊದಲು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ಗೆ ಹಲವಾರು ಟೀಕೆ-ಟಿಪ್ಪಣೆ ಮಾಡ್ತಾ ಇದ್ದರು, ಈಗ ಅದನ್ನು ಬಿಜೆಪ ಪಕ್ಷದ ನಾಯಕರಿಗೆ ಪಕ್ಷಕ್ಕೆ ಮಾಡುತ್ತಿದ್ದಾರೆಂದರು. ಬಿಜೆಪಿ ಸುಳ್ಳು ಭರವಸೆ ನೀಡಿ ಜನರನ್ನು ದಾರಿತಪ್ಪಿಸಿದ್ದರೇ, ಆದರೆ ನಾವು ಗ್ಯಾರಂಟಿ ಯೋಜನೆಗಳು ಜನರಿಗೆ ಕೊಟ್ಟು ಮತ ಕೇಳಿತ್ತಿದ್ದೇವೆ ಎಂದರು.
ಅಣ್ಣಾಮಲೈ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿ ಸಂಬಳ ತೆಗೆದುಕೊಂಡು ಈ ರಾಜ್ಯದಲ್ಲಿ ಎಲ್ಲಾದರು ಸ್ಪರ್ಧಿಸಿಬೇಕಿತ್ತು ಅದನ್ನು ಬಿಟ್ಟು ತಮಿಳು ನಾಡಿಗೆ ಹೋಗಿ ರಾಜಕೀಯ ಮಾಡುತ್ತಿದ್ದಾರೆ. ಹಾಗಾಗಿ ಅವರ ಬಗ್ಗೆ ನಾನು ಏನನ್ನು ಮಾತನಾಡುವುದಿಲ್ಲ ಎಂದರು.
ನಾವು ಯಾವುದೇ ಜಾತಿ ಧರ್ಮದಲ್ಲಿ ನಾನು ರಾಜಕೀಯ ಮಾಡಿ ಮತ ಕೇಳಲ್ಲ, ಯೋಜನೆಗಳು, ಅಭಿವೃದ್ಧಿಗಳ ಮೇಲೆ ನಾವು ಮತ ಕೇಳಲು ಜನರ ಬಳಿ ಹೋಗುವುದು, ಅದರೆ ಬಿಜೆಪಿ ಜನರ ಬಳಿ ಹೋಗಿ ಮತ ಕೇಳಲು ಯಾವುದೇ ನೈತಿಕತೆ ಇಲ್ಲ ಎಂದರು.
ಮೋದಿ ದೇಶದಲ್ಲಿ ಸುಳ್ಳು ಹೇಳಿಕೊಂಡು ಜನರಿಗೆ ಮೋಸ ಮಾಡಿದ್ದಾರೆ. ಹಾಗೇ ಇಲ್ಲಿನ ಸಂಸದರು ಕೂಡ ಅವರ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಆದರೆ ಈ ಬಾರಿ ಸುಳ್ಳಿಗೆ ಜನರು ತಕ್ಕ ಪಾಠ ಕಲಿಸುತ್ತಾರೆಂದರು.
ಮತ ಹಾಕಬೇಕಾದರೆ ಯೋಚನೆ ಮಾಡಿ ಗ್ಯಾರಂಟಿ ಯೋಜನೆ ಫಲಾನುಭವಿಗಳು ಮತ ಚಲಾಯಿಸಬೇಕು ಎಂದರು. ಕೆಲವರು ಅನವಶ್ಯಕವಾಗಿ ಮೋದಿ ಎನ್ನುವುದರ ಬಗ್ಗೆ ನಾನು ಏನು ಮಾತಾಡಲ್ಲ ಎಂದರು.
ಸಂದರ್ಭದಲ್ಲಿ ಚಂದ್ರ ಭೂಪಲ್, ಎಸ್ ಪಿ ಶೇಷಾದ್ರಿ, ಜಿ.ಡಿ.ಮಂಜುನಾಥ್, ಶಮಂತ, ಸುವರ್ಣ ನಾಗರಾಜ್ ಉಪಸ್ಥಿತರಿದ್ದರು.