ವಿಧಾನಸಭೆಯಿಂದ ವಿಧಾನಪರಿಷತ್‌ಗೆ 11 ಸದಸ್ಯರು ಅವಿರೋಧ ಆಯ್ಕೆ: ಭದ್ರಾವತಿಯ ಬಲ್ಕೀಷ್ ಬಾನು ಈಗ ಎಂಎಲ್ ಸಿ…
ವಿಧಾನಸಭೆಯಿಂದ ವಿಧಾನಪರಿಷತ್‌ಗೆ 11 ಸದಸ್ಯರು ಅವಿರೋಧ ಆಯ್ಕೆ:
ಭದ್ರಾವತಿಯ ಬಲ್ಕೀಷ್ ಬಾನು ಈಗ ಎಂಎಲ್ ಸಿ…
Karnataka Legislative Council Elections: ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ 11 ಅಭ್ಯರ್ಥಿಗಳೂ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಯಾವುದೇ ಹೆಚ್ಚುವರಿ ಅಭ್ಯರ್ಥಿ ಕಣದಲ್ಲಿ ಇಲ್ಲದಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಹಾಗಾದ್ರೆ, ಯಾರ್ಯಾರು? ಯಾವ ಪಕ್ಷದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ ಎನ್ನುವ ವಿವರ ಇಲ್ಲಿದೆ.
ವಿಧಾನಸಭೆಯಿಂದ ವಿಧಾನಪರಿಷತ್ (Karnataka legislative council) ಒಟ್ಟು11 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನ 7, ಬಿಜೆಪಿ 3, ಜೆಡಿಎಸ್‌ನ ಓರ್ವ ಸದಸ್ಯರು ವಿಧಾನಪರಿಷತ್‌ಗೆ ಅವಿರೋಧ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರು ಇಂದು (ಜೂನ್ 07) ಅಧಿಕೃತವಾಗಿ ಘೋಷಣೆ ಮಾಡಿದರು.
ಒಟ್ಟು 11 ವಿಧಾನಪರಿಷತ್ ಸ್ಥಾನಗಳಲ್ಲಿ ವಿಧಾನಸಭೆ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ಏಳು ಸ್ಥಾನ, ಬಿಜೆಪಿ ಮೂರು ಸ್ಥಾನ ಹಾಗೂ ಜೆಡಿಎಸ್ಗೆ ಒಂದು ಸ್ಥಾನ ಸಿಕ್ಕಿದೆ. ಕಾಂಗ್ರೆಸ್‌ನಿಂದ ಬೋಸರಾಜು, ಐವಾನ್ ಡಿಸೋಜಾ, ವಸಂತ್ ಕುಮಾರ್, ಬಿಲ್ಕೀಸ್ ಬಾನು, ಜಗದೇವ್ ಗುತ್ತೇದಾರ್, ಗೋವಿಂದ್ ರಾಜು, ಯತೀಂದ್ರ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ.