ಅಕ್ಷಯ ತೃತೀಯ- ಭೀಮಾ ಗೋಲ್ಡ್ ಮತ್ತು ಚಿನ್ನ ಕದ್ದ ಪಂಚವಟಿ ಕಾಲೋನಿಯ ಇಬ್ಬರು ಕಳ್ಳಿಯರು…ಸರೋಜ ಮತ್ತು ಕುಮಾರಿ ತನ್ವಿಯ ಕೈಚಳಕಕ್ಕೆ ಚಿನ್ನ ವ್ಯಾಪಾರಿಗಳೇ ಸುಸ್ತಾಗಿದ್ದರು!

ಅಕ್ಷಯ ತೃತೀಯ- ಭೀಮಾ ಗೋಲ್ಡ್ ಮತ್ತು ಚಿನ್ನ ಕದ್ದ ಪಂಚವಟಿ ಕಾಲೋನಿಯ ಇಬ್ಬರು ಕಳ್ಳಿಯರು…

ಸರೋಜ ಮತ್ತು ಕುಮಾರಿ ತನ್ವಿಯ ಕೈಚಳಕಕ್ಕೆ ಚಿನ್ನ ವ್ಯಾಪಾರಿಗಳೇ ಸುಸ್ತಾಗಿದ್ದರು!

ಅಕ್ಷಯ ತೃತೀಯ ದಿನದಂದು ಮೇ 25 ರಂದು ಮದ್ಯಾಹ್ನ ಇಬ್ಬರು ಮಹಿಳೆಯರು ಶಿವಮೊಗ್ಗ ಬಿಹೆಚ್ ರಸ್ತೆ, ಭೀಮಾ ಗೋಲ್ಡ್ ಅಂಗಡಿಗೆ ಗ್ರಾಹಕರಂತೆ ಬಂಗಾರ ಖರೀದಿ ಮಾಡಲು ಬಂದು ಲಾಕೆಟ್ ಕೌಂಟರ್ ಹತ್ತಿರ ಹೋಗಿ ಲಾಕೆಟ್ ಟ್ರೇ ತೆಗೆಸಿ, ಟ್ರೇನಲ್ಲಿಟ್ಟಿದ್ದ 3 ಬಂಗಾರದ ಲಾಕೆಟ್ ಪಡೆದುಕೊಂಡು ನೋಡುವವರಂತೆ ನಟಿಸಿ ಮತ್ತೆ ಬೇರೆ ಲಾಕೆಟ್ ಟ್ರೇ ತೋರಿಸುವಂತೆ ಹೇಳಿ ಕೈಯಲ್ಲಿದ್ದ ಸುಮಾರು 3 ಗ್ರಾಂ 470 ಮೀಲಿ ತೂಕದ 27,000/-ರೂ ಬೆಲೆಬಾಳುವ 3 ಲಾಕೆಟ್ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರು.

ಈ ಸಂಬಂಧ ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0204/2024 ಕಲಂ 420 ಮತ್ತು 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಈ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತ ಪತ್ತೆಗಾಗಿ ಎಸ್ ಪಿ ಮಿಥುನ್ ಕುಮಾರ್ ಜಿ.ಕೆ ರವರ ನೇತೃತ್ವದಲ್ಲಿ, ಅನಿಲ್ ಕುಮಾರ್ ಭೂಮಾರೆಡ್ಡಿ,ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಮತ್ತು ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2ರವರ ಮಾರ್ಗದರ್ಶನದಲ್ಲಿ, ಬಾಬು ಆಂಜಿನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ – ಎ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ ರವಿ ಪಾಟೀಲ್, ಪಿ.ಐ. ದೊಡ್ಡಪೇಟೆ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ನಾಗರಾಜ್ ಎಎಸ್ಐ, ಹೆಚ್ ಸಿ ರವರಾದ ಪಾಲಾಕ್ಷ ನಾಯ್ಕ, ಲಚ್ಚಾನಾಯ್ಕ್, ಸಿಪಿಸಿ ರವರಾದ ಚಂದ್ರನಾಯ್ಕ, ಗುರುನಾಯ್ಕ, ನಿತಿನ್, ಪುನೀತ್ರಾವ್ ಮತ್ತು ಪ್ರಕಾಶ್ ಹಾಗೂ ಮಹಿಳಾ ಸಿಬ್ಬಂದಿ ದೀಪ ಎಸ್ ಹುಬ್ಬಳಿ, ಪೂಜಾ, ಸುಮಿತ್ರಾಬಾಯಿ, ಲಕ್ಷ್ಮಿ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ಈ ತನಿಖಾ ತಂಡವು ಪ್ರಕರಣದ ಆರೋಪಿತರಾದ ಸರೋಜ ಕೆ, 49 ವರ್ಷ, ಜಿ.ಎಸ್.ಕೆ.ಎಂ ರಸ್ತೆ, ಪಂಚವಟಿ ಕಾಲೋನಿ, ಶಿವಮೊಗ್ಗ ಮತ್ತು ಕು|| ತನ್ವಿ ಎಸ್.ಎಂ, 22 ವರ್ಷ, ರಾಯಲ್ ಆರ್ಕೇಡ್ ಹಿಂಭಾಗ, ಜಿ.ಎಸ್.ಕೆ.ಎಂ ರಸ್ತೆ, ಪಂಚವಟಿ ಕಾಲೋನಿ, ಶಿವಮೊಗ್ಗ ಇವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಅಂದಾಜು ಮೌಲ್ಯ 27,000/- ರೂಗಳ 3 ಗ್ರಾಂ 470 ಮಿಲಿ ತೂಕದ 3 ಬಂಗಾರದ ಲಾಕೆಟ್ ಗಳನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.

ಈ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.