ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದವರನ್ನು ರಕ್ಷಿಸಿದ್ದ ಖಾಕಿ ಅಸಲಿ ಹೀರೋಗಳನ್ನು ಅಭಿನಂದಿಸಿದ ಎಸ್ ಪಿ*

*ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದವರನ್ನು ರಕ್ಷಿಸಿದ್ದ ಖಾಕಿ ಅಸಲಿ ಹೀರೋಗಳನ್ನು ಅಭಿನಂದಿಸಿದ ಎಸ್ ಪಿ*

ಇತ್ತೀಚೆಗೆ 112-ERSS ವಾಹನದ ಅಧಿಕಾರಿಗಳಾದ ಶಿವರುದ್ರಯ್ಯ ಎ ಆರ್, ಹೆಚ್.ಸಿ, ಸಾಗರ ಪೇಟೆ, ಪೊಲೀಸ್ ಠಾಣೆ ಮತ್ತು ಚಾಲಕರಾದ ಶಿವಾನಂದ್, ಎಪಿಸಿ, ಡಿಎಆರ್ ಶಿವಮೊಗ್ಗ ರವರು ಸಾಗರ ತಾಲ್ಲೂಕಿನ ಕುಗ್ವೆ ಗ್ರಾಮದ ಹೊಳೆಯ ಹತ್ತಿರ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆ ಹಾಗೂ 2 ಮಕ್ಕಳು ಸೇರಿದಂತೆ 3 ಜನರನ್ನು ರಕ್ಷಿಸಿ, ಉತ್ತಮ ಕಾರ್ಯ ನಿರ್ವಹಿಸಿದ್ದು ಸಾರ್ವಜನಿಕ ಶ್ಲಾಘನೆಗೆ ಪಾತ್ರವಾಗಿತ್ತು.

ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ. ಕೆ. ರವರು ಆನಂದಪುರ ಪೊಲೀಸ್ ಠಾಣೆಯಲ್ಲಿ ಶಿವರುದ್ರಯ್ಯ ಹಾಗೂ ಶಿವಾನಂದ್ ರವರಿಗೆ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಟಿ ನಾಯಕ್, ಪೋಲಿಸ್ ಉಪಾಧೀಕ್ಷಕರು, ಸಾಗರ ಉಪವಿಭಾಗ ರವರು ಉಪಸ್ಥಿತರಿದ್ದರು.