ಮೂರು ದೇವಸ್ಥಾನಗಳಲ್ಲಿ ಕಳುವು ಮಾಡಿದ್ದ ಮಾಲುಗಳ ಸಮೇತ ಭದ್ರಾವತಿ ಮೂಲದ ಇಬ್ಬರು ಕಳ್ಳರನ್ನು ಕೆಡವಿದ ಮಾಳೂರು ಪೊಲೀಸರು…*
*ಮೂರು ದೇವಸ್ಥಾನಗಳಲ್ಲಿ ಕಳುವು ಮಾಡಿದ್ದ ಮಾಲುಗಳ ಸಮೇತ ಭದ್ರಾವತಿ ಮೂಲದ ಇಬ್ಬರು ಕಳ್ಳರನ್ನು ಕೆಡವಿದ ಮಾಳೂರು ಪೊಲೀಸರು…*
ಮಾಳೂರಿನ ದೇವಸ್ಥಾನದ ವಸ್ತುಗಳನ್ನು, ಹಣವನ್ನು ಕದ್ದಿದ್ದ ಕಳ್ಳರಿಬ್ಬರನ್ನು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2023ರ ಆಗಸ್ಟ್ 9 ರಂದು ರಾತ್ರಿ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಿಡುವ ಗ್ರಾಮದ ಶ್ರೀ ವೀರಾಂಜನೇಯ ದೇವಸ್ಥಾನದ ಬಾಗಿಲನ್ನು ಒಡೆದು ಕಳ್ಳರು 75,000/- ರೂ ಮೌಲ್ಯದ ದೇವಸ್ಥಾನದ ಘಂಟೆ, ಜಾಗಟೆ, ತಟ್ಟೆಗಳು, ಬೆಳ್ಳಿದೀಪಗಳು, ಬೆಳ್ಳಿಯ ಅಕ್ಷಯ ಪಾತ್ರೆ ಮತ್ತು 40,000/- ರೂ ಕಾಣಿಕೆ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ದೇವಸ್ಥಾನದ ಅರ್ಚಕರಾದ ಗೋಪಾಲಕೃಷ್ಣ ಭಟ್ ರವರು ನೀಡಿದ ದೂರಿನ ಮೇರೆಗೆ ಮಾಳೂರು ಪೊಲೀಸ್ ಠಾಣಾ ಗುನ್ನೆ ಸಂಖ್ಯೆ 0092/2023 ಕಲಂ: 454, 457, 380 ಐಪಿಸಿ ರೀತ್ಯ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಎಸ್ ಪಿ ಮಿಥುನ್ ಕುಮಾರ್ ಜಿ.ಕೆ. ಅನಿಲ್ ಕುಮಾರ್ ಭೂಮಾರಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಮತ್ತು ಕಾರಿಯಪ್ಪ ಎ.ಜಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರವರ ಮಾರ್ಗದರ್ಶನದಲ್ಲಿ, ಗಜನಾನನ ವಾಮನ ಸುತರ, ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪವಿಭಾಗ ಮತ್ತು ಶ್ರೀಧರ್ ಕೆ., ಸಿಪಿಐ, ಮಾಳೂರು ವೃತ್ತ ರವರ ಮೇಲ್ವಿಚಾರಣೆಯಲ್ಲಿ ಕುಮಾರ ಕೂರಗುಂದ, ಪಿ.ಎಸ್.ಐ.-1, ಶಿವಾನಂದ ದರೇನವರ್ ಪಿ.ಎಸ್.ಐ-2, ಮಾಳೂರು ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಹೆಚ್.ಸಿ. ರವರಾದ ಸುರಕ್ಷಿತ, ರಾಜಶೇಖರ ಶೆಟ್ಟಿಗಾರ್, ಮಂಜುನಾಥ, ಲೋಕೇಶ ಮತ್ತು ಪಿ.ಸಿ. ರವರಾದ ಪ್ರದೀಪ, ಮಂಜುನಾಥ, ವಿವೇಕ, ಸಂತೋಷ, ಪುನೀತ, ಚೇತನ, ಮತ್ತು ಎಪಿಸಿ ಅಭಿಲಾಷ ರವರ ನೇತೃತ್ವದ ತನಿಖಾ ತಂಡವನ್ನು ರಚಿಸಲಾಗಿತ್ತು.
ಈ ತನಿಖಾ ತಂಡವು ಪ್ರಕರಣದ ಆರೋಪಿತರಾದ ಅರುಣ್ ಕುಮಾರ್ ಜಿ @ ಲಾಲಾ, 28 ವರ್ಷ, ಹೊಸಬುಳ್ಳಾಪುರ, ಭದ್ರಾವತಿ ಟೌನ್ ಮತ್ತು ಆಕಾಶ .ಎ. @ ಚೋಟು, 24 ವರ್ಷ, ಹೊಸಬುಳ್ಳಾಪುರ, ಭದ್ರಾವತಿ ಟೌನ್ ರವರನ್ನು ದಸ್ತಗಿರಿ ಮಾಡಿ ಸದರಿಯವರಿಂದ ಮಾಳೂರು ಪೊಲೀಸ್ ಠಾಣೆಯ ಮೇಲ್ಕಂಡ ಪ್ರಕರಣ ಸೇರಿದಂತೆ, ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿನಾಂಕಃ 2023 ರ ನವೆಂಬರ್ 23 ರಂದು ಕಸಗಾರು ಗ್ರಾಮದ ಗಾಳಿ ಮಾರಮ್ಮ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಪ್ರಕರಣ ಹಾಗೂ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2023 ರ ಆಗಸ್ಟ್ 9 ರಂದು ಬಾಳಗಾರು ಗ್ರಾಮದ ರಾಮೇಶ್ವರ ದೇವಸ್ಥಾನ ದಲ್ಲಿ ಕಳ್ಳತನ ಮಾಡಿದ ಪ್ರಕರಣ ಸೇರಿ ಒಟ್ಟು 3 ದೇವಸ್ಥಾನ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 70,000/- ರೂ ಮೌಲ್ಯದ ಬೆಳ್ಳಿ ವಸ್ತುಗಳು, ದೇವಸ್ಥಾನದ ಗಂಟೆಗಳು, ಜಾಗಟೆಗಳು, ಹರಿವಾಣಗಳು, ಕಲಶಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಒಂದು ಓಮಿನಿ ವಾಹನವನ್ನು ಅಮಾನತುಪಡಿಸಿಕೊಂಡಿರುತ್ತಾರೆ.
ಈ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಜಿಲ್ಲಾ ರಕ್ಷಣಾಧಿಕಾರಿಗಳು ಪ್ರಶಂಸಿಸಿ ಅಭಿನಂದಿಸಿದ್ದಾರೆ.