ಸಚಿವ ಮಧು ಬಂಗಾರಪ್ಪರವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು*ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪಿತೂರಿಗೆ ಸೆಡ್ಡು ಹೊಡೀತೀವಿ…ವಿಜಯೇಂದ್ರನೇ ಭ್ರಷ್ಟಾಚಾರದಲ್ಲಿ ನಂಬರ್ ಒನ್
ಸಚಿವ ಮಧು ಬಂಗಾರಪ್ಪರವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು*
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪಿತೂರಿಗೆ ಸೆಡ್ಡು ಹೊಡೀತೀವಿ…
ವಿಜಯೇಂದ್ರನೇ ಭ್ರಷ್ಟಾಚಾರದಲ್ಲಿ ನಂಬರ್ ಒನ್
ಇಡೀ ರಾಜ್ಯದಲ್ಲಿ ಮಳೆ ವಾತಾವರಣ ಚೆನ್ನಾಗಿದೆ. ಗುಡ್ಡ ಜರಿತ ಹುಷಾರಾಗಿ ಜನ ತಗೋಬೇಕು. ರೆಗ್ಯುಲರ್ ರಿವೀವ್ಸ್ ಮಾಡಬೇಕಿದೆ. ಮಾಡಲಾಗುತ್ತಿದೆ. ಅಧಿಕಾರಿಗಳು ಅಲರ್ಟ್ ಆಗಿದಾರೆ. ಮುಖ್ಯಮಂತ್ರಿಗಳು ಹೈ ಅಲರ್ಟ್ ಇರಲು ಹೇಳಿದ್ದಾರೆ ಎಲ್ಲರಿಗೂ…
ಅನಧಿಕೃತ ಮನೆ ಹಾನಿ ಆದ್ರೂ ಪರಿಹಾರದ ಬಗ್ಗೆ ಸಿಎಂ ಜೊತೆ ಚರ್ಚಿಸಲಾಗಿದೆ. ಹಿಂದೆ ಬಿಜೆಪಿಯವರೇ ಪ್ರಭಾವ ಬೀರಿ 5 ,ಲಕ್ಷ ತಗೊಂಡಿದಾರೆ.ತೀರಾ ಬಡವರಿಗೆ ಸಿಕ್ಕಿಲ್ಲ. ಈ ಬಾರಿ 50 ಸಾವಿರ ಭಾಗಶಃ ಹಾನಿಗೆ ಪರಿಹಾರ..
1.20 ಲಕ್ಷ ಪರಿಹಾರ,
ಪಾಲಿಕೆಯಿಂದಲೂ ಹೆಚ್ಚಿನ ಪರಿಹಾರ ಕೊಡಿ. ಮನೆ ಕಳಕೊಂಡವರಿಗೆ ಪೂರ್ಣ ಮನೆ ಸರ್ಕಾರದಿಂದಲೇ. ಅಧಿಕೃತ, ಅನಧಿಕೃತ ಎರಡನ್ನೂ ಗಮನಿಸಿ…
ಸಹಭಾಗಿತ್ವ ಗುಣಮಟ್ಟದ ಶಿಕ್ಷಣಕ್ಕೆ- GSW ETC
ಶಾಲೆಗಳ ರಿಪೇರಿ ಕೂಡ ಆರಂಭವಾಗಿದೆ. ಸರ್ಕಾರ ಎಲ್ಲರ ಜೊತೆಗಿದೆ. ಅರಣ್ಯ ಜಮೀನಲ್ಲಿ ಸಾಗುವಳಿ. ಸರ್ಕಾರದಿಂದ ರಕ್ಷಣೆ. ಇಲ್ಲಿನ ಯಾವ ಸಂಸದರೂ ಬಾಯಿ ಬಿಟ್ಟಿಲ್ಲ. ಕಾಂಗ್ರೆಸ್ ಗೊಂದು ಕಮಿಟ್ ಮೆಂಟ್ ಇದೆ. ಕಾಗೋಡು ತಿಮ್ಮಪ್ಪರನ್ನು ನೆನಪಿಸಿಕೊಳ್ಳುವುದೂ ಮುಖ್ಯ. ಆ ಕಮಿಟ್ ಮೆಂಟ್ ರಾಘವೇಂದ್ರರಿಗಿಲ್ಲ. ರೈತರ ಪರವಾಗಿ ಸರ್ಕಾರ ಯಾವತ್ತಿಗೂ ಜೊತೆಗಿದೆ.
ದೇವದಾಸ್ ಕಾಮತ್ ಒಳ್ಳೆಯ ವಕೀಲರನ್ನು ಸುಪ್ರೀಂಬಕೋರ್ಟಲ್ಲಿ ನೇಮಿಸಲಾಗಿದೆ.
ಶರಾವತಿ, ವರಾಹಿ, ಚಕ್ರ ಸಮಸ್ಯೆಗಳೆಲ್ಲ ಪರಿಹಾರವಾಗಲಿಬೆ. ಕೇಂದ್ರ ಫಿಟ್ಟಿಂಗ್ ಇಡೋ ಸಾಧ್ಯತೆ ಇರುತ್ತೆ. ಕೇಂದ್ರ ಈಗಲಾದರೂ ಕೋರ್ಟಲ್ಲಿ ನಮ್ಮ ಜೊತೆ ನಿಲ್ಲಬೇಕು. ಅವರ ಪರ್ಮೀಷನ್ ಬೇಕಾಗುತ್ತೆ.
ಮೂಡಾ ಹಗರಣ, ವಾಲ್ಮೀಕಿ ಹಗರಣ- ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ವಾಲ್ಮೀಕಿ ಹಗರಣದ ವಿರುದ್ಧ ತನಿಖೆಗೆ ಆದೇಶಿಸಿ ತನಿಖೆ ನಡೆಯುತ್ತಿದೆ. ಈಗ ಮೂಡಾ ವಿಚಾರ ತಗೊಂಡಿದ್ದಾರೆ. ರಾಜ್ಯಪಾಲರ ಮೇಲೆ ಒತ್ತಡ ಹೇರಲಾಗುತ್ತಿದೆ. ವಿಜಯೇಂದ್ರ ಸಿಎಂ, ಡಿಸಿಎಂ ವಿರುದ್ಧ ಹಗುರವಾಗಿ ಮಾತಾಡಿದ್ದಾರೆ. ಅವರ ಪಿಕ್ಚರ್ ಬಿಡಿಸ್ತೀವಿ. ಯತ್ನಾಳ್ ಅವರ ಪಕ್ಷದವರೇ. ಅವರಿಗೆ ಉತ್ತರ ಕೊಡಿ. ಡಿಕೆಶಿ ಬಗ್ಗೆ ಮಾತಾಡೋಕೆ ಯೋಗ್ಯತೆ ಏನಿದೆ? ಚೋಟಾ ಸಿಗ್ನೇಚರ್ ಸೇರಿದಂತೆ ಬಹಳಷ್ಟು ಭ್ರಷ್ಟಾಚಾರ ಕೇಸುಗಳಿರುವ ವಿಜಯೇಂದ್ರ ಈ ರೀತಿ ಮಾತಾಡಿದ್ದಾರೆ. ಯೋಗ್ಯತೆ ಇದೆಯಾ? ಡಿಕೆಶಿಯವರನ್ನು ತುಳಿಬೇಕು ಅಂತ ಯಡಿಯೂರಪ್ಪ ಅಧಿಕೃತವಾಗಿ ಲೆಟರ್ ಬರೆದಿದ್ದರು. ಜೈಲಿಗೆ ಹೋಗಲು ಕಾರಣಕರ್ತರಾಗಿದ್ದು ಯಡಿಯೂರಪ್ಪ. ನಿಮ್ ಕೈ ನಿಮ್ ತಲೆ ಮೇಲೇ ಇಟ್ಕೊಂಡಿದೀರಿ ವಿಜಯೇಂದ್ರ.
ಬಿಜೆಪಿ ಸಿಎಂ ಇದ್ದಾಗಲೇ ಮೂಡಾ ಸೈಟು ನೀಡಿದ್ದು. ಅದನ್ನು ಹ್ಯಾಂಡಲ್ ಮಾಡ್ತಿದ್ದಿದ್ದು ವಿಜಯೇಂದ್ರಾನೇ. ಎಲ್ಲ ಪಕ್ಷದವರೂ ನಿವೇಶನ ತಗೊಂಡಿದಾರೆ. ಈ ನಡುವೆ ಬಹಳ ಸಿಎಂಗಳು ಬಂದು ಹೋದರೂ ಚರ್ಚೆ ಆಗಿರಲಿಲ್ಲ. ಈಗ್ಯಾಕೆ? ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ರೂ ಎಲ್ಲರೂ ಒಗ್ಗಟ್ಟಾಗಿ ಎದುರಿಸುತ್ತೇವೆ.
ಯಡಿಯೂರಪ್ಪ ವಿಜಯೇಂದ್ರ ಕಾರಣದಿಂದಲೇ ಎರಡೆರಡು ಬಾರಿ ಸಿಎಂ ಸ್ಥಾನದಿಂದ ಇಳಿಸಿದ್ರು. ಹುಷಾರಾಗಿ ಮಾತಾಡಿ ವಿಜಯೇಂದ್ರ.
ಜನರ ಜೊತೆ ನಿಲ್ಲೋ ಬದಲು ಬಿಜೆಪಿಯವರು ಪಾದಯಾತ್ರೆ ಮಾಡುತ್ತಾ ಕಾಲಹರಣ ಮಾಡ್ತಿದ್ದಾರೆ. ಬಿಜೆಪಿಯವರ ಭ್ರಷ್ಟಾಚಾರ ಸಂಪೂರ್ಣವಾಗಿ ಬಯಲಿಗೆ ಬರಬೇಕು. ಓಬಿಸಿಯವರು ಅಧಿಕಾರದಲ್ಲಿದ್ರೆ ಕೆಳಗಿಳಿಸೋ ಪ್ರಯತ್ನ ಮಾಡ್ತಿದಾರೆ ಬಿಜೆಪಿಯವರು.
ಭ್ರಷ್ಟಾಚಾರಿಗಳಿಗೆ ರಾತ್ರೋರಾತ್ರಿ ಕ್ಲೀನ್ ಮಾಡುವ ವಾಷಿಂಗ್ ಮೆಷಿನ್ ಬಿಜೆಪಿ. ಕರೆಪ್ಷನ್ ಗ್ಯಾಂಗ್ ಬಿಜೆಪಿ. ಏನೂ ಮಾಡಿಲ್ಲದ ಸಿದ್ದರಾಮಯ್ಯರ ವಿರುದ್ಧ ಪಿತೂರಿ ಮಾಡಲಾಗುತ್ತಿದೆ. ನಾವೆಲ್ಲ ಒಗ್ಗಟ್ಟಾಗಿ ಎದುರಿಸುತ್ತೇವೆ.
ದತ್ತಾತ್ತಿ ಕಾಲದ ಸೂಡಾ ಹಗರಣ ಮತ್ತೆ ಓಪನ್ ಮಾಡ್ತೀನಿ. ಇಂಥ ಹಗರಣಗಳನ್ನೆಲ್ಲ ಹೊರಕ್ಕೆ ತರಲೇಬೇಕು. ಹುಡ್ಕೋ ಕಾಲೋನಿ, ಗಾರ್ಮೆಂಟ್, ಹಗರಣಗಳು ಮತ್ತೆ ಮುನ್ನೆಲೆಗೆ ತರಲಿದ್ದೇವೆ. ಮಾಡಿಕೊಂಡ ಪ್ರಾಪರ್ಟಿ ರಕ್ಷಿಸಿಕೊಳ್ಳೋದಕ್ಕೆ ಬಿಜೆಪಿ ಸರ್ಕಾರ ಏನೇನೋ ಕಾನೂನು ತಂದುಕೊಂಡರು.
ವಿಜಯೇಂದ್ರ ನಂಬರ್ ಒನ್ ಭ್ರಷ್ಟಾಚಾರಿ. ಶಿವಮೊಗ್ಗದಲ್ಲೇ ಬಹಳಷ್ಟು ಹಗರಣ ಇವೆ. ಹೊರಕ್ಕೆ ಬರಲಿವೆ.