ಕಾರ್ಪೊರೇಟರ್ ಮೊಟ್ಟೆ ಸತ್ತಿ ಮೇಲೆ ಗುಂಪು ಹಲ್ಲೆ;ರೌಡಿಗಳ ಪಾತ್ರವಿಲ್ಲ!

ಕಾರ್ಪೊರೇಟರ್ ಮೊಟ್ಟೆ ಸತ್ತಿ ಮೇಲೆ ಗುಂಪು ಹಲ್ಲೆ;

ರೌಡಿಗಳ ಪಾತ್ರವಿಲ್ಲ!

ಶಿವಮೊಗ್ಗ ಮಹಾನಗರ ಪಾಲಿಕೆ ಕಾರ್ಪೊರೇಟರ್ ಆಗಿದ್ದ ಸತ್ಯನಾರಾಯಣ ರಾಜ್ @ ಮೊಟ್ಟೆ ಸತೀಶ್ ಮೇಲೆ ಶಿವಮೊಗ್ಗದ ಕುಸ್ಕೂರು ಬಳಿ ಗುಂಪೊಂದು ಹಲ್ಲೆ ಮಾಡಿದ್ದು, ಇದು ರೌಡಿಗಳ ಕೃತ್ಯ ಅಲ್ಲ ಎಂದು ಎಸ್ ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ರಾತ್ರಿ ಕುಸ್ಕೂರಿನಲ್ಲಿ ಕಾರಿನಲ್ಲಿ ತೆರಳುವಾಗ ಸತೀಶ್ ಮೇಲೆ ಗುಂಪೊಂದು ದೊಣ್ಣೆಗಳಿಂದ ಹಲ್ಲೆ ಮಾಡಿತು. ಅಲ್ಲಿಂದ ಕಾರಿನಲ್ಲಿಯೇ ಸತೀಶ್ ತಪ್ಪಿಸಿಕೊಂಡು ಬಂದಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಹಲ್ಲೆಯ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.