ಶಿವಮೊಗ್ಗದ “ಟೆಕ್ವಾಂಡೋ ಗರ್ಲ್ “ಚಿತ್ರ ಆಗಸ್ಟ್ 30ಕ್ಕೆ ಬಿಡುಗಡೆಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕಿ ಡಾ.ಸುಮಿತ ಪ್ರವೀಣ್ ಭಾನು
ಶಿವಮೊಗ್ಗದ “ಟೆಕ್ವಾಂಡೋ ಗರ್ಲ್ “ಚಿತ್ರ ಆಗಸ್ಟ್ 30ಕ್ಕೆ ಬಿಡುಗಡೆ
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕಿ ಡಾ.ಸುಮಿತ ಪ್ರವೀಣ್ ಭಾನು
ಶಿವಮೊಗ್ಗದ ಡಾ. ಸುಮಿತ ಪ್ರವೀಣ್ ಭಾನು ಆತ್ರೇಯ ಕ್ರಿಯೇಶನ್ ನ ಚೊಚ್ಚಲ ನಿರ್ಮಾಣದ ‘ಟೆಕ್ವಾಂಡೋ ಗರ್ಲ್’ ಸೌತ್ ಕೋರಿಯಾದ ಸಮರಕಲೆ ಚಿತ್ರ, ಇದೇ ತಿಂಗಳು ಆಗಸ್ಟ್ 30ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬೆಳ್ಳಿ ತೆರೆಯ ಮೇಲೆ ರಂಜಿಸಲು ಬರುತ್ತಿದೆ.
ರವೀಂದ್ರ ವಂಶಿ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ, ಹೆಣ್ಣು ಮಕ್ಕಳು ತಮಗೆ ತಾವೇ ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಮಹತ್ತರ ಸಂದೇಶವಿದೆ. ಸುಮಾರು 200 ಮಕ್ಕಳಿಗೆ ಅವಕಾಶ ಕಲ್ಪಿಸಿದ ಸಾಮಾಜಿಕ ಕಳಕಳಿ ಇರುವ ಈ ಚಿತ್ರವನ್ನು ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೂ ತೋರಿಸಬೇಕು ಎಂಬುದು ನಿರ್ಮಾಪಕರ ಮನದಾಳದ ಮಾತು.
ಮಗಳು ಋತು ಸ್ಪರ್ಶ ಸುಮಾರು ಎಂಟು ವರ್ಷಗಳಿಂದ ‘ಟೆಕ್ವಾಂಡೋ’ ಸಮರಕಲೆಯನ್ನು ಕಲಿತು ನಾಲ್ಕು ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬ್ಲಾಕ್ ಬೆಲ್ಟ್ ಪಡೆದಿದ್ದಾಳೆ. ಅಂತರಾಷ್ಟ್ರೀಯ ನೃತ್ಯಗಾರ್ತಿಯು ಆಗಿರುವ ಈ ಅಪ್ಪಟ ದೇಸಿ ಕಲಾ ಪ್ರತಿಭೆಯ ಮೊದಲ ಚಿತ್ರ ಇದಾಗಿದ್ದರೂ ಬಿಡುಗಡೆಗೆ ವಿಳಂಬವಾಗಿ ಇದೀಗ ಸಿದ್ಧವಾಗಿದೆ. ಈಗಾಗಲೇ ಕನ್ನಡದ ಬಾಲನಟಿಯಾಗಿ, ಕಾಂಗೋ, ಗಂಗೆಗೌರಿ, ತಾರಕೇಶ್ವರ ಚಿತ್ರದಲ್ಲಿ ಅಭಿನಯಿಸಿದ್ದಾಳೆ. ತಾರಕೇಶ್ವರ ಚಿತ್ರದಲ್ಲಿ ಬಾಲಸುಬ್ರಹ್ಮಣ್ಯನಾಗಿ ಬಾಲಕನ ಪಾತ್ರದಲ್ಲಿ ಅಭಿನಯಿಸಿದ್ದಾಳೆ.
30 ದಿನಗಳ ಕಾಲ ನಡೆದಿರುವ ಈ ಚಿತ್ರೀಕರಣದಲ್ಲಿ ಸಮರ ಕಲೆಯನ್ನು ಹೇಳಿಕೊಟ್ಟವರು ಮಾಸ್ಟರ್ ವಿಫ ರವಿ. ಈ ಚಿತ್ರದಲ್ಲಿ ಎರಡು ಹಾಡುಗಳಿವೆ ಎಂದು ನಿರ್ಮಾಪಕಿ ಡಾ. ಸುಮಿತ ಪ್ರವೀಣ್ ಭಾನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತಾರಾಬಳಗದಲ್ಲಿ:- ಋತು ಸ್ಪರ್ಶ, ಡಾ. ಸುಮಿತ ಪ್ರವೀಣ್ ಭಾನು ಪ್ರವೀಣ್ ಸಿ ಭಾನು, ಪಲ್ಲವಿ ರಾವ್, ಸಹನ ಶ್ರೀ, ವಿಫ ರವಿ, ಸ್ವಾತಿ ಶಿವಮೊಗ್ಗ, ರೇಖಾ ಕೂಡ್ಲಿಗಿ ಮುಂತಾದವರು ಅಭಿನಯಿಸಿದ್ದು, ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಪ್ರಮೋದ್ ಭಾರತೀಯ, ಸಾಹಿತ್ಯ ಮನೋಜ ಕುಮಾರ್, ಸಂಗೀತ ಎಂ ಎಸ್ ತ್ಯಾಗರಾಜ್, ಸಾಹಸ ವಿಫ ರವಿ, ಸಂಕಲನ ರವಿ ಚಂದನ್ ಸಿ. ಧ್ವನಿಗ್ರಹಣ ಕೃಷ್ಣಮೂರ್ತಿ, ಪ್ರಸಾಧನ ವೆಂಕಟೇಶ, ಕಲೆ ಚೇತನ್, ಪತ್ರಿಕಾ ಸಂಪರ್ಕ ವೀರೇಂದ್ರ ಬೆಳ್ಳಿಚುಕ್ಕಿ, ಡಾಕ್ಟರ್ ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ, ಸಹ ನಿರ್ದೇಶನ ಅನಿಲ್, ಯುವ ಸೂರ್ಯ, ಸೂರಿ, ರಚನೆ ನಿರ್ದೇಶನ ರವೀಂದ್ರ ವಂಶಿ ಅವರಿದ್ದು, ಈ ಚಿತ್ರದ ಸಹ ನಿರ್ಮಾಪಕರು ಪ್ರವೀಣ್ ಸಿ ಭಾನು, ನಿರ್ಮಾಪಕರು ಡಾ. ಸುಮಿತ ಪ್ರವೀಣ್ ಭಾನು ಅವರಾಗಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯವನ್ನು ರಘು ಗುಂಡ್ಲು, ಪಿ ಆರ್ ಓ ಶಿವಮೊಗ್ಗ ಸಿನಿಮಾಸ್ ಅಡ್ಡ, ಶಿವಮೊಗ್ಗ ನಿರ್ವಹಿಸುತ್ತಿದ್ದಾರೆ.