ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;ಕೂಡಲೇ ಮಹಾನಗರ ಪಾಲಿಕೆ ಚುನಾವಣೆ ನಡೆಸಿಬಹುಮತ ಪಡೆಯಲಿದೆ ರಾಷ್ಟ್ರಭಕ್ತರ ಬಳಗ35 ವಾರ್ಡ್ ಗಳಲ್ಲೂ ರಾಷ್ಟ್ರಭಕ್ತ ಅಭ್ಯರ್ಥಿಗಳು

ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;

ಕೂಡಲೇ ಮಹಾನಗರ ಪಾಲಿಕೆ ಚುನಾವಣೆ ನಡೆಸಿ

ಬಹುಮತ ಪಡೆಯಲಿದೆ ರಾಷ್ಟ್ರಭಕ್ತರ ಬಳಗ

35 ವಾರ್ಡ್ ಗಳಲ್ಲೂ ರಾಷ್ಟ್ರಭಕ್ತ ಅಭ್ಯರ್ಥಿಗಳು

ಸುಪ್ರೀಂ ಕೋರ್ಟ್ ಜಡ್ಜ್ ಮೆಂಟ್ ನಂತರ ಶಿವಮೊಗ್ಗ ಸೇರಿದಂತೆ ಮೂರೂ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ಕೂಡ ಚುನಾವಣೆ ಮಾತಾಡಿದೆ. ಕೂಡಲೇ ಚುನಾವಣೆ ಮಾಡಬೇಕು. ತಕ್ಷಣ ಆಯೋಗ ನೋಟಿಫಿಕೇಷನ್ ಮಾಡಬೇಕು.

ರಾಷ್ಟ್ರಭಕ್ತ ಬಳಗದಿಂದ 35 ವಾರ್ಡ್ ಗಳಲ್ಲೂ ಅಭ್ಯರ್ಥಿ ಹಾಕ್ತಿದೀವಿ. ಮೀಸಲಾತಿ ಯಾವುದೇ ಇದ್ದರೂ ಅಭ್ಯರ್ಥಿಗಳ ಸ್ಪರ್ಧೆ. ರಾಜ್ಯ ಸರ್ಕಾರ ಕೂಡ ಗಂಭೀರವಾಗಿ ತೆಗೆದುಕೊಳ್ಳಬೇಕು.

ಚುನಾವಣಾ ಪ್ರತಿನಿಧಿಗಳ ಕೈಯಲ್ಲಿ ಆಡಳಿತವಿರಬೇಕು. ಕೂಡಲೇ ಚುನಾವಣೆ ಮಾಡಬೇಕು. ವರ್ಷವಾದರೂ ಡಿ ಲಿಮಿಟೇಷನ್ ಮಾಡಿಲ್ಲ. ಸಮಯ ಕೊಲ್ಲಲಾಗುತ್ತಿದೆ. ಜನರ ಕೆಲಸ ಮಾಡಿದವರೇ ಅಭ್ಯರ್ಥಿಯಾಗಲಿದ್ದಾರೆ.

ಹಿಂದುತ್ವಕ್ಕೆ ಮೊದಲ ಸ್ಥಾನ.ಮುಸ್ಲೀಮರೊಬ್ಬರಿಗೂ ಅಭ್ಯರ್ಥಿಯಾಗಿಸೋಲ್ಲ. ಕಟ್ಟಡ ಕಾರ್ಮಿಕರು, ಬಡ ಜನರ ಬೆಂಬಲ ಅಗಾಧವಾಗಿದೆ.

ಬಿಜೆಪಿ ಸ್ಥಿತಿ ಚಿಂತಾಜನಕವಾಗಿದೆ. ಕೆಎಂಎಫ್, ಡಿಸಿಸಿ ಬ್ಯಾಂಕ್ ಬಿಜೆಪಿ ಹಿನ್ನೆಡೆಯಾಕಾಯ್ತು? ಸಂಸದರು ಅರ್ಥ ಮಾಡಿಕೊಳ್ಳಬೇಕು. ಆಶ್ಚರ್ಯದ ಅಭ್ಯರ್ಥಿಗಳು ಮಹಾನಗರ ಪಾಲಿಕೆಯಲ್ಲಿ ರಾಷ್ಟ್ರಭಕ್ತರ ಬಳಗದಿಂದ ಸ್ಪರ್ಧಿಸಲಿದ್ದಾರೆ.

ಯುದ್ಧಕ್ಕೆ ಇಳಿಯುವವರು ಎಲ್ಲದಕ್ಕೂ ಸಿದ್ಧರಿರಬೇಕು. ಮಹಾನಗರ ಪಾಲಿಕೆಯಲ್ಲಿ ರಾಷ್ಟ್ರಭಕ್ತ ಅಭ್ಯರ್ಥಿಗಳು ಬಹುಮತ ಪಡೆಯಲಿದ್ದಾರೆ.

ಇ.ವಿಶ್ವಾಸ್, ಶಂಕರ್ ಗನ್ನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.