*ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ;* *ಭದ್ರಾವತಿಯ ಬಿ.ಕೆ.ಮೋಹನ್ ಹೆಸರು ಮುಂಚೂಣಿಯಲ್ಲಿ…*
*ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ;*
*ಭದ್ರಾವತಿಯ ಬಿ.ಕೆ.ಮೋಹನ್ ಹೆಸರು ಮುಂಚೂಣಿಯಲ್ಲಿ…*
ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾದಿಯ ರೇಸಿನಲ್ಲಿ ಭದ್ರಾವತಿಯ ಬಿ.ಕೆ.ಸಂಗಮೇಶ್ ಕೂಡ ಮುಂಚೂಣಿಯಲ್ಲಿದ್ದಾರೆ.
ಭದ್ರಾವತಿ ನಗರಸಭೆಯ ಮಾಜಿ ಅಧ್ಯಕ್ಷರೂ ಆಗಿರುವ, ಹಾಲಿ ಕೌನ್ಸಿಲರ್ ಬಿ.ಕೆ.ಮೋಹನ್ ರವರ ರಾಜಕಾರಣವೇ ಬೇರೆ ಥರದ್ದು. *ಸರ್ವಜನರ ಮೋಹನಣ್ಣ* ಎಂದೇ ಮನೆ ಮಾತಾಗಿರುವ ಬಿ.ಕೆ.ಮೋಹನ್ ರವರ ಮೇಲೆ ಭದ್ರಾವತಿ ಕ್ಷೇತ್ರದ ಶಾಸಕರಾದ ಬಿ.ಕೆ.ಸಂಗಮೇಶ್ ಎಂಬ ಆಲದ ಮರದ ನೆರಳ ಕೆಳಗೇ ಭಿನ್ನವಾಗಿ ಜನರೊಂದಿಗೆ ಗುರುತಿಸಿಕೊಳ್ಳುತ್ತಾ ಬಂದಿರುವ ಮೋಹನ್ ರವರ ಹೆಸರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾದಿಯ ಸುತ್ತ ಸುತ್ತುತ್ತಿದೆ.
ಭದ್ರಾವತಿಯಲ್ಲಿ ಏರಿಯಾವೊಂದರ ಕೌನ್ಸಿಲರ್ ಆಗಿದ್ದರೂ ಇಡೀ ಭದ್ರಾವತಿಯ ಆಗು ಹೋಗುಗಳ ಬಗ್ಗೆ, ಸಮಸ್ಯೆಗಳ ಬಗ್ಗೆ ವಿಶೇಷ ತಿಳುವಳಿಕೆ ಮೋಹನ್ ರವರಿಗಿದೆ. ಜನರ ಜೊತೆಯೇ ಸದಾ ಇರುವ ಮೋಹನ್ ರವರಿಗೆ ಜನರ ನೋವುಗಳಿಗೆ, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದೆಂದರೆ ಎಲ್ಲಿಲ್ಲದ ಕಾಳಜಿ. ಹಾಗಾಗಿ, ಜನ ಕೂಡ ಮೋಹನ್ ರವರನ್ನು ಇಷ್ಟ ಪಡುತ್ತಾರೆ.
ಭದ್ರಾವತಿಯ ಸರ್ಕಾರಿ ಇಲಾಖೆಗಳನ್ನು ಜನಸೇವಾ ಕೇಂದ್ರವಾಗಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಾ ಬಂದಿರುವ ಬಿ.ಕೆ.ಮೋಹನ್ ಸ್ಬೂಡಾ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸ್ವತಃ ಈ ವಿಚಾರವನ್ನು ಮೋಹನ್ ರವರು ಹೇಳುತ್ತಿಲ್ಲವಾದರೂ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ನೋಡಲಿಚ್ಛಿಸುವ, ಅದಕ್ಕಾಗಿ ಪ್ರಯತ್ನಿಸುತ್ತಿರುವ ಪ್ರಭಾವಿಗಳ ದೊಡ್ಡ ಬಳಗವೇ ಇದೆ.
ಅಂದಹಾಗೆ, ಸ್ಬೂಡಾ ಅಧ್ಯಕ್ಷ ಸ್ಥಾನ ಇದೇ ಫೆ.28 ರಂದು ತೆರವಾಗಲಿದೆ.


