ಕವಿಸಾಲು

*ಕವಿಸಾಲು*

ಅವನು
ರಾಮನ ಪ್ರಸಾದವೂ
ಸ್ವೀಕರಿಸುತ್ತಿದ್ದ,
ರಹೀಮನ ಪಾಯಸವನ್ನೂ
ಚಪ್ಪರಿಸುತ್ತಿದ್ದ!

ಕೇಳಿದೆ-
ಯಾವುದು ನಿನ್ನ ಧರ್ಮ?

ಹಸಿದಿದ್ದೇನೆ ದೊರೆಯೇ,
ಅದ ನೀಗಿಸುವುದೇ
ಧರ್ಮ ತನ್ನದೆಂದ!

ಧರ್ಮಗಳೆಲ್ಲ
ನಾಚಿ
ನೀರಾದುದ ಕಂಡೆ…

– *ಶಿ.ಜು.ಪಾಶ*
8050112067