ತೀರ್ಥಹಳ್ಳಿ ತುಂಬಾ ಗುಣಶೇಖರನ ಮರಳು ಮಾಫಿಯಾ!ಎಲ್ಲಿಂದ, ಹೇಗೆ ತಲುಪುತ್ತೆ ಶಿವಮೊಗ್ಗಕ್ಕೆ ಮರಳು?ಯಾರೆಲ್ಲ ಪ್ರಾಮಾಣಿಕರು? ಯಾರಿಗೆಲ್ಲ ಎಷ್ಟು ತಲುಪುತ್ತೆ?ದಿನಾರಾತ್ರಿ ಶಿವಮೊಗ್ಗಕ್ಕೆ ಬರುವ ಅಕ್ರಮ ಮರಳೆಷ್ಟು? ಚೆಕ್ ಪೋಸ್ಟ್ ಗಳಲ್ಲಿ ವಸೂಲಾಗುವ ಅಕ್ರಮ ಶುಲ್ಕವೆಷ್ಟು?
ತೀರ್ಥಹಳ್ಳಿ ತುಂಬಾ ಗುಣಶೇಖರನ ಮರಳು ಮಾಫಿಯಾ!
ಎಲ್ಲಿಂದ, ಹೇಗೆ ತಲುಪುತ್ತೆ ಶಿವಮೊಗ್ಗಕ್ಕೆ ಮರಳು?
ಯಾರೆಲ್ಲ ಪ್ರಾಮಾಣಿಕರು? ಯಾರಿಗೆಲ್ಲ ಎಷ್ಟು ತಲುಪುತ್ತೆ?
ದಿನಾರಾತ್ರಿ ಶಿವಮೊಗ್ಗಕ್ಕೆ ಬರುವ ಅಕ್ರಮ ಮರಳೆಷ್ಟು? ಚೆಕ್ ಪೋಸ್ಟ್ ಗಳಲ್ಲಿ ವಸೂಲಾಗುವ ಅಕ್ರಮ ಶುಲ್ಕವೆಷ್ಟು?
ತೀರ್ಥಹಳ್ಳಿ ಅಕ್ರಮ ಮರಳು ಮಾಫಿಯಾದಲ್ಲಿ ಮುಳುಗಿದೆ. ಪ್ರಾಮಾಣಿಕ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರಂಥವರನ್ನೇ ಯಾಮಾರಿಸಿ ಈ ಅಕ್ರಮ ಮರಳು ಮಾಫಿಯಾ ನಡೆಯುತ್ತಿರುವುದು ದುರಂತವೇ ಸೈ.
ಗುಣಶೇಖರ ಎಂಬ ಬಡ್ಡಿ ವ್ಯವಹಾರದ ಆಸಾಮಿ ಅಕ್ರಮ ಮರಳು ಸಾಗಾಟಕ್ಕಿಳಿದಿದ್ದೇ ತಡ ಜಿಲ್ಲಾಡಳಿತವೇ ಕೈ ಕಾಲು ಮುರಿದುಕೊಂಡು ಬಿದ್ದಿದೆ. ಇಲ್ಲಿನ ಕೆಲವೊಂದು ಮಾಹಿತಿಗಳು ಪ್ರಾಮಾಣಿಕವಾಗಿಯೇ ಉಳಿದುಕೊಂಡಿರುವ ಡಿಸಿ, ಎಸ್ ಪಿ ಯವರಿಗೇ ಆಶ್ಚರ್ಯ ಮೂಡಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಇಡೀ ಜಿಲ್ಲಾಡಳಿತ ಗುಣಶೇಖರನ ಅಕ್ರಮ ಮರಳು ಸಾಗಾಟದ ಮಾಫಿಯಾಕ್ಕೆ ಕಡಿವಾಣ ಹಾಕುತ್ತಿಲ್ಲವೇಕೆ? ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಗಂಭೀರವಾಗಿದೆ.
ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆಯೂ ಮರಳನ್ನು ಅಕ್ರಮವಾಗಿ ಬಾಚಿ ಲಾರಿ, ಟಿಪ್ಪರ್ ಗಳಲ್ಲಿ ಬೇರೆ ಬೇರೆ ಕಳ್ಳ ಮಾರ್ಗಗಳ ಮೂಲಕ ಶಿವಮೊಗ್ಗಕ್ಕೆ ತಲುಪಿಸಲಾಗುತ್ತಿದೆ. ಪ್ರತಿ ರಾತ್ರಿ 10 ಗಂಟೆಯಿಂದ ಬೆಳಗಿನವರೆಗೆ ನಡೆಯುವ ಈ ಅಕ್ರಮ ಮರಳು ಸಾಗಾಟದ ಕೆಲಸದಲ್ಲಿ ಯಾವ ಯಾವ ಚೆಕ್ ಪೋಸ್ಟ್ ಗಳಲ್ಲಿ ಎಷ್ಟೆಷ್ಟು ಮಾಮೂಲಿ ವಸೂಲು ಮಾಡಲಾಗುತ್ತದೆಂದು ಗುಣಶೇಖರನ ಚೆಡ್ಡಿ ಒದ್ದೆ ಮಾಡಿದರೆ ಅವನೇ ಮಾಹಿತಿ ಕಕ್ಕುತ್ತಾನೆ!
ಮಂಡಗದ್ದೆಯಲ್ಲಿ ಅಕ್ರಮ ಮರಳಿಗೆ ಅವಕಾಶವನ್ನೇ ಮಾಡಿಕೊಡಬಾರದೆಂದು ಅಲ್ಲಿ ದಿನದ 24 ಗಂಟೆಯೂ ಪೊಲೀಸ್ ವಾಹನ ನಿಲ್ಲುವಂತೆ ವ್ಯವಸ್ಥೆ ಮಾಡಲಾಗಿದೆ. ಆ ಪೊಲೀಸ್ ವಾಹನ( ka 14, g 1539) ಮಂಡಗದ್ದೆಯ ಮರಳಿನ ಕಳ್ಳರ ಮೇಲಷ್ಟೇ ನಿಗಾವಹಿಸಿ ನಿಂತಿದೆ. ಈ ವಾಹನದ ಮುಂದೆಯೇ, ಬೇರೆ ಬೇರೆ ಕಡೆಯಿಂದ ಕದ್ದ ಮರಳು ಸಾಗಿಸುವ ವಾಹನಗಳು ಸಾಗುತ್ತಿದ್ದರೂ ಈ ವಾಹನದಲ್ಲಿರುವ ಪೊಲೀಸರು ಗಪ್ ಚುಪ್!
ಗುಣಶೇಖರ ತಮಿಳುನಾಡು ಮೂಲದ ವ್ಯಕ್ತಿ. ಕಳೆದ ಮೂರು ವರ್ಷಗಳ ಹಿಂದೆ ಒಂದು ಟಿಪ್ಪರ್ ತಂದು ಮರಳಿನ ಅಕ್ರಮಕ್ಕಿಳಿದಿದ್ದೇ ತಡ ಈಗ ಎಲ್ಲರೂ ಝಣ ಝಣ ಕಾಂಚಾಣದಲ್ಲಿ ಮೈಮರೆತಿದ್ದಾರೆ. ಗುಣಶೇಖರನ S R D ಹೆಸರಿನ ಲಾರಿ/ ಟಿಪ್ಪರ್ ಗಳು ಕಳ್ಳ ದಾರಿಯಲ್ಲಲ್ಲ, ಮುಖ್ಯ ರಸ್ತೆಗಳಲ್ಲಿ ಚಲಿಸಿದರೂ ಇಲಾಖೆಗಳ ಸಿಬ್ಬಂದಿ ಮುಟ್ಟುವಂತಿಲ್ಲವೆಂದರೆ, ಗುಣಶೇಖರ ಹಂಚುತ್ತಿರುವ ಝಣ ಝಣ ಯಾವ ಲೆಕ್ಕದ್ದೆಂದು ಅಂದಾಜಿಸುವವರು ಅಂದಾಜಿಸಬಹುದು. ಆರು ಲಕ್ಷದ ವರೆಗೆ ಹಣದ ವಾಸನೆ ತೋರಿಸಿ ಈ ಕೋಟೆ ಕಟ್ಟಿದ್ದೇನೆಂದು ಸ್ವತಃ ಗುಣಶೇಖರನೇ ಹೇಳಿಕೊಂಡು ಓಡಾಡುತ್ತಾನೆಂದು ಅದೇ ಮಾಫಿಯಾದೊಳಗಿರುವವರ ಮಾತು. ಫಾರೆಸ್ಟ್ ಗೇಟ್ ಗಳ ಬಳಿಯೇ ನಡೆಯುತ್ತೆ ವ್ಯವಹಾರ. ಫಾರೆಸ್ಟರ್ ಗೆ ಅಕ್ರಮ ಮರಳಿನ ಲಾರಿಯೊಂದಕ್ಕೆ 1 ಸಾವಿರ ಕೊಡಲೇಬೇಕು. ಫಾರೆಸ್ಟ್ ರೇಂಜರಿಗೆ 30,000₹ ಗಳ ಘಮಘಮ ತಾಕಲೇಬೇಕೆಂದು ಮೂಲಗಳು ಹೇಳುತ್ತಿವೆ.
ತೀರ್ಥಹಳ್ಳಿಯಿಂದ ಬೆಜ್ಜವಳ್ಳಿ, ಹಣಗೆರೆ, ಆಯನೂರಿನ ಮೂಲಕ ಶಿವಮೊಗ್ಗಕ್ಕೆ ತಲುಪುವ ಗುಣಶೇಖರನ S R D ಅಕ್ರಮ ಮರಳಿನ ವಾಹನಗಳು ಈ ಮಾರ್ಗ ತೊಂದರೆ ಎನಿಸಿದಾಗ ಮತ್ತೊಂದು ಮಾರ್ಗದ ಮೂಲಕವೂ ಶಿವಮೊಗ್ಗ ತಲುಪುತ್ತವೆ!
ಹೊಸನಗರ ತಾಲ್ಲೂಕಿನ ನಗರ ರಸ್ತೆಯಲ್ಲಿ ಆರಗ, ಗುಡ್ಡೆಕೊಪ್ಪ, ಬೆಜ್ಜವಳ್ಳಿ, ಮಹಿಷಿ, ಮುತ್ತಿನ ಕೊಪ್ಪ, ಉಂಬಳೇ ಬೈಲಿಗೆ ಬಂದು ಅಲ್ಲಿನ ತಪಾಸಣಾ ಗೇಟ್ ಮೂಲಕವೇ ಯಾವುದೇ ತೊಂದರೆ ಇಲ್ಲದೇ ಶಿವಮೊಗ್ಗ ತಲುಪುತ್ತವೆ. ಇಲ್ಲಿ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವದವರೆಗೆ ಅಕ್ರಮ ಮರಳಿನ ಗುಣಶೇಖರನ ಜಗತ್ತು ತೆರೆದುಕೊಂಡಿರುತ್ತದೆ.
ತೀರ್ಥಹಳ್ಳಿಯಲ್ಲಿ 29 ಮರಳಿನ ಕ್ವಾರೆಗಳಿವೆ. ಯಾವ ಕ್ವಾರೆಗೂ ಜಿಲ್ಲಾಡಳಿತ ಅನುಮತಿ ಕೊಟ್ಟಿಲ್ಲ; ಅಂದರೆ, ಬಂದ್ ಇವೆ. ಹಾಗಂತ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿದುಕೊಂಡಂತಿದೆ. ಈ ಕ್ವಾರೆಗಳಿಂದಲೇ ಅಕ್ರಮ ಮರಳಿನ ಲೂಟಿ ನಡೆಯುತ್ತಿದೆ! ಬಹಳ ವಿಶೇಷವೆಂದರೆ, ಮಾಳೂರಿನ ಮೇಲೆ ಸಾಗುವ ಕೆಲ ಅಕ್ರಮ ಮರಳಿನ ಲಾರಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ಪೊಲೀಸರು ದಾಳಿ ಮಾಡಿ ಬೇಟೆಯಾಡುತ್ತಾರೆ! ಇತ್ತೀಚೆಗೆ ತಾಜಾ ಘಟನೆಯೊಂದು ಇಂಥದ್ದು ನಡೆದಿದೆ.
10 ಸಾವಿರ ರೂ.,ಗಳನ್ನು ಖರ್ಚು ಮಾಡಿದರೆ ಒಂದು ಲಾರಿ ಲೋಡು ಮರಳು ಸಿಗುತ್ತೆ. ಆ ನಂತರ ಖರ್ಚು ಅಂತ ಬರೋದೇ ಗಣಿ, ಫಾರೆಸ್ಟ್, ಪೊಲೀಸ್, ಪ್ರೆಸ್ ನವರಿಗೆ ಸಾಕೋದು!
ಗುಣಶೇಖರನದೇ ದಿನವೊಂದಕ್ಕೆ ಕನಿಷ್ಠ 25 ಲಾರಿಗಳು ಅಕ್ರಮ ಮರಳು ಸಾಗಿಸುತ್ತಿವೆ ಎಂಬ ಮಾಹಿತಿ ಸಂಬಂಧಿಸಿದ ಇಲಾಖೆಗಳಿಗೆಲ್ಲ ಗೊತ್ತಿರುವಂಥದ್ದೇ. ದುರಂತವೆಂದರೆ, ಜಿಲ್ಲಾಡಳಿತವಾಗಲಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಾಗಲೀ ಒಂದೇ ಒಂದು ಲೋಡ್ ಮರಳು ಹೊರಕ್ಕೆ ಒಯ್ಯಲು ಅನುಮತಿಯನ್ನೇ ಕೊಟ್ಟಿಲ್ಲ!!
ಆದರೂ, ಮರಳು ಲೂಟಿಯಾಗುತ್ತಿದೆ!!
– *ಶಿ.ಜು.ಪಾಶ*
8050112067