ಕವಿಸಾಲು
01
ಜೆಸಿಐ ಶಿವಮೊಗ್ಗ ಬೆಳ್ಳಿ ಅಧ್ಯಕ್ಷರಾಗಿ ಶಿಲ್ಪಾ ಜಗದೀಶ್ ಅಧಿಕಾರ ಸ್ವೀಕಾರ*
*ಜೆಸಿಐ ಶಿವಮೊಗ್ಗ ಬೆಳ್ಳಿ ಅಧ್ಯಕ್ಷರಾಗಿ ಶಿಲ್ಪಾ ಜಗದೀಶ್ ಅಧಿಕಾರ ಸ್ವೀಕಾರ*
ಜೆಸಿಐ ಶಿವಮೊಗ್ಗ ಬೆಳ್ಳಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಜೆಸಿ ಶಿಲ್ಪಾ ಜಗದೀಶ್ ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು.
ನಗರದ ರೋಟರಿ ಬ್ಲಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜೆಸಿ ಶಿಲ್ಪಾ ಜಗದೀಶ್ ಅಧ್ಯಕ್ಷರಾಗಿ, ಜೆಸಿ ಧನಲಕ್ಷ್ಮೀ ಕಾರ್ಯದರ್ಶಿಯಾಗಿ, ಜೆಸಿ ಅನುಷಾ ಸಂಘಟನಾ ಕಾರ್ಯದರ್ಶಿಯಾಗಿ, ಜೆಸಿ ಎಂ.ಲಕ್ಷ್ಮೀ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು.
ವಿವಿಧ ಇಲಾಖೆಗಳ ಉಪಾಧ್ಯಕ್ಷರಾಗಿ ರೇಖಾ, ಸರೋಜಾ, ಮೇಘನಾ ವಿಕಾಸ್, ಪ್ರಶಾಂತ್, ಸಂತೋಷ್, ಎಸ್.ದರ್ಶನ್ ಹಾಗೂ ಸಂಚಾಲಕರಾಗಿ ಸಿ.ಕವಿತಾ ಅಧಿಕಾರ ಸ್ವೀಕರಿಸಿದರು.
“ನಾನು ಮತ್ತು ನನ್ನ ತಂಡ ಹೊಸ ಘಟಕ ಒಂದನ್ನು ಸ್ಥಾಪಿಸಿ ಸಾಧನೆಯ ಮೊದಲನೇ ಮೆಟ್ಟಿಲೇರಲು ಸಜ್ಜಾಗಿದ್ದೇವೆ. ತಾವೆಲ್ಲರೂ ಮುಂದಿನ ಸಾಧನೆಯ ಪಯಣಕ್ಕೆ ಪ್ರೋತ್ಸಾಹ ತುಂಬಿ ಸದಾ ನಮ್ಮ ಜೊತೆಗಿದ್ದು ಉತ್ಸಾಹ ನೀಡಬೇಕೆಂದು ಅಧ್ಯಕ್ಷೆ ಜೆಸಿ ಶಿಲ್ಪಾ ಜಗದೀಶ್ ಕೋರಿದರು.