ಭತ್ತ ಬೆಳೆಯುವ ವಿಧಾನಗಳು*- ಪ್ರಾತ್ಯಕ್ಷಿಕೆ

*ಭತ್ತ ಬೆಳೆಯುವ ವಿಧಾನಗಳು*- ಪ್ರಾತ್ಯಕ್ಷಿಕೆ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸ ಗೊದ್ದನಕೊಪ್ಪ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ‌ ಕಾರ್ಯಾನುಭವ ಕಾರ್ಯಕ್ರಮದಡಿ *ಭತ್ತ ಬೆಳೆಯುವ ವಿಧಾನಗಳು* ವಿಷಯದ ಮೇಲೆ ಗುಂಪು ಚರ್ಚೆ ಹಾಗೂ *ಎಸ್ ಆರ್ ಐ ಪದ್ಧತಿಯ ಭತ್ತ* ಎನ್ನುವುದರ ಮೇಲೆ ಪದ್ಧತಿ ಪ್ರಾಥಕ್ಷಿಕೆಯನ್ನು ಹಮ್ಮಿಕೊಂಡಿದ್ದರು.
ವಿದ್ಯಾರ್ಥಿಗಳು ಗ್ರಾಮದ ರೈತರನ್ನು ತಮ್ಮ ಬೆಳೆಯ ಸಂಗ್ರಹಾಲಯಕ್ಕೆ ಕರೆದುಕೊಂಡು ಹೋಗಿ, ಭತ್ತ ಬೆಳೆಯುವ ವಿವಿಧ ಬಗೆಗಳನ್ನು ತಿಳಿಸಿಕೊಟ್ಟರು.
*೧.ಕೆಸರಿನಲ್ಲಿ ಬತ್ತ ಬೆಳೆಯುವುದು.*
ಇದರಲ್ಲಿ ಭತ್ತವನ್ನು 21 ದಿನಗಳ ಕಾಲ ಏರು ಮಡಿ ಮಾಡಿ ಭತ್ತದ ಗಿಡಗಳನ್ನು ಬೆಳೆಸಿಕೊಳ್ಳುತ್ತಾರೆ. ನಂತರ ಕೆಸರು ಗದ್ದೆಯಲ್ಲಿ ನಾಟಿ ಮಾಡುತ್ತಾರೆ.
*೨.ಡಿಎಸ್ಆರ್ ಭತ್ತ.*
ಇದರಲ್ಲಿ ಭತ್ತವನ್ನು ಬೀಜಗಳನ್ನು ನೇರವಾಗಿ ಗದ್ದೆಗೆ ಹಾಕುತ್ತಾರೆ. ಈ ರೀತಿ ಬೆಳೆಯುವುದರಿಂದ ಕೂಲಿಯ ವೆಚ್ಚ ಕಡಿಮೆ ಮಾಡಬಹುದು ಹಾಗೂ ಭತ್ತವು ಬೇಗ ಕಟಾವಿಗೆ ಬರುತ್ತದೆ. ಆದರೆ ಇದರಲ್ಲಿ ಕಳೆಗಳ ನಿರ್ವಹಣೆ ಕಷ್ಟಕರವಾಗಿರುತ್ತದೆ.
*೩.ಎಸ್ ಆರ್ ಐ ಭತ್ತ.* *(ಸಿಸ್ಟಂ ಆಫ್ ರೈಸ್ ಇಂಟೆನ್ಸಿಫಿಕೇಶನ್)*
ಈ ಬಗೆಯಲ್ಲಿ 8-14 ದಿನಗಳ ಭತ್ತದ ಗಿಡಗಳನ್ನು (ಏರು ಮಡಿಯಲ್ಲಿ) 25*25 ಸಮ ಅಂತರದಲ್ಲಿ ಗದ್ದೆಗೆ ನಾಟಿ ಮಾಡುತ್ತಾರೆ.ಈ ವಿಧಾನದಲ್ಲಿ ಸಾಮಾನ್ಯವಾಗಿ ಭತ್ತ ಬೆಳೆಯಲು ಬೇಕಿರುವ ನೀರಿಗಿಂತ 15 ರಿಂದ 20% ಅಂತರ್ಜಲವನ್ನು ಉಳಿಸುವುದರ ಜೊತೆಗೆ ಅಕ್ಕಿ ಉತ್ಪಾದಕತೆಯನ್ನು
ಸುಧಾರಿಸುತ್ತದೆ.
ವಿದ್ಯಾರ್ಥಿಗಳು ರೈತರಿಗೆ *ಎಸ್ ಆರ್ ಐ* ಭತ್ತವನ್ನು ಯಾವ ರೀತಿ ನಾಟಿ ಮಾಡಬೇಕು ಎಂದು ಗದ್ದೆಗೆ ನಾಟಿ ಮಾಡಿ ತೋರಿಸಿಕೊಟ್ಟರು. ಸಿಸ್ಟಂ ಆಫ್ ರೈಸ್ ಇಂಟೆನ್ಸಿಫಿಕೇಶನ್ (ಎಸ್‌ಆರ್‌ಐ) ಸಸ್ಯಗಳು, ಮಣ್ಣು, ನೀರು ಮತ್ತು ಪೋಷಕಾಂಶಗಳ ನಿರ್ವಹಣೆಯನ್ನು ಬದಲಾಯಿಸುವ ಮೂಲಕ ವಿಶೇಷವಾಗಿ ಹೆಚ್ಚಿನ ಬೇರಿನ ಬೆಳವಣಿಗೆಯನ್ನು ಉಂಟುಮಾಡುವ ಮೂಲಕ ನೀರಾವರಿ ಅಕ್ಕಿಯ ಉತ್ಪಾದಕತೆಯನ್ನು ಹೆಚ್ಚಿಸುವ ಒಂದು ವಿಧಾನವಾಗಿದೆ.