ಕೃಷಿ ವಿದ್ಯಾರ್ಥಿಗಳಿಂದ ಸೈಲೇಜ್ ತಯಾರಿಕೆ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆ

ಕೃಷಿ ವಿದ್ಯಾರ್ಥಿಗಳಿಂದ ಸೈಲೇಜ್ ತಯಾರಿಕೆ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆ

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾಯಾ೯ನುಭವ ಕಾಯ೯ಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ‘ಸೈಲೇಜ್ ತಯಾರಿಕೆ’ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದರು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೈಲೇಜ್ ಎಂದರೇನು, ಅದನ್ನು ತಯಾರಿಸುವ ವಿಧಾನ, ಅದರಲ್ಲಿರುವ ಪೋಷಕಾಂಶಗಳ ವಿವರ, ಅದರ ಶೇಖರಣೆ ಮತ್ತು ಪಶುಪಾಲನೆಯಲ್ಲಿ ಅದರ ಬಳಕೆ ಕುರಿತು ಗುಂಪು ಚಚೆ೯ಯನ್ನು ನಡೆಸಿದರು. ನಂತರ ಕತ್ತರಿಸಿದ ಹುಲ್ಲು, ಬೆಲ್ಲ, ಉಪ್ಪು, ಯೂರಿಯ ಬಳಸಿ ಸೈಲೇಜ್ ತಯಾರಿಕೆಯ ಪದ್ಧತಿ ಪ್ರಾತ್ಯಕ್ಷಿಕೆ ಮಾಡಿದರು. ಸೈಲೇಜ್ ಮಾಡಲು ಸೂಕ್ತವಾದ ಹುಲ್ಲು ಜಾತಿ, ತಳಿ, ಹೈಬ್ರಿಡ್ ಮತ್ತು ಸೈಲೇಜ್ ಅನ್ನು ಜಾನುವಾರುಗಳಿಗೆ ತಿನ್ನಿಸುವ ರೀತಿ, ಪ್ರಮಾಣದ ಕುರಿತು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಊರಿನ ಜನರು ಸಕ್ರಿಯವಾಗಿ ಪಾಲ್ಗೊಂಡು ಕಾಯ೯ಕ್ರಮವನ್ನು ಯಶಸ್ವಿಗೊಳಿಸಿದರು.