ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ರಕ್ತದಾನ ಕೇಂದ್ರದಲ್ಲಿ
ಹುಡುಕಿದರು
ಜಾತಿ ಮತ ಪಂಥ…

ಅಲ್ಲಿ
ಮನುಷ್ಯತ್ವ
ಕಣ್ಣು ಕೊರೆಯುತ್ತಿತ್ತು
ಮಾನವೀಯತೆ ಮೆರೆಯುತ್ತಿತ್ತು…

2.
ಬಹಳ ಜನ
ಕಡು ಬಡವರನ್ನು ನೋಡಿದೆ;
ಕೆಲವರ ಬಳಿಯಂತೂ
ಹಣ ಬಿಟ್ಟರೆ
ಮತ್ತೇನೂ ಇರಲಿಲ್ಲ!

– *ಶಿ.ಜು.ಪಾಶ*
8050112067
(7/1/25)