ಆದಾಯ ಕೊಡುವ ಬಿದಿರು ಯಾವ ವಾಣಿಜ್ಯ ಬೆಳೆಗೂ ಕಡಿಮೆಯಿಲ್ಲ” : ಡಾ.ಮಹೇಶ್ವರಪ್ಪ ವಿ

ಆದಾಯ ಕೊಡುವ ಬಿದಿರು ಯಾವ ವಾಣಿಜ್ಯ ಬೆಳೆಗೂ ಕಡಿಮೆಯಿಲ್ಲ” : ಡಾ.ಮಹೇಶ್ವರಪ್ಪ ವಿ

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ , **ಅಖಿಲ ಭಾರತೀಯ ಕೃಷಿ ಅರಣ್ಯ ಸಮನ್ವಯ ಸಂಶೋಧನಾ ಯೋಜನೆ,* ಇರುವಕ್ಕಿ, ಮತ್ತು ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ.
ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಹಳೇಮುಗಳಗೆರೆ ಗ್ರಾಮದಲ್ಲಿ *ಬಿದಿರು ಸಸ್ಯಗಳ ಬೆಳೆಸುವಿಕೆ ತರಬೇತಿ* ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಆಯೋಜಕರಾದ ಕೃಷಿ ಅರಣ್ಯ ವಿಭಾಗದ ಪ್ರಾಧ್ಯಾಪಕರು ಡಾ. ಮಹೇಶ್ವರಪ್ಪ ಸರ್ ಮತ್ತು ಡಾ. ಸಿದ್ದಪ್ಪ ಕಣ್ಣೂರ್ ಸಹಾಯಕ ಪ್ರಾಧ್ಯಾಪಕರು ಕೃಷಿ ಅರಣ್ಯ ವಿಭಾಗ ಮತ್ತು ಅಥಿತಿಗಳಾಗಿ ಸಂಖ್ಯಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ಸತೀಶ್ ಸರ್ ಉಪಸ್ಥಿತರಿದ್ದರು.

ಆದಾಯ ಕೊಡುವ ಬಿದಿರು ಯಾವ ವಾಣಿಜ್ಯ ಬೆಳೆಗೂ ಕಡಿಮೆಯಿಲ್ಲ. ಅದರ ಪಾಡಿಗೆ ಅದು ಬೆಳೆಯುತ್ತದೆ. ರೋಗ ಕೀಟ ಬಾಧೆ ಸಮಸ್ಯೆ ಈ ಬೆಳೆಗಿಲ್ಲ. ಹಣ ಬೇಕಾದಾಗ ಬಿದಿರು ಕಡಿಯಬಹುದು. ಇಲ್ಲವಾದರೆ ಹಾಗೇ ಬಿಡಬಹುದು. ಬಿದಿರು ಬೇಸಾಯಕ್ಕೆ ಬಂಡವಾಳ ಬೇಕಿಲ್ಲ.
ನಾಟಿ ಮಾಡಿದ ನಾಲ್ಕು ವರ್ಷಗಳ ನಂತರ ಪ್ರತಿ ವರ್ಷವೂ ಬಿದಿರು ಕಟಾವು ಮಾಡಬಹುದು. ಸ್ಥಳೀಯ ಮಾರುಕಟ್ಟೆಯಲ್ಲೂ ಮಾರಾಟ ಮಾಡಲು ಸಾಧ್ಯ. ಮಾರಿಹಾಳ ಜಾತಿಯ ಬಿದಿರು ಬುಟ್ಟಿ ಮಾಡಲು ಬಳಕೆಯಾಗುತ್ತದೆ. ಮುಳ್ಳು ರಹಿತ. ಈ ಜಾತಿಯ ಬಿದಿರನ್ನು ಮೇದಾರರು ಹೆಚ್ಚು ಖರೀದಿಸುತ್ತಾರೆ.20 ರಿಂದ 25 ಅಡಿಯ ಒಂದು ಬಿದಿರಿಗೆ 100 ರೂ.ಬೆಲೆ ಸಿಗುತ್ತದೆ.
*ಆದಾಯ ಜತೆ ಅನುಕೂಲ*
4 ವರ್ಷಗಳಿಂದ 45 ವರ್ಷಗಳ ವರೆಗೆ ನಿರಂತರ ಆದಾಯ ನೀಡುತ್ತದೆ. ಮಳೆ ಕೊರತೆಯಾಗಿ ಬೆಳೆಗಳು ಫಲ ಬಿಡದ ಸಂದರ್ಭದಲ್ಲಿ ಬಿದಿರು ಆದಾಯ ಕೊಡಬಲ್ಲದು.ತೋಟದ ಬದಿಯಲ್ಲಿ, ಬದುಗಳಲ್ಲಿ ಬಿದಿರು ಬೆಳೆಯುವುದರಿಂದ ಮಣ್ಣಿನ ಸವಕಳಿಯಾಗುವುದಿಲ್ಲ. ಬಿದಿರು ಇರುವಲ್ಲಿ ನೀರು ಭೂಮಿಯಲ್ಲಿ ಇಂಗಿ ತಂಪಿನ ವಾತಾವರಣ ನಿರ್ಮಾಣವಾಗುತ್ತದೆ. ಹಸಿರು ಸೃಷ್ಟಿಯಾಗುತ್ತದೆ.
ಮಾರಿಹಾಳ ಜಾತಿಯ ಬಿದಿರು ಗಟ್ಟಿಯಾಗಿರುವುದರಿಂದ ಬುಟ್ಟಿ ತಯಾರಿಕೆಗೆ ಹೆಚ್ಚು ಬಳಕೆಯಾಗುತ್ತದೆ.ಮಲೆನಾಡು ಮತ್ತು ಉತ್ತರ ಕರ್ನಾಟಕ ಎರಡೂ ಪ್ರದೇಶದಲ್ಲಿ ಈ ಜಾತಿಯ ಬಿದಿರು ಚೆನ್ನಾಗಿ ಬೆಳೆಯುತ್ತದೆ. ಮಾಲ್ಕಿ ಜಮೀನಿನಲ್ಲಿ ಬೆಳೆದ ಬಿದಿರನ್ನು ರೈತರೇ ಮಾರಾಟ ಮಾಡಬಹುದು. ಬಿದಿರು ಕಟಾವು ಮತ್ತು ಸಾಗಣೆ ಮಾಡಲು ಅರಣ್ಯ ಇಲಾಖೆಯ ಅನುಮತಿ ಅಗತ್ಯ ಎಂದು ರೈತರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ 100 ಜನ ಸೇರಿದ್ದರು ಎಲ್ಲರಿಗೂ ಎರೆಡೆರೆಡು ಬಿದಿರು ಸಸ್ಯಗಳನ್ನು ವಿತರಿಸಲಾಯಿತು.