*ಪೊಲೀಸರಿಂದ ಮಿಳಘಟ್ಟ ಸುತ್ತಮುತ್ತ ಏರಿಯಾ ಡಾಮಿನೇಷನ್* *4 ಜನ ಗಾಂಜಾ ಸೇವಕರ ಮೇಲೆ ಪ್ರಕರಣ ದಾಖಲು*
*ಪೊಲೀಸರಿಂದ ಮಿಳಘಟ್ಟ ಸುತ್ತಮುತ್ತ ಏರಿಯಾ ಡಾಮಿನೇಷನ್*
*4 ಜನ ಗಾಂಜಾ ಸೇವಕರ ಮೇಲೆ ಪ್ರಕರಣ ದಾಖಲು*
ಕಾನೂನು ಸುವ್ಯವಸ್ಥೆ ಕಾಪಾಡುವ ಸಂಬಂಧ ದೊಡ್ಡಪೇಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರದಂದು ರಾತ್ರಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಮಂಜುನಾಥ್ ಬಡಾವಣೆ, ಇಲ್ಯಾಸ್ ನಗರ, ಬುದ್ದ ನಗರ ಹಾಗೂ ಮಿಳ್ಳಘಟ್ಟ ಏರಿಯಾಗಳಲ್ಲಿ ಏರಿಯಾ ಡಾಮಿನೇಷನ್ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಗಾಂಜಾ ಸೇವನೆ ಮಾಡಿದ ಬಗ್ಗೆ ಅನುಮಾನ ಬಂದ ಒಟ್ಟು 8 ಜನ* ಆಸಾಮಿಗಳನ್ನು ಪೊಲೀಸ್ ಠಾಣೆ ಗೆ ಕರೆತಂದು ನಂತರ ಅವರನ್ನು ವೈದ್ಯಕಿಯ ಪರೀಕ್ಷೆಗೆ ಒಳಪಡಿಸಲಾಗಿ ಅದರಲ್ಲಿ ನಾಲ್ಕು ಜನರು ಮಾದಕ ವಸ್ತುವಾದ ಗಾಂಜಾವನ್ನು ಸೇವನೆ ಮಾಡಿರುವುದು ಧೃಡಪಟ್ಟಿದೆ.
ಈ ಆಸಾಮಿಗಳ ವಿರುದ್ದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಗಾಂಜಾ ಸೇವನೆ ಪ್ರಕರಣಗಳನ್ನು ದಾಖಲಿಸಲಾಗಿದೆ.


