*ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ* *ನ.30 ರಂದು ಫ್ರೀಡಂ ಪಾರ್ಕಲ್ಲಿ ಭಗವದ್ಗೀತಾ ಅಭಿಯಾನದ ಮಹಾ ಸಮರ್ಪಣೆ ಸಮಾರಂಭ* *350 ಶಾಲಾ ಕಾಲೇಜುಗಳಿಂದ 15 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಭಾಗಿ*
*ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ*
*ನ.30 ರಂದು ಫ್ರೀಡಂ ಪಾರ್ಕಲ್ಲಿ ಭಗವದ್ಗೀತಾ ಅಭಿಯಾನದ ಮಹಾ ಸಮರ್ಪಣೆ ಸಮಾರಂಭ*
*350 ಶಾಲಾ ಕಾಲೇಜುಗಳಿಂದ 15 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಭಾಗಿ*
ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಸೋಂದಾ, ಶಿರಸಿ ಇದರ ಪೀಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸಂಕಲ್ಪದಂತೆ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ರಾಜ್ಯಾದ್ಯಂತ ಶ್ರೀ ಭಗವದ್ಗೀತಾ ಅಭಿಯಾನದ ಪೂರ್ವ ತಯಾರಿ ನಡೆಯುತ್ತಿದ್ದು, ಇದರ ರಾಜ್ಯಮಟ್ಟದ “ಮಹಾಸಮರ್ಪಣೆ” ಯ ಸಮಾರಂಭವು ಇದೇ ನವೆಂಬರ್ 30ರ ಭಾನುವಾರದಂದು ಬೆಳಿಗ್ಗೆ 10:30 ಗಂಟೆಗೆ ಶಿವಮೊಗ್ಗ ನಗರದ ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್) ನಲ್ಲಿ ನಡೆಯಲಿದೆ ಎಂದು ಶ್ರೀ ಭಗವದ್ಗೀತಾ ಅಭಿಯಾನ- ಕರ್ನಾಟಕದ ಗೌರವಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಮಹಾಸಮರ್ಪಣಾ ಸಮಾರಂಭದ ಔದ್ವರ್ಯವನ್ನು ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ವಹಿಸಲಿದ್ದಾರೆ. ಅಲ್ಲದೇ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು, ಹರಿಹರಪುರ, ಪರಮಪೂಜ್ಯ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಶ್ರೀ ಶ್ರೀ ಮಲ್ಲಿಕಾರ್ಜುನ ಮುರಘರಾಜೇಂದ್ರ ಮಹಾಸ್ವಾಮಿಗಳು, ಮುರಘಮಠ ಮಹಾಸಂಸ್ಥಾನ, ಆನಂದಪುರ, ಬೆಕ್ಕಿನಕಲ್ಮಠ, ಶಿವಮೊಗ್ಗ ಮತ್ತು ಪರಮಪೂಜ್ಯ ಶ್ರೀ ಶ್ರೀ ನಾದಮಯನಂದನಾಥ ಮಹಾಸ್ವಾಮಿಗಳು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಶಿವಮೊಗ್ಗ ಇವರುಗಳು ತಮ್ಮ ದಿವ್ಯ ಸಾನಿಧ್ಯವನ್ನು ನೀಡಲಿದ್ದಾರೆ.
ಈ ಸಮಾರಂಭದ ಉದ್ಘಾಟನೆಯನ್ನು ಗೌರವಾನ್ವಿತ ಶ್ರೀ ರಾಜೇಂದ್ರ ವಿಶ್ವನಾಥ ಮುಖ್ಯ ಅರ್ಲೆಕರ್, ಘನವೆತ್ತ ರಾಜ್ಯಪಾಲರು, ಕೇರಳ ರಾಜ್ಯ ಇವರು ಮಾಡಲಿದ್ದಾರೆ. ಅತಿಥಿಗಳಾಗಿ ಭಾರತ ಸರ್ಕಾರದ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಬರಲಿದ್ದು ಗೀತಾ ಲಾವಣ್ಯ ಧ್ವನಿ ಮುದ್ರಿಕೆ ಬಿಡುಗಡೆ ಮಾಡಲಿದ್ದಾರೆ. ಸನ್ಮಾನ್ಯ ಶ್ರೀ ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು “ಸ್ವರ್ಣವಲ್ಲೀ ಪ್ರಭಾ” ಇದರ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ, ಶ್ರೀ ಮಧು ಬಂಗಾರಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಶ್ರೀ ಬಿ.ವೈ. ರಾಘವೇಂದ್ರ ಸಂಸದರು. ಶಿವಮೊಗ್ಗ ಕ್ಷೇತ್ರ, ಇವರುಗಳು ಭಾಗವಹಿಸಲಿದ್ದು ರಾಜ್ಯ ಮಟ್ಟದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ.
ಈ ಸಮಾರಂಭದಲ್ಲಿ ಸನ್ಮಾನ್ಯ ಶ್ರೀ ಕೆ.ಎಸ್. ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶ್ರೀ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷರು, ಸನ್ಮಾನ್ಯ ಶ್ರೀ ಡಿ.ಎಸ್. ಅರುಣ್, ಎಂ.ಎಲ್.ಸಿ. ಹಾಗೂ ಅಭಿಯಾನದ ಜಿಲ್ಲಾ ಸಮಿತಿಯ ಅಧ್ಯಕ್ಷರು ಹಾಗೂ ಅಭಿಯಾನದ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಅಶೋಕ್ ಜಿ. ಭಟ್, ಹಿರಿಯ ವಕೀಲರು ಗೌರವ ಉಪಸ್ಥಿತಿ ನೀಡಲಿದ್ದಾರೆ. ಈವರೆಗೆ ಶ್ರೀ ಭಗವದ್ಗೀತಾ ಅಭಿಯಾನಕ್ಕೆ ಸಂಬಂಧಪಟ್ಟು ಶಿವಮೊಗ್ಗ ಜಿಲ್ಲೆಯಾದ್ಯಂತ ಸರಿಸುಮಾರು 350 ಶಾಲಾ-ಕಾಲೇಜುಗಳಲ್ಲಿ 5ನೇ ತರಗತಿಯಿಂದ 10ನೇ ತರಗತಿ ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಅಂದರೆ ಸರಿಸುಮಾರು 15 ಸಾವಿರ
ವಿಶ್ವರೂಪದರ್ಶನದ ಎಲ್ಲಾ ಜಿಲ್ಲೆಯ ಸುಮಾರು 150 ಕ್ಕೂ ಸುಮಾರು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭಗವದ್ಗೀತೆಯ 11ನೇ ಅಧ್ಯಾಯವಾದ ಶ್ಲೋಕಗಳನ್ನು ಕಂಠಪಾಠ ಮಾಡಿಸಲಾಗಿದೆ. ಇದಲ್ಲದೇ ಈ ಹೆಚ್ಚು ದೇವಸ್ಥಾನಗಳಲ್ಲಿ ಭಗವದ್ಗೀತೆಯನ್ನು ಪಟಿಸಲಾಗಿದೆ. ಪ್ರಶಿಕ್ಷಣ ಶಿಬಿರವನ್ನು ನಡೆಸಲಾಗಿದ್ದು, ಸುಮಾರು 30 ಕ್ಕೂ ಹೆಚ್ಚು ಹಾಸ್ಟೆಲ್‌ಗಳಲ್ಲಿ ಭಗವದ್ಗೀತೆಯನ್ನು ಹೇಳಿಕೊಡಲಾಗಿದೆ. ಇದೇ ರೀತಿ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಭಗವದ್ಗೀತೆಯ ಪ್ರಶಿಕ್ಷಣ ಹಾಗೂ ಕಂಠಪಾರವನ್ನು ಮಾಡಲಾಗಿದ್ದು ಶ್ಲೋಕ ಕೇಂದ್ರಗಳು ಅಭಿಯಾನದ ಚಾಲನೆಯನ್ನು ಮುಂದುವರೆಸಿಕೊಂಡು ಬಂದಿರುತ್ತದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಸರಿಸುಮಾರು 15 ಕ್ಕೂ ಹೆಚ್ಚು ಸಪ್ತಾಹಗಳನ್ನು ನಡೆಸಲಾಗಿದೆ.
ದಿನಾಂಕ: 30.11.2025 ರಂದು ನಡೆಯುವ ಈ ಮಹಾ ಸಮರ್ಪಣಾ ಸಮಾರಂಭಕ್ಕೆ ಸುಮಾರು 15 ಸಾವಿರ ವಿದ್ಯಾರ್ಥಿಗಳು, 3 ಸಾವಿರ ಭಜನಾ ಮಂಡಳಿಯ ಮಾತೆಯರು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 25 ಸಾವಿರ ಜನರು ಭಾಗವಹಿಸಲಿದ್ದಾರೆ. ಭಗವದ್ಗೀತೆಯನ್ನು ಕಲಿತ ವಿದ್ಯಾರ್ಥಿಗಳು ಏಕಕಂಠದಲ್ಲಿ 9ನೇ ಅಧ್ಯಾಯವನ್ನು ಪಟಿಸಲಿದ್ದಾರೆ.
ಈಗಾಗಲೇ ತಾಲ್ಲೂಕು ಮಟ್ಟದಲ್ಲಿ ಭಗವದ್ಗೀತೆಗೆ ಸಂಬಂಧಿಸಿ ವಿವಿಧ ಸ್ಪರ್ಧಾವಳಿಯನ್ನು ನಡೆಸಿದ್ದು, ಈ ದಿನ ಜಿಲ್ಲಾ ಮಟ್ಟದ ಭಗವದ್ಗೀತೆಗೆ ಸಂಬಂಧಿಸಿದ ಸ್ಪರ್ಧಾವಳಿಯನ್ನು ನಡೆಸುತ್ತಿದ್ದು, ರಾಜ್ಯಮಟ್ಟದ ಸ್ಪರ್ಧೆಯು ದಿನಾಂಕಃ 29.11.2025 ರಂದು ನಡೆಯಲಿದೆ. ಇದಕ್ಕೆ ಸಂಬಂಧಿಸಿ ಬಹುಮಾನ ವಿತರಣೆಯನ್ನು ಮಹಾಸಮರ್ಪಣೆಯ ದಿನದಂದು ಮಾಡಲಾಗುವುದು.
ಐತಿಹಾಸಿಕ ಸಮಾರಂಭವೆನಿಸಲಿರುವ ಈ ಕಾರ್ಯಕ್ರಮದಲ್ಲಿ ಮಧ್ಯಾಹ್ನ 3:00 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಭಗವದ್ಗೀತಾ ಅಭಿಯಾನದ ಮೂಲ ಉದ್ದೇಶ ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಭಾವೈಕ್ಯವನ್ನು ಸಾಧಿಸುವುದಾಗಿದೆ. ಈ ಅಭಿಯಾನವು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿಯೂ ನಡೆಯುತ್ತಿದ್ದು, ಇದರ ರಾಜ್ಯಮಟ್ಟದ ಸಮಾರೋಪ ಸಮಾರಂಭವು ಈ ವರ್ಷ ಶಿವಮೊಗ್ಗದಲ್ಲಿ ನಡೆಯಲಿದೆ. ಸುಶ್ರಾವ್ಯ ಧ್ವನಿಯಲ್ಲಿ ಭಗವದ್ಗೀತೆಯ 11ನೇಯ ಅಧ್ಯಾಯದ ಶ್ಲೋಕಗಳನ್ನು ಶಾಲೆಗಳಲ್ಲಿ, ದೇವಸ್ಥಾನಗಳಲ್ಲಿ ಹಾಗೂ ವಿವಿಧ ಶ್ಲೋಕಕೇಂದ್ರಗಳಲ್ಲಿ ಹೇಳಿಕೊಡಲಾಗುತ್ತದೆ ಎಂದರು.
ಉಪಸ್ಥಿತಿ; ಕೆ.ಇ.ಕಾಂತೇಶ್, ಅಶೋಕ್ ಜಿ.ಭಟ್, ಪಿ.ಪಿ.ಹೆಗಡೆ, ಸುಧೀಂದ್ರ, ಲಕ್ಷ್ಮೀನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.


