*ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಪತ್ರಿಕಾಗೋಷ್ಠಿ* *ಭದ್ರಾವತಿ; ನವಲೇ ಬಸಾಪುರ ಗ್ರಾಮದಲ್ಲಿ ಬಡವರಿಗೆ ನಿವೇಶನ ನೀಡದೇ ನಿರ್ಲಕ್ಷ್ಯ* *ನ.24 ರಿಂದ ಡಿಸಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ*
*ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಪತ್ರಿಕಾಗೋಷ್ಠಿ*
*ಭದ್ರಾವತಿ; ನವಲೇ ಬಸಾಪುರ ಗ್ರಾಮದಲ್ಲಿ ಬಡವರಿಗೆ ನಿವೇಶನ ನೀಡದೇ ನಿರ್ಲಕ್ಷ್ಯ*
*ನ.24 ರಿಂದ ಡಿಸಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ*
ಭದ್ರಾವತಿ ಬಿಳಿಕಿ ಗ್ರಾಮ ಪಂಚಾಯಿತಿ ನವಲೇ ಬಸಾಪುರ ಗ್ರಾಮದಲ್ಲಿ ಬಡವರಿಗೆ ನಿವೇಶನ ನೀಡದ ನಿರ್ಲಕ್ಷ್ಯ ಖಂಡಿಸಿ ಡಿ ಸಿ ಕಛೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ನ.24 ರಿಂದ ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹವನ್ನು ನಡೆಸಲು ತೀರ್ಮಾನಿಸಿದ್ದೇವೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1947 ರಲ್ಲಿ ಸತಂತ್ರವಾದ ಭಾರತ ದೇಶದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಪಾಲು ಎಂಬ ಘೋಷವಾಕ್ಯದ ಮೂಲಕ ಸಮಾನತೆಯ ಸ್ವಾತಂತ್ರ್ಯದ ಸಾಮಾಜಿಕ ನ್ಯಾಯದ ಪರಿಕಲ್ಪನೆಯಿಂದ 1950 ರಲ್ಲಿ ಭಾರತ ಸಂವಿಧಾನ ಜಾರಿಗೆ ಬಂದು ಸೂರು ಇಲ್ಲದ ಬಡವರಿಗೆ ಜಮೀನು ಇಲ್ಲದ ಬಡವರಿಗೆ ತಪ್ಪದೇ ಸೂರು ಒದಗಿಸಬೇಕೆಂದು ಸಂವಿಧಾನದಲ್ಲಿ ಡಾ।। ಬಿ ಆರ್ ಅಂಬೇಡ್ಕರ್ ರವರು ಖಚಿತವಾಗಿ ತಿಳಿಸಿದ್ದಾರೆ. ಆದರೆ ಸ್ವಾತಂತ್ರ್ಯದ ನಂತರ ಅನೇಕ ಸರ್ಕಾರಗಳು ಸಂವಿಧಾನದ ಪ್ರಕಾರ ನಡೆದುಕೊಳ್ಳದೆ ಮಾನವ ಹಕ್ಕುಗಳ ಮತ್ತು ಸಂವಿಧಾನ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿದ್ದಾರೆ.
ಭದ್ರಾವತಿ ಬಿಳಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಲೇ ಬಸಾಪುರ ಗ್ರಾಮದಲ್ಲಿ ಸರ್ವೆ ನಂ :999 ರಲ್ಲಿ 5 ಎಕರೆ 15 ಗುಂಟೆ ಗ್ರಾಮ ಠಾಣ ಜಾಗವಿದ್ದು, ಹಲವು ವರ್ಷಗಳಿಂದಲೂ ನಿವೇಶನ ವಂಚಿತರಾದ ರೈತರು ಅನೇಕ ಹೋರಾಟಗಳನ್ನು ಮಾಡುತ್ತ 2018 ರಿಂದ ನಿರಂತರ ಹೋರಾಟ ನಡೆಸಿ 120 ನಿವೇಶನ ರಚಿಸಿದ್ದು, 30 ಜನ ಬಡವರು ಆಯ್ಕೆಯಾಗಿದ್ದರು ಹಲವು ವರ್ಷಗಳಿಂದ ಕನಿಷ್ಠ ಹಕ್ಕುಪತ್ರಗಳನ್ನು ನೀಡದೇ ಹಕ್ಕು ಪತ್ರಕ್ಕಾಗಿ ದಾಖಲೆಗಳನ್ನು ಬಿಳಿಕಿ ಗ್ರಾಮ ಪಂಚಾಯಿತಿಯವರು ಪದೇ ಪದೇ ತಪ್ಪು ಮಾಡಿದ್ದು, ಜಿ.ಪಂಚಾಯಿತಿಯವರು ಮತ್ತೆ ವಾಪಸ್ಸು ಕಳುಹಿಸಿದ್ದು, ಈ ಬಗ್ಗೆ, ಹಲವು ಬಾರಿ ಮನವಿ ನೀಡಿದರು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಕ್ರಮ ಖಂಡಿಸಿ ಹಾಗೂ ಆಯ್ಕೆ ಆದ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ನೀಡಲು ಒತ್ತಾಯಿಸಿ ದಿನಾಂಕ : 18/11/2025 ರಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಹಗಲು ರಾತ್ರಿ ಎನ್ನದೆ ಬಡ ಮಹಿಳೆಯರು ಪ್ರತಿಭಟನಾ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದೇವೆ.
ಆದರೆ ಇದುವರೆಗೂ ನಿರ್ಲಕ್ಷ್ಯ ಮಾಡಿದ ಬಿಳಿಕಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಹಾಗೂ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿರುವುದನ್ನು ಖಂಡಿಸುತ್ತೇವೆ. ನಿವೇಶನ ರಹಿತರು ಗ್ರಾಮ ಸಭೆಯಲ್ಲಿ ಆಯ್ಕೆಯಾಗಿದ್ದರು ಐನಿಷ್ಟ ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡದೆ ತಪ್ಪು ಮಾಹಿತಿಯನ್ನು ನೀಡಿ ಅರ್ಜಿಗಳು ವಾಪಸ್ಸು ಆಗಿದ್ದು, ಬಿಳಿಕಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಶ್ರೀಮತಿ ಭಾಗ ಬಾಯಿರವರು ಉದ್ದೇಶ ಪೂರ್ವಕವಾಗಿ ಭ್ರಷ್ಟ ರಾಜಕಾರಣಿಗಳ ಕಪಿಮುಷ್ಟಿಗೆ ಸಿಲುಕಿ ದಾಖಲೆಗಳು ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಕಳುಹಿಸದೆ ಹಲವು ವರ್ಷಗಳಿಂದ ರಾಜೀವ್ ಗಾಂಧಿ ವಸತಿ ಯೋಜನೆ ಇಲಾಖೆಗೆ ಕಳುಹಿಸದೇ ಹಕ್ಕುಪತ್ರಗಳನ್ನು ನೀಡಲು ವಿಳಂಬ ಮಾಡಿದ ಕಾರಣ ತಕ್ಷಣ ಬಿಳಿಕಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀಮತಿ ಭಾಗ್ಯ ಬಾಯಿ ರವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಲು ಆಗ್ರಹಿಸುತ್ತೇವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಸತಿ ರಹಿತ ಬಡವರಿಗೆ ಅನೇಕ ಸೌಲಭ್ಯಗಳಾದ ಅಂಬೇಡ್ಕರ್, ಬಸವ, ಇಂದಿರಾಗಾಂಧಿ ಹಾಗೂ ಪ್ರಧಾನ ಮಂತ್ರಿ ವಸತಿ ಯೋಜನೆಗಳು ಪ್ರತಿ ವರ್ಷ ಮಂಜೂರಾಗುತ್ತಿದ್ದರು ಬಿಳಿಕಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಠಾಣಾ ಜಾಗದಲ್ಲಿ 5 ಎಕರೆ 18 ಗುಂಟೆ ಜಮೀನಿನಲ್ಲಿ 1.00 ಎಕರೆ ಸ್ಮಶಾಣಕ್ಕೆ ಮೀಸಲಿರಿಸಿ ಉಳಿದ 4 ಎಕರೆ 18 ಗುಂಟೆ ಜಮೀನು ನಿವೇಶನಕ್ಕಾಗಿ ಆಯ್ಕೆಯಾಗಿ 120 ನಿವೇಶನದಲ್ಲಿ 30 ಜನರು ಆಯ್ಕೆಯಾಗಿದ್ದು ಅವರ ದಾಖಲೆಗಳು ರಾಜೀವ್ ಗಾಂಧಿ ವಸತಿ ಯೋಜನೆಗೆ ಕಳುಹಿಸದೆ ನಿರ್ಲಕ್ಷ ಮಾಡಿದ್ದರಿಂದ ಬಡವರಿಗೆ ಮನೆ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ.
ಮಾಡದೆ ಬಡವರ ಬಗ್ಗೆ, ಆಸಕ್ತಿ ವಹಿಸದಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಆಗಿರುತ್ತದೆ. shaidh abah, weldd ಶಾಸಕರು ರಾಜ್ಯದ ಬಡ ಜನರ ಬಗೆ. ಮಾನ್ಯ ಮುಖ್ಯ ಮಡಿಗಳು ನಿರ್ಲಕ್ಷ್ಯವಹಿಸುವುದು ಸಂವಿಧಾನಕ್ಕೆ ಮಾಡುವ ಬಿಡುವ ಅವಮಾನವಾಗಿದೆ. ಪ್ರಜಾ ಪ್ರಭುತ್ವ, ಚುನಾಯಿತ ಪ್ರತಿನಿಧಿಗಳು ಜನರ ಸೇವಕರೆ ಹೊರತು ಕೇವಲ ಚುನಾವಣೆಗಳಲ್ಲಿ, ಗೆಲುವು ಬಡ ಜನರ ಸೇವೆ ಸಲ್ಲಿಸುವುದು ಜನ ಪ್ರತಿಸಿನಿಧಿಗಳ ಮತ್ತು ಸರ್ಕಾರಿ ನೌಕರರ ಆಧ ಕರ್ತವ್ಯವಾಗಿದೆ ಇಗಿದೆ ಈ ಬಗ್ಗೆ ನಿರ್ಲಗುವಹಿಸಿಯ ನಿರ್ಲಕ್ಷ್ಯವಹಿಸಿದ್ದರಿಂದ ನ.24 ರಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮುಂದೆ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುತ್ತೇವೆ ಎಂದರು.
ಹಲವು ವರ್ಷಗಳಿಂದ ರಾಜೀವ್ ಗಾಂಧಿ ವಸತಿ ಯೋಜನೆ ದಾಖಲೆಗಳನ್ನು ಸರಿಪಡಿಸಿಕೊಳ್ಳದೇ ದಿವ್ಯ ನಿಗಮಕ್ಕೆ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿ ಬಿಳಿಕಿ ಗ್ರಾಮ ಪಂಚಾಯಿತಿ ತಾಲ್ಲೂಕು ಅಧಿಕಾರಿಗಳು ಬಡವರಿಗೆ ನಿವೇಶನ ನೀಡಲು ಕಾನೂನಿನ ಪ್ರಕಾರ ಸೇವೆ ಸಲ್ಲಿಸದೆ ಕಾನೂನು ಉಲ್ಲಂಘನೆ ಮಾಡಿರುವುದನ್ನು ಖಂಡಿಸುತ್ತೇವೆ. ಕೂಡಲೇ ಇವರ ವಿರುದ್ಧ ಕ್ರಮ ಜರಗಿಸಬೇಕೆಂದು ಆಗ್ರಹಿಸಿದರು.
ಹಲವು ವರ್ಷಗಳಿಂದಲೂ ನಿವೇಶನ ರಹಿತ ಬಡವರು ಪಾದ ಯಾತ್ರೆ ಉಪವಾಸದ ಅನೇಕ ಹೋರಾಟಗಳನ್ನು ನಡೆಸುತ್ತ ಬಂದಿದ್ದು, ಸಂಬಂಧಿಸಿದ ಒಮ್ಮತದಿಂದ ಅನುಮೋದನೆ ಮನವಿ ಅರ್ಪಿಸಿದ್ದು, ಸ್ವತಃ ಗ್ರಾಮ ಸಭೆಯಲ್ಲಿ ಎಲ್ಲಾ ಸದಸ್ಯರು ಅಧಿಕಾರಿಗಳಿಗೆ ನೀಡಿದರು ಮಾನ್ಯ ಶಾಸಕರಾದ ಬಿಕೆ ಸಂಗಮೇಶ್ವರ ರವರು ಸಂಬಂಧಿಸಿದ ಅಧಿಕಾರಿ ತಿಳುವಳಿಕೆ ನೀಡಿದ್ದರೂ ಪದೇ ಪದೇ ತಪ್ಪು ಮಾಹಿತಿಯನ್ನು ನೀಡಿ ನಿರ್ಲಕ್ಷ್ಯವಹಿಸಿ ಹಕು, ಪತ್ರ ನೀಡಲು ನಿರ್ಲಕ್ಷ್ಯ ವಹಿಸಿದ ಕ್ರಮ ಖಂಡಿಸಿದರು.
ಆಯ್ಕೆಯಾದ ಫಲಾನುಭವಿಗಳು ಬಾಡಿಗೆ ಕಟ್ಟಲಾಗದೆ ನಿವೇಶನದ ಜಾಗದಲ್ಲಿ ಇತ್ತೀಚೆಗೆ ಗುಡಿಸಲುಗಳನ್ನು కట్నిండు ವಾಸವಾಗಿದ್ದು, ಅಧಿಕಾರಿಗಳು ಒತ್ತಾಯಿಸುತ್ತಿದ್ದು, ಈ ಬಗ್ಗೆ ಮೇಲ್ಕಂಡ ಮಹನೀಯರು ಇವರಿಗೆ ರಕ್ಷಣೆ ನೀಡಿ ತಕ್ಷಣ ಹಕ್ಕುಪತ್ರ ನೀಡುವ ವ್ಯವಸ್ಥೆಯನ್ನು ಮೇಲ್ಕಂಡ ಮಹನೀಯರು ಕಾನೂನು ಕ್ರಮ ಕೈಗೊಳ್ಳಬೇಕೆಂದು ನ್ಯಾಯ ಸಿಗುವವರೆಗೂ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಹಗಲು ರಾತ್ರಿ ಧರಣಿ ಸತ್ಯಾಗ್ರಹ ಹಾಗೂ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ನಮಗೆ ನ್ಯಾಯ ಒದಗಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಯಾವುದೇ ಕಾರಣಕ್ಕೂ ಆಯ್ಕೆಯಾದ ಬಡವರಿಗೆ ಹಕ್ಕುಪತ್ರ ಸಿಗದೆ ಹೋರಾಟವನ್ನು ಬಿಡುವ ಮಾತೇ ಇರುವುದಿಲ್ಲ. ಈ ಹೋರಾಟದಲ್ಲಿ ಯಾರಿಗಾದರೂ ಪ್ರಾಣ ಹಾನಿ ಆದಲ್ಲಿ ಇದಕ್ಕೆ ಬಿಳಿಕಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಭದ್ರಾವತಿ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಶಿವಮೊಗ್ಗ, ಜಿಲ್ಲಾ, ಪಂಚಾಯಿತಿ ಅಧಿಕಾರಿಗಳು ನೇರ ಹೊಣೆಗಾರರು ಎಂದು ಎಚ್ಚರಿಸಿದರು.


