ಕವಿಸಾಲು
01
ಇಂದಿನಿಂದ 14 ನೇ ಬಾಕ್ಸ್ ಕ್ರಿಕೆಟ್ ಪಂದ್ಯಕೂಟ; ವಿನ್ಸೆಂಟ್ ರಾಡ್ರಿಗಸ್
ಇಂದಿನಿಂದ 14 ನೇ ಬಾಕ್ಸ್ ಕ್ರಿಕೆಟ್ ಪಂದ್ಯಕೂಟ; ವಿನ್ಸೆಂಟ್ ರಾಡ್ರಿಗಸ್
ಶಿವಮೊಗ್ಗ,
: ಸ್ಮಾರ್ಟ್ ಶಿವಮೊಗ್ಗ ಡೆವಲಪರ್‍ಸ್ ಅಂಡ್ ಬಿಲ್ಡರ್ಸ್ ಪ್ರಾಯೋಜಕತ್ವದಲ್ಲಿ, ಸಿಹಿಮೊಗ್ಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್ ಹಾಗೂ ಬಾಂಡ್ ಇಲೆವೆನ್ ಕ್ರಿಕೆಟ್ ಕ್ಲಬ್, ಇವರ ಸಂಯುಕ್ತಾಶ್ರಯದಲ್ಲಿ ನ.೧೪,೧೫,೧೬ ಮತ್ತು ೧೭ರಂದು ಗೋಪಾಳ ಮೈದಾನದಲ್ಲಿ ೧೪ನೇ ಬಾಕ್ಸ್ ಕ್ರಿಕೆಟ್ ೩೦(ಯಾರ್ಡ್) ಮಿನಿ ಪಿಚ್ ಹೊನಲು ಬೆಳಕಿನ ಪಂದ್ಯಕೂಟವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ವಿನ್ಸೆಂಟ್ ರೋಡ್ರಿಗಸ್ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಪಂದ್ಯಾವಳಿಯಲ್ಲಿ ರಾಜ್ಯದ ೧೮ ತಂಡ, ಹೊರ ರಾಜ್ಯದ ೬ ತಂಡ ಹಾಗೂ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ೨೦ ತಂಡ ಸೇರಿದಂತೆ ಒಟ್ಟು ೪೪ ತಂಡಗಳು ಭಾಗವಹಿಸುತ್ತಿವೆ ಎಂದರು.
ಪ್ರಥಮ ಬಹುಮಾನ ೧,೭೭,೭೭೭, ದ್ವಿತೀಯ ೭೭,೭೭೭ ಹಾಗೂ ತೃತೀಯ ೩೭,೭೭೭ ನಗದು ಬಹುಮಾನದ ಜೊತೆಗೆ ಟ್ರೋಫಿ ನೀಡಲಾಗುವುದು. ಮ್ಯಾನ್ ಆಫ್ ದಿ ಸೀರಿಸ್‌ಗೆ ಯಮಹಾ ಆರ್‌ಡಿಎಕ್ಸ್ ಬೈಕ್‌ನ್ನು ಬಹುಮಾನವಾಗಿ ನೀಡಲಾಗುತ್ತಿದೆ ಎಂದರು.
ಪ್ರವೇಶ ಉಚಿತವಾಗಿದ್ದು, ಈ ಪಂದ್ಯಾವಳಿಯು ಸ್ಮಾರ್ಟ್ ಶಿವಮೊಗ್ಗ ಡೆವಲಪರ್‍ಸ್ ಅಂಡ್ ಬಿಲ್ಡರ್ಸ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿದೆ ಎಂದರು.
ನ.೧೪ರ ಸಂಜೆ ೫ಕ್ಕೆ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬೆಕ್ಕಿನ ಕಲ್ಮಠದ ಡಾ.ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಮೌಲಾನ ಅಬ್ದುಲ್ ರೆಹಮಾನ್, ಸ್ಟಿಫನ್ ಅಲ್ಬೂಕರ್‍ಕ್ ಉದ್ಘಾಟಕರಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಭೀಮಣ್ಣ ಟಿ. ನಾಯ್ಕ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.
ಪಂದ್ಯಾವಳಿಯಲ್ಲಿ ನ.೧೭ರಂದು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಅವರ ಹುಟ್ಟುಹಬ್ಬ ಆಚರಿಸುವ ಮೂಲಕ ಶುಭಾಶಯ ಸಲ್ಲಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ತರುಣ್‌ಶೆಟ್ಟಿ, ಯೋಗೇಶ್ ಗೌಡ, ಚಿರಂಜೀವಿ ಬಾಬು, ಗೀತೇಂದ್ರ ಗೌಡ, ಸೈಪು, ಪ್ರದೀಪ್ ಕಾವಡ್, ಮೊಹಮ್ಮದ ಶರೀಫ್ ಆಸಿಫ್, ಲೋಹಿತ್, ಪ್ರದೀಪ್, ಅನಿಲ್ ಇನ್ನಿತರರು ಉಪಸ್ಥಿತರಿದ್ದರು.