ಆರ್ಥಿಕ ಸಂಕಷ್ಟದಲ್ಲಿ ಕೈ ಹಿಡಿಯುವ ಮಹಾಗನಿ ಮತ್ತು ಸಿಲ್ವರ್ ಓಕ್:ಡಾ. ಸಿದ್ದಪ್ಪ ಕಣ್ಣೂರ್*

*ಆರ್ಥಿಕ ಸಂಕಷ್ಟದಲ್ಲಿ ಕೈ ಹಿಡಿಯುವ ಮಹಾಗನಿ ಮತ್ತು ಸಿಲ್ವರ್ ಓಕ್:ಡಾ. ಸಿದ್ದಪ್ಪ ಕಣ್ಣೂರ್*

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ,ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಶಿಕಾರಿಪುರ ತಾಲೂಕಿನ ಹೊಸ ಗೊದ್ದನಕೊಪ್ಪ ಗ್ರಾಮದಲ್ಲಿ ರೈತರಿಗಾಗಿ ತರಬೇತಿಯನ್ನು ಏರ್ಪಡಿಸಿದ್ದರು. ತರಬೇತಿಯ ವಿಷಯ *ಮಹಾಗನಿ ಮತ್ತು ಸಿಲ್ವರ್ ಓಕ್ ನ ಗುಣಮಟ್ಟ ಸಸಿಗಳ ಉತ್ಪಾದನೆ* ಯ ಬಗ್ಗೆಯಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಸಿದ್ದಪ್ಪ ಕಣ್ಣೂರ್ ರವರು ಆಗಮಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಹಾಗನಿ ಮತ್ತು ಸಿಲ್ವರ್ ಓಕ್ ಬಹುಪಯೋಗಿ ಮರಗಳಾಗಿವೆ ಮತ್ತು ಅತಿ ಬೆಲೆಬಾಳುವ ಟಿಂಬರ್ ನೀಡುತ್ತವೆ ಎಂದು ರೈತರಿಗೆ ತಿಳಿಸಿಕೊಟ್ಟರು. ಈ ಮರಗಳ
ವೈಜ್ಞಾನಿಕ ಬೇಸಾಯ ಕ್ರಮಗಳು , ಕಟಾವಿಗೆ ಬರುವ ಸಮಯ, ಮತ್ತು ಇಳುವರಿಯ ಬಗ್ಗೆ ಹೇಳಿಕೊಟ್ಟರು. ರೈತರನ್ನುದ್ದೇಶಿಸಿ ಅವರು ಮಹಾಗನಿ ಮತ್ತು ಸಿಲ್ವರ್ ಓಕ್ ಮರಗಳನ್ನು ತೋಟದಲ್ಲಿ ಬೆಳೆಸುವುದು ಜೀವವಿಮೆಯನ್ನು ಮಾಡಿದಂತೆ ಎಂದು ನುಡಿದರು. ಕೃಷಿ ಅರಣ್ಯ ಪದ್ಧತಿಯ ಬಗ್ಗೆ ರೈತರಿಗಿದ್ದ ಸಂಶಯಗಳನ್ನು ನಿವಾರಿಸಿದರು. ಕಾರ್ಯಕ್ರಮದಲ್ಲಿ ರೈತರಿಗೆ ಉಚಿತವಾಗಿ ಮಹಾಗನಿ ಮತ್ತು ಸಿಲ್ವರ್ ಓಕ್ ಸಸಿಗಳನ್ನು ನೀಡಲಾಯಿತು. ಹಾಗೂ ಗ್ರಾಮಕ್ಕಾಗಿ ಬಿಲ್ವಪತ್ರೆ ಸಸಿಗಳನ್ನೂ ಸಹ ನೀಡಲಾಯಿತು.