ಸಾಗರ ನಗರೇಶ್ವರ ದೇವಸ್ಥಾನದಲ್ಲಿ ದೇವಿ ಕೊರಳ ಚಿನ್ನದ ತಾಳಿ ಕದ್ದಿದ್ದ ಶಿರವಂತೆ ಶಿವಕುಮಾರ ಅರೆಸ್ಟ್…*

*ಸಾಗರ ನಗರೇಶ್ವರ ದೇವಸ್ಥಾನದಲ್ಲಿ ದೇವಿ ಕೊರಳ ಚಿನ್ನದ ತಾಳಿ ಕದ್ದಿದ್ದ ಶಿರವಂತೆ ಶಿವಕುಮಾರ ಅರೆಸ್ಟ್…*

ಸಾಗರದ ನಗರೇಶ್ವರ ದೇವಸ್ಥಾನದಲ್ಲಿ ದೇವಿಯ ಕೊರಳಲ್ಲಿದ್ದ ಬಂಗಾರದ ತಾಳಿ ಕದ್ದ ಕಳ್ಳರನ್ನು ಸಾಗರ ಪೇಟೆ ಠಾಣೆ ಪೊಲೀಸರು ಬೇಟೆಯಾಡಿದ್ದು, ಶಿರವಂತೆ ವಾಸಿ ಶಿವಕುಮಾರನನ್ನು ಬಂಧಿಸಿದೆ.

ಬಂಧಿತ ಶಿವಕುಮಾರನಿಂದ 2 ಲಕ್ಷ ರೂ.,ಗಳ ಮೌಲ್ಯದ 30.570 ಗ್ರಾಂ ತೂಕದ ಚಿನ್ನದ ತಾಳಿ ಸರವನ್ನು ಅಮಾನತು ಪಡಿಸಿಕೊಳ್ಳಲಾಗಿದೆ.

ಎಸ್ ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ ಪಿ ಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ.ಕಾರಿಯಪ್ಪ ನೇತೃತ್ವದಲ್ಲಿ, ಡಿವೈಎಸ್ ಪಿ ಗೋಪಾಲಕೃಷ್ಣ ಟಿ ನಾಯಕ್ ಮೇಲ್ವಿಚಾರಣೆಯಲ್ಲಿ, ಸಾಗರ ಟೌನ್ ಇನ್ಸ್ ಪೆಕ್ಟರ್ ಪುಲ್ಲಯ್ಯ ರಾಥೋಡ್ ನೇತೃತ್ವದಲ್ಲಿ ಯಲ್ಲಪ್ಪ ಹಿರಗಣ್ಣವರ, ಹೆಚ್.ಸಿ. ಸನಾವುಲ್ಲಾ, ಪಿಸಿ ವಿಕಾಸ್, ವಿಶ್ವನಾಥ, ಕೃಷ್ಣಮೂರ್ತಿ, ಮೆಹಬೂಬ್ ರವರನ್ನೊಳಗೊಂಡ ತಂಡ ಈ ಬೇಟೆಯಾಡಿದೆ.