ವೃದ್ಧನ ಹಣ ದೋಚಿದ್ದ ಹರಿಯಾಣದ ಇಬ್ಬರನ್ನು ಬಂಧಿಸಿದ ಕಾರ್ಗಲ್ ಪೊಲೀಸರುಎಟಿಎಂ ಕಾರ್ಡ್ ಪಿನ್ ಪಡೆದು ಹಣ ದೋಚುತ್ತಿದ್ದ ವಂಚಕರು
ವೃದ್ಧನ ಹಣ ದೋಚಿದ್ದ ಹರಿಯಾಣದ ಇಬ್ಬರನ್ನು ಬಂಧಿಸಿದ ಕಾರ್ಗಲ್ ಪೊಲೀಸರು
ಎಟಿಎಂ ಕಾರ್ಡ್ ಪಿನ್ ಪಡೆದು ಹಣ ದೋಚುತ್ತಿದ್ದ ವಂಚಕರು![](https://malenaduexpress.com/wp-content/uploads/2025/02/IMG-20250212-WA0808-1024x726.jpg)
ವೃದ್ಧರೊಬ್ಬರನ್ನು ಎಟಿಎಂ ಕಾರ್ಡ್ ಪಿನ್ ಪಡೆದು ಹಣ ಡ್ರಾ ಮಾಡಿಕೊಂಡು ವಂಚಿನೆ ಸೇರಿದಂತೆ ಎರಡು ಪ್ರಕರಣ ಎಸಗಿ ಪರಾರಿಯಾಗಿದ್ದ ಹರಿಯಾಣ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹರಿಯಾಣ ಮೂಲದ ಜೋಗಿನ್ ದಾರ್(29) ಮತ್ತು ಮುಖೇಶ್(48) ಬಂಧಿತರು. ಈ ಇಬ್ಬರ ವಿರುದ್ಧ ಕಾರ್ಗಲ್ ಮತ್ತು ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರ್ಗಲ್ ವೃದ್ಧನಿಗೆ 1,49,999₹ ಗಳನ್ನು ವಂಚಿಸಿದ್ದ ಇವರಿಂದ ಸಾಗರ ಡಿವೈಎಸ್ ಪಿ ಗೋಪಾಲಕೃಷ್ಣ ಟಿ ನಾಯಕ್ ಮೇಲ್ವಿಚಾರಣೆಯಲ್ಲಿ ಸಾಗರ ಗ್ರಾಮಾಂತರ ಸಿಪಿಐ ಸಂತೋಷ್ ಶೆಟ್ಟಿ, ಕಾರ್ಗಲ್ ಪಿಎಸ್ ಐ ಹೊಳೆಬಸಪ್ಪ ಹೋಳಿ, ಸಿಬ್ಬಂದಿಗಳಾದ ಹೆಚ್.ಸಿ.ಸನಾವುಲ್ಲಾ, ಪಿಸಿ ವಿಕಾಸ್, ವಿಶ್ವನಾಥ, ಕೃಷ್ಣಮೂರ್ತಿ, ಮೆಹಬೂಬ್ ರವರನ್ನೊಳಗೊಂಡ ತಂಡ ಇಬ್ಬರನ್ನು ಬಂಧಿಸಿ, ಅವರಿಂದ 1 ಲಕ್ಷ ನಗದು, ಎರಡು ಲಕ್ಷ ರೂ.,ಗಳ ಮೌಲ್ಯದ ರಾಯಲ್ ಎನ್ ಫೀಲ್ಡ್ ಬೈಕ್ ವಶಕ್ಕೆ ಪಡೆದಿದ್ದಾರೆ.
ಎಸ್ ಪಿ ಮಿಥುನ್ ಕುಮಾರ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.