ಮೀಟರ್ ಬಡ್ಡಿ ಮಾಫಿಯಾ-1**ದೊಡ್ಡಪೇಟೆ ಪೊಲೀಸರು ಬೇಟೆಯಾಡಿದ ಮೀಟರ್ ಬಡ್ಡಿ ಕುಳಗಳು ಯಾರು?**ಇಕ್ಬಾಲ್-ಗುರುರಾಜ್-ಕರಿಬಸಪ್ಪ* *ಏನಿವರ ಕರಾಮತ್ತು?*

*ಮೀಟರ್ ಬಡ್ಡಿ ಮಾಫಿಯಾ-1*

*ದೊಡ್ಡಪೇಟೆ ಪೊಲೀಸರು ಬೇಟೆಯಾಡಿದ ಮೀಟರ್ ಬಡ್ಡಿ ಕುಳಗಳು ಯಾರು?*

*ಇಕ್ಬಾಲ್-ಗುರುರಾಜ್-ಕರಿಬಸಪ್ಪ*
*ಏನಿವರ ಕರಾಮತ್ತು?*

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಎಸ್ ಪಿ ಮಿಥುನ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಮೀಟರ್ ಬಡ್ಡಿ ದಂಧೆಕೋರರನ್ನು ಸದೆ ಬಡಿಯುತ್ತಿದ್ದು, ದೊಡ್ಡಪೇಟೆ ವ್ಯಾಪ್ತಿಯಲ್ಲಿ ನಡೆದ ಪೊಲೀಸ್ ದಾಳಿಯಲ್ಲಿ ಯಾವ ಯಾವ ಬಡ್ಡಿ ದಂಧೆಕೋರರು ಸಿಕ್ಕಿಬಿದ್ದರು? ಅವರಿಂದ ವಶಕ್ಕೆ ಪಡೆದ ವಸ್ತುಗಳಲ್ಲಿ ಏನೆಲ್ಲ ಇತ್ತು? ಇಲ್ಲಿದೆ ಮಾಹಿತಿ…

ಶಿವಮೊಗ್ಗದ ಅಣ್ಣಾನಗರ 7ನೇ ಅಡ್ಡರಸ್ತೆಯಲ್ಲಿರುವ ಮೊಹಮ್ಮದ್ ಇಕ್ಬಾಲ್ ಬಿನ್ ವಜೀರ್ ಸಾಬ್ ಕುದುರೆ ಜಾಡು ಮನೆ ಮೇಲೆ ದಾಳಿ ಮಾಡಿದ ಡಿವೈಎಸ್ಪಿ ಆಂಜನಪ್ಪ, ಕೃಷ್ಣಮೂರ್ತಿ ಮಾರ್ಗದರ್ಶನದ, ದೊಡ್ಡಪೇಟೆ ಸಿಪಿಐ ರವಿ ಪಾಟೀಲ್ ನೇತೃತ್ವದ ತಂಡ ಕೆಲವೊಂದು ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ.

ಇಕ್ಬಾಲ್ ಮನೆಯಲ್ಲಿ ಆತನಿಗೆ ಸಂಬಂಧಿಸಿದ್ದಲ್ಲದ ಎರಡು ಚೆಕ್ಕುಗಳು, ಎರಡು ಆರ್ಸಿ ಕಾರ್ಡ್ ಗಳು,ಐದು ಇನ್ಸೂರೆನ್ಸ್, ಮೂರು ಆಧಾರ್ ಕಾರ್ಡ್ ಗಳು, ಎರಡು ಫಾರಂ ನಂಬರ್ 29 -30, 2 ವೆಹಿಕಲ್ ಕ್ರಯ ಪತ್ರಗಳು ಸಿಕ್ಕಿವೆ.

ಇದೇ ಪೊಲೀಸರ ತಂಡ ಕಾಮಾಕ್ಷಿ ಬೀದಿಯ ಒಂದನೇ ಕ್ರಾಸಿನ ಗಣಪತಿ ದೇವಸ್ಥಾನ ಬಳಿಯ ವಾಸಿ ರಾಮು ಎಂಬುವವರ ಮಗ ಗುರುರಾಜ್ ನನ್ನು ಅಕ್ರಮ ಬಡ್ಡಿ ವ್ಯವಹಾರದಲ್ಲಿ ಬಂಧಿಸಿದೆ.

ಈತನ ಮನೆಯಲ್ಲಿ ಸಂಬಂಧಿಸಿದ್ದಲ್ಲದ ನಾಲ್ಕು ವಿಲ್ಪತ್ರಗಳು, 23 ಕಾಲಿಚಕ್ಕುಗಳು, ಎರಡು ಖಾಲಿ ಇರುವ ಅಗ್ರಿಮೆಂಟ್ ಕಾಪಿ, ಒಂದು ಕ್ರಯ ಪತ್ರ, 1 ಫಾರ್ಮ್ ನಂಬರ್ 29 30, ಒಂದು ಪಾನ್ ಕಾರ್ಡ್, 12 ಆರ್ಸಿ ಕಾರ್ಡ್ ಒರಿಜಿನಲ್, ಮೂರು ಆರ್ಸಿ ಕಾರ್ಡ್, 2 ಆಧಾರ್ ಕಾರ್ಡ್ ಗಳು, 1 ಪಹಣಿ ಡಾಕ್ಯುಮೆಂಟ್, 4 ಲಾಂಗ್ ಸೈಜ್ ರಿಜಿಸ್ಟರ್, ಒಂದು ಕಿಂಗ್ ಸೈಜ್ ರಿಜಿಸ್ಟರ್ ಗಳು ಸಿಕ್ಕಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಅದೇ ದಿನ ದೊಡ್ಡಪೇಟೆ ಪೊಲೀಸರು ಕರಿಬಸಪ್ಪ ಎಂ.ಎಲ್ (ತಂದೆ ಬಸವರಾಜ) (43ವರ್ಷ) ಕಾಂಟಿನೆಂಟ್ ವ್ಯಾಪಾರಿ, ಒಂದನೇ ಕ್ರಾಸ್, ಶಿವಮೊಗ್ಗ ಮನೆ ಮೇಲೂ ದಾಳಿ ಮಾಡಿದ್ದು, ಬೇರೆಯವರ 10 ಖಾಲಿ ಚೆಕ್ಕುಗಳು, ಎರಡು ಆರ್ಸಿ ಪುಸ್ತಕಗಳು,ಒಂದು ಪಾಸ್ ಬುಕ್, ಐದು ನೂರು ಪಿ ಬಾಂಡ್ ಖಾಲಿಪತ್ರ, ಎರಡು ಫಾರ್ಮ್ ನಂ ಸಿಕ್ಕಿವೆ‌.

ಮುಂದೆಯೂ ದೊಡ್ಡಪೇಟೆ ವ್ಯಾಪ್ತಿಯಲ್ಲಿ ಮೀಟರ್ ಬಡ್ಡಿ ದಂಧೆ ಮಾಡುವವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಯಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.