ಶಿವಮೊಗ್ಗ ಶಾಸಕರ ಕಚೇರಿಯಲ್ಲಿ ಮಹತ್ವದ ಸಭೆ;ಇ- ಸ್ವತ್ತು ಜನಸ್ನೇಹಿ ಮಾಡಿ- ಶಾಸಕ ಚನ್ನಬಸಪ್ಪ ಕಿವಿಮಾತು
ಶಿವಮೊಗ್ಗ ಶಾಸಕರ ಕಚೇರಿಯಲ್ಲಿ ಮಹತ್ವದ ಸಭೆ;
ಇ- ಸ್ವತ್ತು ಜನಸ್ನೇಹಿ ಮಾಡಿ- ಶಾಸಕ ಚನ್ನಬಸಪ್ಪ ಕಿವಿಮಾತು
![](https://malenaduexpress.com/wp-content/uploads/2025/02/IMG-20250213-WA0500-1024x1024.jpg)
ಇಂದು ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಶಾಸಕರ ಕಚೇರಿ ಕರ್ತವ್ಯ ಭವನದಲ್ಲಿ ಮಹಾನಗರ ಪಾಲಿಕೆ ಆಯುಕ್ತರು, ಕಂದಾಯ ವಿಭಾಗದ ಅಧಿಕಾರಿಗಳು, ಉಪನೋಂದಣಿ ಅಧಿಕಾರಿಗಳು, ಜಿಲ್ಲಾ ಕೈಗಾರಿಕಾ ಸಂಘ (ಆಟೋ ಕಾಂಪ್ಲೆಕ್ಸ್), ಸಣ್ಣ ಕೈಗಾರಿಕೆಗಳ ಸಂಘ, ಚೇಂಬರ್ ಆಫ್ ಕಾಮರ್ಸ್ ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಮುಖರೊಂದಿಗೆ ‘ಇ-ಸ್ವತ್ತು’ ಗೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸುದೀರ್ಘ ಸಭೆ ನಡೆಸಿದರು.
ಈ ಸಂದರ್ಭದಲ್ಲಿ,
ಇ-ಸ್ವತ್ತು ಗೆ ಸಂಬಂಧಿಸಿದಂತೆ ಅಸಮರ್ಪಕವಾಗಿ ದಾಖಲಾತಿಯನ್ನು ಸಾರ್ವಜನಿಕರಿಗೆ ಕೇಳುವುದರಿಂದ ತೊಂದರೆಯಾಗುತ್ತಿದ್ದು ಈ ಬಗ್ಗೆ ಸರಳಿಕರಣಗೊಳಿಸಲು ತಿಳಿಸಿದರು.
ಇ-ಸ್ವತ್ತು ನೋಂದಣಿಯ ಸಂದರ್ಭದಲ್ಲಿ EC ನೀಡುವಲ್ಲಿ ವಿಳಂಬವಾಗದಂತೆ ಕ್ರಮವಹಿಸಲು ಉಪನೋಂದಣಿ ಅಧಿಕಾರಿಗಳಿಗೆ ಸೂಚಿಸಿದರು.
ಇ-ಸ್ವತ್ತು ಗೆ ಸಂಬಂಧಿಸಿದಂತೆ ನಿನ್ನೆ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರನ್ನು ಭೇಟಿ ಮಾಡಿ, ಆಸ್ತಿ ನೋಂದಣಿ ಇ-ಸ್ವತ್ತು ಕಡ್ಡಾಯ ಮಾಡಿರುವುದನ್ನು ಕನಿಷ್ಠ ಆರು ತಿಂಗಳು ಸರ್ಕಾರ ಮುಂದೂಡುವಂತೆ ಕೋರಲಾಗಿದ್ದು, ಆದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.