ಅನೈತಿಕ ಚಟುವಟಿಕೆಯ ತಾಣವಾಗಿರುವ ಬಸ್ ನಿಲ್ದಾಣ?
ಅನೈತಿಕ ಚಟುವಟಿಕೆಯ ತಾಣವಾಗಿರುವ ಬಸ್ ನಿಲ್ದಾಣ?

ವರದಿ- ಪ್ರೆಸ್ ಇಮಾಮ್ ಮಳಗಿ, ಶಿಕಾರಿಪುರ
ಶಿಕಾರಿಪುರ : ತಾಲೂಕಿನ ಮತ್ತಿಕೋಟೆ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣ ಇದು.
ಕಳೆದ 8-10 ವರ್ಷಗಳ ಹಿಂದೆ 12 ನೇ ಹಣಕಾಸು ಯೋಜನೆಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಅನುದಾನದಲ್ಲಿ ಕಟ್ಟಿದ ಈ ಬಸ್ ನಿಲ್ದಾಣ, ಪಂಚಾಯತ, ಮತ್ತು ಸಾರ್ವಜನಿಕರ ನಿರ್ಲಕ್ಷತನಕ್ಕೆ ಸಾಕ್ಷಿಯಾಗಿದೆ. ಮತ್ತಿಕೋಟೆ ಯಿಂದ ಕಿಲೋಮೀಟರ್ ದೂರ ಇರುವ, ಈ ಕ್ರಾಸ್ನಲ್ಲಿ ಬಸ್ ನಿಲ್ದಾಣದಲ್ಲಿ ಪರ ಊರಿಗೆ ಹೋಗಿ ಬರುವ ಜನರಿಗೆ ಮಳೆಗಾಲ, ಚಳಿಗಾಲ, ಬೇಸಿಗೆಯಲ್ಲಿ ಬಹಳ ಅನುಕೂಲವಾದ ತಂಗುದಾಣವಾಗಿದ್ದು, ಸಾರ್ವಜನಿಕರಿಗೆ ಮಕ್ಕಳಿಗೆ ಅಶ್ರಯವಾಗಿದ್ದು, ಅಷ್ಟೇ ದುರುಪಯೋಗವಾಗಿದೆ.
ರಾಜ್ಯದಲ್ಲಿ ಗುಟುಕಾ ತಂಬಾಕು ಬ್ಯಾನ್ ಆಗಿದ್ದರು ಸಹ ನಿರಂತರ ಎಗ್ಗಿಲ್ಲದೆ ಮಾರಾಟವಾಗುತ್ತಿದೆ.
ಬೀಡಿ ಅಂಗಡಿ, ಕಿರಾಣಿ ಅಂಗಡಿಗಳಲ್ಲಿ, ಅಧಿಕಾರಿಗಳ ಭಯವಿಲ್ಲದೆ ಗುಟುಕಾ ಧಂದೆ ನಡೆಯುತ್ತಿದೆ. ಯುವಸಮುದಾಯ ತಿಂದು ಬಸ್ ನಿಲ್ದಾಣದಲ್ಲಿ ಉಗಳಿ,ಗಲೀಜು ಮಾಡಿ ಮೂತ್ರ ಮಾಡುವದರಿಂದ ಹಿಡಿದು ಎಲ್ಲ ಅನೈತಿಕ ಚಟುವಟಿಕೆ ನಡೆಯುವ ಸಾಧ್ಯತೆ ಇದೆ.ಗಬ್ಬೆದ್ದು ನಾರುತ್ತಿದೆ.
ದಯವಿಟ್ಟು ಸಾರ್ವಜನಿಕರು ಈ ಬಸ್ ನಿಲ್ದಾಣ ಸ್ವಚ್ಛತೆ ಕಾಪಾಡಿಕೊಂಡರೆ ಒಳಿತು. ಇಲ್ಲಿ ರಾತ್ರಿ ಹೊತ್ತಿನಲ್ಲಿ ಪರ ಊರಿಗೆ ಹೋಗುವ ಜನರು ಒಳಗೆ ತಂಗಲು ಸಹ ಭಯ ಪಡುವಂತಾಗಿದೆ.ದಯವಿಟ್ಟು ಮತ್ತಿಕೋಟೆ ಪಂಚಾಯತ್ ಅಧಿಕಾರಿಗಳು ಗಮನಿಸಬೇಕಾಗಿದೆ.