*ಸ್ಬೂಡಾ ಅಧ್ಯಕ್ಷರಾಗಿಯೇ ಮುಂದುವರೆದ ಹೆಚ್.ಎಸ್.ಸುಂದರೇಶ್* *ಸರ್ಕಾರದ ಆದೇಶ*

*ಸ್ಬೂಡಾ ಅಧ್ಯಕ್ಷರಾಗಿಯೇ ಮುಂದುವರೆದ ಹೆಚ್.ಎಸ್.ಸುಂದರೇಶ್*

*ಸರ್ಕಾರದ ಆದೇಶ*

ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಅವಧಿ ಇಂದು ಮುಕ್ತಾಯಗೊಂಡಿದ್ದು, ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ರವರ ಅಧ್ಯಕ್ಷಾವಧಿಯನ್ನು ಮುಂದಿನ ಆದೇಶದವರೆಗೆ ಮುಂದುವರೆಸಿ ರಾಜ್ಯ ಸರ್ಕಾರ ಫೆ.27ರಂದೇ ಆದೇಶಿಸಿದೆ.

ಈ ಆದೇಶದಂತೆ ಇವತ್ತಿಗೆ(ಫೆ.28ಕ್ಕೆ) ಮುಕ್ತಾಯಗೊಳ್ಳಬೇಕಿದ್ದ ಸುಂದರೇಶ್ ರವರ ಅಧ್ಯಕ್ಷಾವಧಿ ನಿರಾತಂಕವಿಲ್ಲದೇ ಮುಂದಿನ ಆದೇಶದವರೆಗೆ ಮುಂದುವರೆದಿದೆ.