75 ವರ್ಷಗಳ ಪ್ರಾತಿನಿಧಿಕ ಕನ್ನಡದ ಕಿರು ಕಥೆಗಳಲ್ಲಿ ನನ್ನದೂ ಒಂದು ಕಥೆ…* *ಅದರ ಹೆಸರೇ *ಸುಡುಗಾಡು*!
*75 ವರ್ಷಗಳ ಪ್ರಾತಿನಿಧಿಕ ಕನ್ನಡದ ಕಿರು ಕಥೆಗಳಲ್ಲಿ ನನ್ನದೂ ಒಂದು ಕಥೆ…*
*ಅದರ ಹೆಸರೇ *ಸುಡುಗಾಡು*!
75 ವರ್ಷಗಳ ಪ್ರಾತಿನಿಧಿಕ ಕನ್ನಡದ ಕಿರು ಕಥೆಗಳಲ್ಲಿ ನನ್ನದೂ ಒಂದು ಕಥೆ ಸೇರ್ಪಡೆ ಗೊಂಡಿದೆ. ಅದರ ಹೆಸರು- *ಸುಡುಗಾಡು*
ಕನ್ನಡ ವಿಶ್ವವಿದ್ಯಾಲಯ ಹಂಪಿಯ ವಿಶ್ರಾಂತ ಪ್ರಾಧ್ಯಾಪಕರಾಗಿರುವ ಡಾ. ಕರೀಗೌಡ ಬೀಚನಹಳ್ಳಿ ಸಂಪಾದಕತ್ವದಲ್ಲಿ 1950-2025ರ ವರೆಗಿನ 75 ಪ್ರಾತಿನಿಧಿಕ ಕಿರುಗತೆಗಳ ಸಂಕಲನ *ಅಮೃತ ಕಥಾನಕ* ಇದೀಗಷ್ಟೇ ಬಿಡುಗಡೆಯಾಗಿದೆ. ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ 75ರ ಸಂಭ್ರಮದ ಸವಿನೆನಪಿಗಾಗಿ ಈ ಸಂಕಲನ ಹುಟ್ಟು ಪಡೆದಿದೆ.
ಕನ್ನಡ ಕಥಾ ಜಗತ್ತನ್ನು ಬೆಳಗಿದ ಶಾಂತಿನಾಥ ದೇಸಾಯಿಯವರ ತೃಪ್ತ, ಬೆಸರಗರಹಳ್ಳಿ ರಾಮಣ್ಣನವರ ಗೋಸುಂಬೆ, ದೇವನೂರು ಮಹಾದೇವರ ಗ್ರಸ್ತರು, ತೇಜಸ್ವಿಯವರ ಮೆಣಸಿನ ಮಡಿ, ಲಂಕೇಶರ ಮುಟ್ಟಿಸಿಕೊಂಡವರು, ಬರಗೂರರ ಅಕ್ಕ ತಂಗಿ ಸಾವು, ಪುರುಷೋತ್ತಮ ಬಿಳಿಮಲೆಯವರ ಇವ್ನ ಶಾಲೆಗೆ ಕಳ್ಸುದು ಬೇಡ್ವಾ?, ಉಮಾರಾವ್ ರ ಹೊಂಗೆಮರ, ಸಿದ್ದಲಿಂಗಯ್ಯರ ಪೊಲೀಸ್ ಪರಾರಿ, ದೊಡ್ಡರಂಗೇಗೌಡರ ಮಧ್ಯವರ್ತಿ, ಮಲ್ಲೇಪುರಂರ ಅಮ್ಮನ ಅಗಲಿಕೆ, ಕುಂ ವೀಯವರ ರುದ್ರಪ್ಪನ ಖಡ್ಗ, ಬೋಳುವಾರರ ಮುತ್ತುಪ್ಪಾಡಿಯ ಮಾಟಗಾತಿ, ವಸುಧೇಂದ್ರರ ಸಮಾನತೆ, ಬಶೀರರ ಗೋಡೆ ಕಪಾಟು…ಹೀಗೆ,ಕನ್ನಡದ ಅಭೂತಪೂರ್ವ 75 ಕಥೆಗಾರರ ಜೊತೆ ಸುಡುಗಾಡು(ಶಿ.ಜು.ಪಾಶ) ಸೇರಿಸಿಕೊಂಡ ಸಂಪಾದಕರಿಗೆ ವಂದನೆಗಳು…
ನಕ್ಸಲನೊಬ್ಬ ಸತ್ತ ನಂತರ ಸ್ಮಶಾನದಲ್ಲಿ ಹೆಣಗಳ ಜೊತೆ ಸಲ್ಲಾಪ ಮಾಡುವ, ಅಲ್ಲೂ ಧರ್ಮಾತೀತ ಜಗತ್ತಿಲ್ಲದೇ ನರಳುವ ಪುಟ್ಟ ಕಥೆಯೇ *ಸುಡುಗಾಡು*!
ಕನ್ನಡದ ಕಥಾ ಜಗತ್ತು ನನ್ನಂಥ ಕಿರಿಯನಿಗೂ ಆಗಾಗ ಗುರುತಿಸಿ ಇಂಥ ಆಘಾತ ನೀಡುತ್ತಿರುತ್ತಲ್ಲ…
– *ಶಿ.ಜು.ಪಾಶ*
8050112067