ಭದ್ರಾವತಿಯ ಪೋಕ್ಸೋ ಪ್ರಕರಣ;* *ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ್ದ ಯುವಕನಿಗೆ 20 ವರ್ಷ ಕಠಿಣ ಜೈಲು- 2,01,000₹ ದಂಡ ವಿಧಿಸಿದ ಕೋರ್ಟ್*
*ಭದ್ರಾವತಿಯ ಪೋಕ್ಸೋ ಪ್ರಕರಣ;*
*ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ್ದ ಯುವಕನಿಗೆ 20 ವರ್ಷ ಕಠಿಣ ಜೈಲು- 2,01,000₹ ದಂಡ ವಿಧಿಸಿದ ಕೋರ್ಟ್*
*ಭದ್ರಾವತಿ ನಗರದ ವಾಸಿ 19 ವರ್ಷದ* ಯುವಕ, *15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ* ಮೇಲೆ *ಲೈಂಗಿಕ ದೌರ್ಜನ್ಯ ವೆಸಗಿದ್ದ ಪ್ರಕರಣಕ್ಕೆ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ *ಭದ್ರಾವತಿ ನ್ಯೂ ಟೌನ್* ಪೊಲೀಸ್ ಠಾಣೆಯಲ್ಲಿ ಕಲಂ 448 376(2) (ಎನ್), 376 (2)(ಎಫ್) ಐಪಿಸಿ ಮತ್ತು ಕಲಂ 5 (ಜೆ)(2) 5(ಎಲ್), 6 ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಭದ್ರಾವತಿ ನಗರ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಕಾಂಡಿಕೆ ರವರು ಪ್ರಕರಣದ ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ *ದೋಷಾರೋಪಣಾ ಪತ್ರವನ್ನು* ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ *ಶ್ರೀ ಶ್ರೀಧರ್ ಹೆಚ್. ಆರ್, (ಸರ್ಕಾರಿ ಅಭಿಯೋಜಕರವರು*) ವಾದ ಮಂಡಿಸಿದ್ದು, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ *FTSC-1 ಶಿವಮೊಗ್ಗದಲ್ಲಿ* ಪ್ರಕರಣದ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶರಾದ ಮೋಹನ್ ಜೆ. ಎಸ್ ರವರು ಫೆಬ್ರವರಿ 24 ರಂದು ಪ್ರಕರಣದ ಆರೋಪಿ ಭದ್ರಾವತಿ ನಗರದ 19 ವರ್ಷದ ವ್ಯಕ್ತಿಗೆ *20 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 2,01,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ 1 ವರ್ಷ ಸಾಧಾ ಕಾರಾವಾಸ ಶಿಕ್ಷೆ* ವಿಧಿಸಿದ್ದು, ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ *2,00,000/- ಮತ್ತು ಸರ್ಕಾರದಿಂದ 2 ಲಕ್ಷರೂಗಳನ್ನು* ನೊಂದ ಬಾಲಕಿಗೆ ನೀಡಲು ಆದೇಶಿಸಿದ್ದಾರೆ.