ಧರ್ಮಸ್ಥಳ HORROR* *ಸಮೀರ್‌ನನ್ನು ಯಾಕೆ ಬೆಂಬಲಿಸಬೇಕು ಎಂದರೆ…* *ಶಶಿಧರ ಹೆಮ್ಮಾಡಿ ಬರೆದಿದ್ದಾರೆ…*
*ಧರ್ಮಸ್ಥಳ HORROR*
*ಸಮೀರ್‌ನನ್ನು ಯಾಕೆ ಬೆಂಬಲಿಸಬೇಕು ಎಂದರೆ…*
*ಶಶಿಧರ ಹೆಮ್ಮಾಡಿ ಬರೆದಿದ್ದಾರೆ…*
ದೂತ ಸಮೀರ್ ಯೂಟ್ಯೂಬ್‌ನಲ್ಲಿ ಹೇಳಿದ ವಿಷಯಗಳು ಅತ್ಯಂತ ಪ್ರಮುಖವಾದವು, ಸೂಕ್ಷ್ಮವಾದವು ಮತ್ತು ಆಘಾತಕಾರಿಯಾದವು. ಧರ್ಮಸ್ಥಳದ ದೊಡ್ಡ ಮನೆಯ ಮುಂಡಾಸು ಧಾರಿಗಳ ದೌರ್ಜನ್ಯ, ಭೂಗಳ್ಳತನ, ಕೊಲೆಗಡುಕತನ ಎಲ್ಲವೂ ಧರ್ಮಸ್ಥಳದ ಸುತ್ತಮುತ್ತಲಿನ ಜನಕ್ಕೆ ಹೊಸತೇನಲ್ಲ. ಅದೆಲ್ಲವೂ ಅಲ್ಲಿನ ಎಲ್ಲರಿಗೂ ಗೊತ್ತು. ಹೊರಗಿನವರಿಗೂ ಬಹುತೇಕರಿಗೆ ಗೊತ್ತು. ಆದರೆ ಇದೆಲ್ಲವೂ ಗೊತ್ತಿದ್ದು ಈ ಮುಂಡಾಸುಧಾರಿಗಳನ್ನು ಸದಾ ಹಾಡಿ ಹೊಗಳಿ ಅವರು ಕೊಡುವ ಸೂಟ್ಕೇಸ್‌ನಲ್ಲಿ ಶ್ರೀಮಂತರಾಗಿರುವ ಅವರ ಕುಭಕ್ತ ಮಂಡಳಿ ಈ ಮುಂಡಾಸು ಮನೆತನದ ಬಗ್ಗೆ ಏನೇ ಹೇಳಿದರೂ ತಕ್ಷಣ ತಾ ಮುಂದು ಎಂದು ಮುಂಡಾಸುಧಾರಿಗಳ ಮಾನ ಕಾಪಾಡಲು ಒಡೋಡಿ ಬರುತ್ತದೆ.
ಸಮೀರ್ ಹೇಳಿರುವ ವಿಷಯಗಳಲ್ಲಿ ಹೊಸತೇನಿಲ್ಲ. ಆದರೆ ಅಷ್ಟು ಚೆಂದವಾಗಿ ವಿವರಿಸಿ, ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಧೈರ್ಯದಿಂದ ಹೇಳಿದರಲ್ಲ ಅದು ಮಾತ್ರ ಮುಂಡಾಸುಧಾರಿಗಳಿಗೂ, ಅವರ ಬಾಲಂಗೋಚಿಗಳಿಗೂ ಆಘಾತಕಾರಿಯಾಗಿತ್ತು.
ಬೆಳ್ತಂಗಡಿಯ ನಾಗರಿಕ ಟ್ರಸ್ಟ್‌ನವರು ಮತ್ತು ಇನ್ನಿತರ ಸಂಘಟನೆಗಳು ಕಳೆದ ಎರಡು ದಶಕಗಳಿಂದ ಇದನ್ನೆಲ್ಲ ಹೇಳುತ್ತಲೇ ಬಂದಿದ್ದರು. ಆದರೆ ಅವರ ದನಿಯನ್ನು ಮುಂಡಾಸಿಗರು ಕಾನೂನಿನ ಮೂಲಕ, ದಬ್ಬಾಳಿಕೆಯ ಮೂಲಕ. ಆಯಾ ಕಾಲದ ಆಡಳಿತಾರೂಢ ಮತ್ತು ವಿಪಕ್ಷಗಳ ಜೊತೆಗಿನ ಕುಟಿಲ ಮೈತ್ರಿಯ ಮೂಲಕ ದಮನಿಸುತ್ತಲೇ ಬಂದಿದ್ದರು. ಮಾಧ್ಯಮಗಳಂತೂ ಅವರ ಅಮೇಧ್ಯದಿಂದಲೇ ಬದುಕು ಸಾಗಿಸುತ್ತಿರುವ ಕಾರಣ ಧರ್ಮಸ್ಥಳದ ಮುಂಡಾಸಿಗರ ಸೋ ಕಾಲ್ಡ್ ಘನತೆಗೆ ಕುಂದುಂಟುಮಾಡುವ ಯಾವ ಸುದ್ದಿಯೂ ಅವರು ಪ್ರಕಟಿಸುವುದಿಲ್ಲ. ಹೀಗಾಗಿ ನಾಗರಿಕ ಟ್ರಸ್ಟ್ ಮುಂತಾದ ಸಂಘಟನೆಗಳು, ಸೋಮನಾಥ್ ನಾಯಕ್‌ರಂತಹ ವ್ಯಕ್ತಿಗಳು ಈ ಮುಂಡಾಸು ಮಂದಿ ನಡೆಸಿದ ದೌರ್ಜನ್ಯ, ಭೂಗಳ್ಳತನ, ಕೊಲೆ, ಲೂಟಿಯನ್ನು ಬಯಲಿಗೆಳೆಯಲು ಮಾಡಿದ ಎಲ್ಲ ಹೋರಾಟಗಳು ಅಷ್ಟು ಸುದ್ದಿಯಾಗುತ್ತಲಿರಲಿಲ್ಲ. ಆದರೆ ಈಗ ಸಮೀರ್ ಮಾಡಿರುವ ವೀಡಿಯೋ ಕೋಟ್ಯಂತರ ಜನರನ್ನು ತಲುಪಿದೆ.
ಸಮೀರ್‌ನ ವಿಡಿಯೋ ನೋಡಿದ ಎಲ್ಲರಿಗೂ ಇದು ಹೌದು ಹೌದು ನಿಜ ಎಂದೆನಿಸಿದೆ. ಧರ್ಮಸ್ಥಳದಲ್ಲಿ ಅನುಮಾನಾಸ್ಪದವಾಗಿ ಕೊಲೆಯಾದ ವೇದವಲ್ಲಿ, ಸೌಜನ್ಯಾ, ಪದ್ಮಲತಾ ಸೇರಿದಂತೆ ಹಲವು ಹೆಣ್ಣುಮಕ್ಕಳ ಅತ್ಯಾಚಾರ, ಕೊಲೆ ಜೊತೆಗೆ ಭೂ ಕಬಳಿಕೆಯ ಸುತ್ತ ನಡೆದ ದಬ್ಬಾಳಿಕೆ, ಕೊಲೆ ಮುಂತಾದವುಗಳ ಸಮಗ್ರ ತನಿಖೆ ಆಗಬೇಕು ಎಂಬ ಒತ್ತಾಯ ಎಲ್ಲೆಡೆ ಕೇಳಿ ಬರುತ್ತಿದೆ. ಸಮೀರ್‌ಗೆ ನಾಗರಿಕ ಸಮಾಜ, ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಬೆಂಬಲ ದೊರೆಯುತ್ತಿದೆ.
ಸಮೀರ್‌ನ ಈ ವಿಡಿಯೋದ ಮೂಲಕ ಮೂಡುತ್ತಿರುವ ಜನಜಾಗ್ರತಿ ಮುಂಡಾಸು ಕುಟುಂಬಕ್ಕೆ ಕಂಟಕವಾಗಲಿದೆ ಎಂಬುದು ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದೇ ಕಾರಣಕ್ಕೆ ಈಗ ಸಮೀರ್ ವಿರುದ್ಧ ಮತ್ತು ಮುಂಡಾಸುಧಾರಿಗಳ ಪರ ಒಂದಷ್ಟು ಪತ್ರಕರ್ತರು, ಮೂರನೆಯ ದರ್ಜೆಯ ಟಿವಿ ನಿರೂಪಕರು, ಕೋಡಂಗಿಗಳು, ಕಮಂಗಿಗಳು, ಭಟ್ಟಂಗಿಗಳು ಸೋಷಿಯಲ್ ಮೀಡಿಯಾದಲ್ಲಿ ತೀರಾ ಹೊಲಸು ಬಿತ್ತುತ್ತಿದ್ದಾರೆ. ಇವರಿಗೆ ಸೌಜನ್ಯ, ವೇದವಲ್ಲಿಯಂತಹ ಜೀವಗಳು ಯಾವ ಲೆಕ್ಕಕ್ಕೂ ಇಲ್ಲ.
ಸಮೀರ್ ಹೇಳಿದ ವಿಷಯಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು, ಸಮೀರ್ ಉಲ್ಲೇಖಿಸಿದ ಹೆಣ್ಣು ಜೀವಗಳ ಸಾವಿಗೆ ಮರುಗುವುದನ್ನು, ಆ ಸಾವಿಗೆ ನ್ಯಾಯ ಕೊಡಿಸುವುದನ್ನು ಬಿಟ್ಟು ಒಂದಷ್ಟು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಸಮೀರ್ ವಿರುದ್ಧವೇ ನಿಂದನೆಗೆ ತೊಡಗಿದ್ದಾರೆ. ಆತ ಮುಸ್ಲಿಂ ಎನ್ನುವುದೇ ಒಂದು ದೊಡ್ಡ ಆರೋಪ. ಮುಸ್ಲಿಮ್ ಎಂದ ಕೂಡಲೇ ಆತ ಯಾವುದಾದರೂ ಹಿಂದೂ ಹುಡುಗಿಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಮಾತನಾಡಬಾರದು, ತನಿಖೆಯಲ್ಲಾದ ಲೋಪಗಳನ್ನು ಬಯಲಿಗೆಳೆಯಬಾರದು, ನ್ಯಾಯಕ್ಕೆ ಆಗ್ರಹಿಸಬಾರದು ಎಂದೇನಾದರೂ ಇದೆಯೆ? ಅದರ ಜೊತೆಗೆ ಆತ ಯಾರದೋ ದುಡ್ಡಿನಲ್ಲಿ ಈ ವೀಡಿಯೋ ಮಾಡಿದ್ದಾನೆ ಎನ್ನುವ ಇನ್ನೊಂದು ಆರೋಪ. ಅದು ಹಸಿ ಸುಳ್ಳು ಆರೋಪ. ಇಂತಹ ವಿಡಿಯೊ ಮಾಡಲು ದುಡ್ಡಲ್ಲ ಗುಂಡಿಗೆ ಮುಖ್ಯ.
ಮತ್ತೊಂದು ಆರೋಪ ಸಮೀರ್ ಗ್ಯಾಂಬ್ಲಿಂಗ್ ಪ್ರಮೋಟ್ ಮಾಡುವ ವಿಡಿಯೋ ಮಾಡಿದವನು, ಅವನ ವಿಡಿಯೋಗೆ ಯಾಕೆ ಇಷ್ಟು ಮಹತ್ವ ಕೊಡಬೇಕು ಎನ್ನುವುದು. ಆತ ಗ್ಯಾಂಬ್ಲಿಂಗ್ ಪ್ರಮೋಟ್ ಮಾಡುವ ವಿಡಿಯೋ ಮಾಡಿದ್ದಾನೋ ಇಲ್ಲವೋ ಗೊತ್ತಿಲ್ಲ. ಮಾಡಿದ್ದರೆ ಅದು ತಪ್ಪು. ಆದರೆ ಸಮೀರ್ ಮಾತ್ರವೇ ಇಂತಹ ಆನ್ಲೈನ್ ಗ್ಯಾಂಬ್ಲಿಂಗ್ ಆಟಗಳನ್ನು ಪ್ರಮೋಟ್ ಮಾಡುತ್ತಿರುವುದೆ? ದೇಶಕ್ಕಾಗಿ ಆಡುತ್ತೇನೆ ಎಂದು ಎದೆ ತಟ್ಟಿ ಹೇಳುವ ಮತ್ತು ನೀವು ಆರಾಧ್ಯ ದೈವಗಳಂತೆ ಹೊತ್ತು ಮೆರೆಸುತ್ತಿರುವ ಭಾರತ ತಂಡದ ಬಹುತೇಕ ಹಾಲಿ ಕ್ರಿಕೆಟಿಗರು, ಕಪಿಲ್-ಗಾವಸ್ಕರ್‌ನಂತಹ ಮಾಜಿ ಕ್ರಿಕೆಟಿಗರು, ನೀವು ಫ್ಯಾನ್‌ಗಳಾಗಿರುವ ಹಲವು ಹೆಸರಾಂತ ನಟರು ಎಲ್ಲರೂ ಈಗ Dream 11, `123 Rummy, Pokerbazi, Zupee, RummyCircle ಹೀಗೆ ಹತ್ತು ಹಲವು ಆನ್ಲೈನ್ ಗ್ಯಾಂಬ್ಲಿಂಗ್ ಆಟಗಳನ್ನು ಪ್ರಮೋಟ್ ಮಾಡುತ್ತಿದ್ದಾರಲ್ಲ ಅದೂ ತಪ್ಪಲ್ಲವೆ? ಇದೇ ಕಾರಣಕ್ಕೆ ನೀವು ಇವರ ಆಟವನ್ನು, ಸಿನೆಮಾಗಳನ್ನು ಬಹಿಷ್ಕರಿಸುತ್ತೀರಾ? ಬಹಿಷ್ಖರಿಸಿದರೆ ಅದು ಒಳ್ಳಯದೆ ಬಿಡಿ.
ಸಮೀರ್‌ನನ್ನು ಯಾಕೆ ಬೆಂಬಲಿಸಬೇಕು ಎಂದರೆ ಆತ ಕೋಟ್ಯಂತರ ಜನರೊಳಗೆ ಸೌಜನ್ಯ, ವೇದವಲ್ಲಿ, ಪದ್ಮಲತಾಳಂತಹ ಹೆಣ್ಣುಮಕ್ಕಳ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸುವ ಜಾಗ್ರತಿ ಮೂಡಿಸಿದ್ದಾನೆ. ಆತ ಪ್ರಸ್ತಾಪಿಸಿದ ವಿಷಯಗಳನ್ನು ಚರ್ಚಿಸಬೇಕಾಗಿದೆ. ಧರ್ಮಸ್ಥಳದ ಆ ಜೀವಗಳಿಗೆ ನ್ಯಾಯ ಒದಗಿಸಬೇಕಾಗಿದೆ. ಸತ್ಯ ಹೊರಗೆ ಬರಬೇಕು, ತಪ್ಪು ಮಾಡಿದವ ಒಳಗೆ ಹೋಗಬೇಕು. ಸದ್ಯಕ್ಕೆ ಇಷ್ಟು ಆಗಬೇಕಿದೆ.
ಸಮೀರ್ ಜೊತೆ ನಾನು.
# ಶಶಿಧರ್ ಹೆಮ್ಮಾಡಿ(ಫೇಸ್ ಬುಕ್ ವಾಲ್ ನಿಂದ…)