ಚುನಾವಣೆಗೂ ಮೊದಲೇ ಶಿವಮೊಗ್ಗ ಪಾಲಿಕೆ ಮೇಯರ್ , ಉಪಮೇಯರ್ ಸ್ಥಾನದ ಮೀಸಲು ಪ್ರಕಟ
ಚುನಾವಣೆಗೂ ಮೊದಲೇ ಶಿವಮೊಗ್ಗ ಪಾಲಿಕೆ ಮೇಯರ್ , ಉಪಮೇಯರ್ ಸ್ಥಾನದ ಮೀಸಲು ಪ್ರಕಟ
ಶಿವಮೊಗ್ಗ ಮಹಾನಗರ ಪಾಲಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ಘೋಷಣೆಯೊಂದನ್ನ ಮಾಡಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಎಸ್‌ಟಿಗೆ, ಉಪಮೇಯರ್ ಬಿಸಿಎಂ ‘ಎ’ಗೆ ಮೀಸಲು ಮಾಡಿ ಆದೇಶ ಹೊರಡಿಸಿದೆ.
ನಿನ್ನೆದಿನ ರಾಜ್ಯಸರ್ಕಾರ ಶಿವಮೊಗ್ಗ ಸೇರಿದಂತೆ 10 ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್ ಸ್ಥಾನದ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.
ಅಸಲಿಗೆ ಶಿವಮೊಗ್ಗ ಮಹಾನಗರ ಪಾಲಿಕೆಯ (Shimoga Mahanagara Palike Office) ಅವಧಿ ಮುಕ್ತಾಯವಾಗಿದೆ. ಸದ್ಯ ಚುನಾವಣೆ ನಡೆಯಬೇಕಿದೆ. ಚುನಾವಣೆಗೆ ಸಿದ್ಧತೆ ಸಹ ನಡೆದಿದೆ. ಈ ನಿಟ್ಟಿನಲ್ಲಿ ಚುನಾವಣೆ ನಡೆಯುತ್ತೋ ಇಲ್ಲವೋ ಎನ್ನುವ ಅನುಮಾನವೂ ಸಹ ಮೂಡಿದೆ. ಇದರ ನಡುವೆ ಸರ್ಕಾರ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಗೆ 25ನೇ ಅವಧಿಗೆ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಹಾಗೂ ಉಪಮೇಯರ್ ಸ್ಥಾನ ಬಿಸಿಎಂ ಎಗೆ ಮೀಸಲಾಗಿದೆ ಇದು ಮುಂದಿನ ಮೇಯರ್ ಉಪಮೇಯರ್ ಸ್ಥಾನಕ್ಕೆ ಅನ್ವಯವಾಗಲಿದೆ