ರೆವಿನ್ಯೂ ನಿವಾಸಿಗಳಿಗೆ ಬಿ.ಖಾತೆಗೆ ಒತ್ತಾಯಿಸಿ ಹೋರಾಟ; ಮಾಜಿ ಕೌನ್ಸಿಲರ್ ಎನ್.ಕೆ.ಶ್ಯಾಮಸುಂದರ್
ರೆವಿನ್ಯೂ ನಿವಾಸಿಗಳಿಗೆ ಬಿ.ಖಾತೆಗೆ ಒತ್ತಾಯಿಸಿ ಹೋರಾಟ; ಮಾಜಿ ಕೌನ್ಸಿಲರ್ ಎನ್.ಕೆ.ಶ್ಯಾಮಸುಂದರ್

ಶಿವಮೊಗ್ಗ: ನಗರ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ೧೫-೨೦ ವರ್ಷಗಳ ಮೇಲ್ಪಟ್ಟು ಕ್ರಯ ಕರಾರು, ಜಿ.ಪಿ.ಎ. ಪತ್ರಗಳ ಮೇಲೆ ಮನೆಕಟ್ಟಿಕೊಂಡು ವಾಸ ಮಾಡುತ್ತಿರುವವರ ಜಾಗವನ್ನು ಸ್ವಾಧೀನ ಪಡಿಸಿಕೊಂಡು ಹಕ್ಕು ಒಡೆತನ ಹಾಗೂ ಬಿ.ಖಾತೆ ಮಾಡಿಕೊಡಬೇಕೆಂದು ರೆವಿನ್ಯೂ ನಿವಾಸಿಗಳ ಪರವಾಗಿ ಮಾಜಿ ನಗರಸಭಾ ಸದಸ್ಯ ಎನ್.ಕೆ.ಶ್ಯಾಮ್‌ಸುಂದರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ವ್ಯಾಪ್ತಿಯ ಹೊಸಮನೆ, ಶರಾವತಿ ನಗರ, ವಿನೋಬನಗರ, ಅಶೋಕ್‌ನಗರ, ಮಿಳಘಟ್ಟ, ಮಂಜುನಾಥ್ ಬಡಾವಣೆ, ಗುಂಡಪ್ಪಶೆಡ್, ಕಾಶಿಪುರ, ಗೋಪಾಳ ಮತ್ತು ಇತರ ಬಡಾವಣೆಯಲ್ಲಿ ಕಂದಾಯ ಜಾಗದಲ್ಲಿ ನೊಂದಣಿಯಾಗದೆ ಕರಾರು, ಜಿ.ಪಿ.ಎ. ಪತ್ರ ಆಧಾರಗಳ ಮೇಲೆ ಮಾಲೀಕರ ತಕರಾರು ಇಲ್ಲದ, ನ್ಯಾಯಾಲಯದಲ್ಲಿ ದಾವ ಇಲ್ಲದ ಸ್ವತ್ತುಗಳಲ್ಲಿ ಮನೆಕಟ್ಟಿಕೊಂಡು ವಾಸಮಾಡುತ್ತಿದ್ದಾರೆ. ವಿನೋಬನಗರದ, ಬೆಂಕಿನಗರದಲ್ಲಿ ,ಆರ್.ಎಂ.ಸಿ. ಇಂಡಸ್ಟ್ರೀಯಲ್ (ಕೆ.ಎಸ್.ಎಸ್.ಐ.ಡಿ.ಸಿ) ವ್ಯಾಪ್ತಿಗೆ ಒಳಪಡುವ ಜಾಗದಲ್ಲಿ ೧೯೮೮ರಿಂದ ಸುಮಾರು ೧೨೪ ಮನೆಗಳಲ್ಲಿ ವಾಸಮಾಡುತ್ತಿದ್ದು, ಇವರಿಗೂ ಯಾವುದೇ ದಾಖಲೆ ಇರುವುದಿಲ್ಲ. ಬಡ ಹಾಗೂ ಕೂಲಿ ಕಾರ್ಮಿಕ ಹಾಗೂ ಮಧ್ಯಮ ವರ್ಗದವರು ಇಲ್ಲಿ ವಾಸಿಸುತ್ತಿದ್ದು, ಮೂಲಭೂತ ಸೌಕರ್ಯವನ್ನು ಸಹ ಪಡೆದಿರುತ್ತಾರೆ.
೧೯೯೪ರಲ್ಲಿ ನಗರಸಭೆಗೆ ಹಸ್ತಾಂತರವಾದ ಗಾಡಿಕೊಪ್ಪ, ಅಬ್ಬಲಗೆರೆ, ಮಲವಗೊಪ್ಪ, ಗ್ರಾ.ಪಂ. ವ್ಯಾಪ್ತಿಯ ಮನೆಗಳು, ಸ್ವತ್ತುಗಳು ಹಾಗೂ ಸರ್ಕರದ ಗ್ರಾಮಠಾಣಾ ಸ್ವತ್ತುಗಳು ಕೂಡ ಕಂದಾಯ ಭೂಮಿಯ ಅಗ್ರಿಮೆಂಟ್, ಆಧಾರ ಪತ್ರ, ಜಿ.ಪಿ.ಎ. ಪತ್ರಗಳಲ್ಲಿ ಕಟ್ಟಿಕೊಂಡಿರುವ ಮನೆಗಳು ಕೂಡ ಪಾಲಿಕೆ ವ್ಯಾಪ್ತಿಯಲ್ಲಿ ಬರುತ್ತದೆ. ಇವರೆಲ್ಲರಿಗು ಸರ್ಕಾರವೇ ಒಂದು ದೃಢ ನಿರ್ಧಾರ ಮಾಡಿ ಈ ಜಾಗವನ್ನು ವಶ ಪಡಿಸಿಕೊಂಡು ಇವರೆಲ್ಲರಿಗು ಭೂ ಹಕ್ಕು ಒಡೆತನದ ದಾಖಲೆ ಮಾಡಿಕೊಡಬೇಕು ಹಾಗೂ ವಾಸ ಇರುವ ಎಲ್ಲಾ ಮನೆಗಳಿಗೂ ಬಿ.ಖಾತೆ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.

ಹೋರಾಟಗಾರ ತಿ.ನಾ.ಶ್ರೀನಿವಾಸ್ ಮಾತನಾಡಿ, ಖಾತೆಯೊಂದಿಗೆ ಮಾಲೀಕತ್ವದ ಅಂಶ ಅಲ್ಲ ಎಂದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಈಗಾಗಲೇ ಹೇಳಿದೆ. ಮತ್ತು ಹಿಂದೆ ಕಾಗೋಡು ತಿಮ್ಮಪ್ಪನವರು ಸಾಗರದಲ್ಲಿ ಸುಮಾರು ಎರಡೂವರೆ ಸಾವಿರ ಜನರಿಗೆ ಹಕ್ಕು ಪತ್ರ ನೀಡಿದ್ದಾರೆ. ಸಕ್ರಮಗೊಳಿಸಲು ಎಲ್ಲಾ ಅವಕಾಶಗಳು ಇವೆ. ಕೂಡಲೇ ಇಂತಹ ಸ್ವತ್ತುಗಳಿಗೆ ಬಿ.ಖಾತೆ ಮಾಡಿ ಕೊಡಲು ಸರ್ಕಾರ ತೀರ್ಮಾನಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮುಖ್ಯಮಂತ್ರಿಗಳು, ಪೌರಡಾಳಿತ ಸಚಿವರು, ಕಂದಾಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ಈ ಖಾತಾ ಮತ್ತು ಬಿ.ಖಾತಾದ ಗೊಂದಲವನ್ನು ಪರಿಹರಿಸಿ ಸ್ವತ್ತುಗಳಿಗೆ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆರ್.ಕೆ.ಉಮೇಶ್, ಶಿ.ಜು.ಪಾಶ, ಪ್ರಕಾಶ್, ಶಂಕರ್, ರಮೇಶ್, ಚನ್ನೇಶ್, ರವಿ, ವೆಂಕಟೇಶ್, ಅರುಣ್‌ಕುಮಾರ್, ಚಂದ್ರಶೇಖರ್, ಸುರೇಶ್ ಮತ್ತಿತರರು ಇದ್ದರು.