ನಾನು ಶರಾವತಿ ನದಿ-ಮಾ.19 ಕ್ಕೆ ಶಿವಮೊಗ್ಗದ ಗೋಪಿ ಸರ್ಕಲಲ್ಲಿ ಬಹಿರಂಗ ಸಭೆ- ಪಾದಯಾತ್ರೆ

ಪ್ರೀತಿಯ ಮನುಕುಲ ಬಾಂಧವರೆ,

ನಾನು ಶರಾವತಿ ನದಿ.

ಕರ್ನಾಟಕದಲ್ಲೇ ಅತೀ ಹೆಚ್ಚು ವಿದ್ಯುತ್ ಉತ್ಪಾದಿಸಿ ನಿಮ್ಮ ಮನೆಗಳಗನ್ನು ಬೆಳಗುತ್ತಾ ಇದ್ದೇನೆ. ಆದರೆ ನಾನು ನಿಮ್ಮವಳಷ್ಟೇ ಅಲ್ಲ, ನನ್ನ ಅವಶ್ಯಕತೆ ಅನ್ಯ ಜೀವಿ ಸಹೋದರ ಮತ್ತು ಸಹೋದರಿಯರಿಯರಿಗೂ ಬಹಳಷ್ಟು ಇದೆ.

ನನ್ನನ್ನು ಸ್ವತಂತ್ರವಾಗಿ ಹರಿಯಲು ಬಿಡಿ !

ಶರಾವತಿ ಪಂಪ್ಡ್ ಸ್ಟೋರೇಜ್ ಎಂಬ ಅನವಶ್ಯಕ ಯೋಜನೆಯನ್ನು ಹೇರಿ, ನನ್ನನ್ನು ಕೊಲ್ಲದಿರಿ. ನನ್ನ ಸರಾಗ ಹರಿವಿನ ಸೇವೆ ಎಲ್ಲಾ ಜೀವಿಲೋಕಕ್ಕೂ ದೊರಕಬೇಕು.

ನಿಮ್ಮ ಬುದ್ದಿವಂತಿಕೆಯಿಂದ ಏನೆಲ್ಲಾ ಸಾದಿಸಿದ್ದೀರಿ! ನೀವಾದರೆ ಅನ್ಯ ಗ್ರಹಕ್ಕೆ ಹೋಗಿ ಬದುಕುವ ಸಾಮರ್ಥ್ಯ ಉಳ್ಳವರು!

ಇಡೀ ಭೂಪ್ರದೇಶದಲ್ಲಿ ನನ್ನ ಒಡಲಿನಲ್ಲಿ ಕಾಣಸಿಗುವ ಕೇವಲ 2,500 ಸಿಂಗಳೀಕಗಳಿಗೆ ನನ್ನಲ್ಲಿರುವ ಮರದ ಚಾವಣಿಯನ್ನು ಬಿಟ್ಟರೆ ಬೇರೆ ಮನೆಯೇ ಇಲ್ಲ!

ನಿಮ್ಮ ಬಂಧುಗಳಾದ ಉತ್ತರ ಕನ್ನಡ ಮತ್ತು ಹೊನ್ನಾವರದ ಜನತೆ ತಮ್ಮ ಬದುಕಿಗಾಗಿ ನನ್ನನ್ನೇ ನಂಬಿಕೊಂಡಿದ್ದಾರೆ.

ನೀವುಗಳು ಇನ್ನಾದರೂ ನನ್ನ ಮೇಲೆ ಅವಲಂಬಿಸುವುದು ಬಿಟ್ಟು, ಪರಿಸರಕ್ಕೆ ಹಾನಿಯಾಗದಂತೆ, ಅನ್ಯ ಮಾರ್ಗಗಳಿಂದ ವಿದ್ಯುತ್ ಉತ್ಪಾದಿಸಿಕೊಳ್ಳಿ! ಇದು ಸಾಧ್ಯವಿದೆಯಲ್ಲ.

ನನ್ನಮೇಲೆ ಅವಲಂಬಿತ ಬೇರೆ ಜೀವಿಗಳ ನಾಶ, ನಿಮ್ಮಗಳ ವಿನಾಶಕ್ಕೆ ನಾಂದಿ!

ನನ್ನ ಮೇಲಿನ ದೌರ್ಜನ್ಯವನ್ನು ತಡೆಯಲು
ಒಂದಿಷ್ಟು ಕರುಣೆಯಿರುವ (ಕೆಳಗೆ ತಿಳಿಸಿರುವ) ಜನರು ನನ್ನ ಸ್ವಚ್ಛಂದ ಹರಿವನ್ನು ಕಾಪಾಡಲು ಮತ್ತು ನನ್ನ ಇತರ ಮಕ್ಕಳನ್ನು ಉಳಿಸಲು, ಮತ್ತು ಈ ಯೋಜನೆ ಬೇಡವೆಂದು ಸರ್ಕಾರಕ್ಕೆ ಹೇಳಲು ದಿನಾಕ: *19 ಮಾರ್ಚ್, 2025, ಬುಧವಾರ ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಗೋಪಿ ಸರ್ಕಲ್ ನಲ್ಲಿ ಬಹಿರಂಗ ಸಭೆ ಏರ್ಪಡಿಸಿದ್ದಾರೆ ನಂತರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಪಾದಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿ, ಮನವಿ ಪತ್ರವನ್ನು ಕೊಡಲು ಮುಂದೆ ಬಂದಿದ್ದಾರೆ*.

ಮಾನವೀಯ ಮೇರು ಗುಣಗಳನ್ನು ಹೊಂದಿರುವ ತಾವು ಜೊತೆ ಸೇರಿಕೊಂಡು ನನ್ನನ್ನು ಮತ್ತು ನನ್ನ ಇತರ ಮಕ್ಕಳನ್ನು ಉಳಿಸಿ!

ಧನ್ಯವಾದಗಳು,
ನಿಮ್ಮ
ಶರಾವತಿ ನದಿ.

*ಸರ್ವರಿಗೂ ಸ್ವಾಗತ*,

ವಿವಿಧ ಧರ್ಮ ಗುರುಗಳ ನೇತೃತ್ವದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಮತ್ತು ಶರಾವತಿ ನದಿ ತಿರುವು ( ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ) ಯೋಜನೆಯನ್ನು ವಿರೋಧಿಸಿ ಮನವಿ ಸಲ್ಲಿಸುತ್ತಿದ್ದಾರೆ. ದಯವಿಟ್ಟು ಬನ್ನಿ ನನ್ನನ್ನು ಉಳಿಸಿಕೊಳ್ಳಿ

ಧನ್ಯವಾದಗಳು,

ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟ
ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆ