16 ದೇಶಗಳ ವಿದೇಶಿ ರೋಟೇರಿಯನ್ ಬೈಕ್ ಯಾತ್ರೆ; ಶಿವಮೊಗ್ಗದಲ್ಲಿ ಭವ್ಯ ಸ್ವಾಗತ
16 ದೇಶಗಳ ವಿದೇಶಿ ರೋಟೇರಿಯನ್ ಬೈಕ್ ಯಾತ್ರೆ; ಶಿವಮೊಗ್ಗದಲ್ಲಿ ಭವ್ಯ ಸ್ವಾಗತ

ಶಿವಮೊಗ್ಗ:
ಯುರೋಪ್ ಮತ್ತು ಉತ್ತರ ಅಮೆರಿಕ ಖಂಡಗಳ 16 ದೇಶಗಳಿಂದ ಆಗಮಿಸಿದ 22 ವಿದೇಶಿ ರೋಟೇರಿಯನ್ ಸದಸ್ಯರ “Ride for Rotary” ಎಂಬ ಅಂತಾರಾಷ್ಟ್ರೀಯ ಬೈಕ್ ಯಾತ್ರಾ ತಂಡಕ್ಕೆ ಶಿವಮೊಗ್ಗದಲ್ಲಿ ರೋಟರಿ ಕ್ಲಬ್ ಮಿಡ್‌ಟೌನ್ ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು.
ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷರಾದ ಹರ್ಷ ಭಾಸ್ಕರ್ ಕಾಮತ್, ವಿದೇಶಿ ಅತಿಥಿಗಳನ್ನು ಭಾರತೀಯ ಸಂಪ್ರದಾಯ ಹಾಗೂ ಸಂಕ್ರಾಂತಿ ಹಬ್ಬದ ಸಾಂಸ್ಕೃತಿಕ ವೈಭವದಲ್ಲಿ ಸ್ವಾಗತಿಸಿ, ಶಿವಮೊಗ್ಗದ ಇತಿಹಾಸ ಹಾಗೂ ಪರಂಪರೆಯನ್ನು ಪರಿಚಯಿಸುವ ವ್ಯವಸ್ಥೆ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಫಾಸ್ಟ್ ಡಿಸ್ಟ್ರಿಕ್ಟ್ ಗವರ್ನರ್ ಚಂದ್ರಶೇಖರ್ ಮಾತನಾಡುತ್ತಾ,
ಸೂರ್ಯ ಉತ್ತರಾಯಣ ದಿಕ್ಕಿಗೆ ಪಥ ಬದಲಾಯಿಸುವಂತೆ, ಶಿವಮೊಗ್ಗ ಜಿಲ್ಲೆಯ ರೋಟರಿ ಸೇವಾ ಕಾರ್ಯಗಳು ಈಗ ಅಂತರಾಷ್ಟ್ರೀಯ ಮಟ್ಟದತ್ತ ಪಸರಿಸುತ್ತಿರುವುದು ಜಿಲ್ಲೆಗೆ ಹೆಮ್ಮೆ ತಂದ ಸಂಗತಿ. ಮೊದಲ ಬಾರಿಗೆ 16 ದೇಶಗಳ ಫ್ಲ್ಯಾಗ್ ಎಕ್ಸ್‌ಚೇಂಜ್ ಕಾರ್ಯಕ್ರಮ ನಡೆಯುತ್ತಿರುವುದು ನಿಜವಾದ ಅಂತಾರಾಷ್ಟ್ರೀಯ ರೋಟರಿ ವಿನಿಮಯದ ಪ್ರತೀಕ. ಇದು ಕೇವಲ ಬೈಕ್ ಯಾತ್ರೆ ಯಲ್ಲ, ನಮ್ಮ ದೇಶದ ಸಂಸ್ಕೃತಿ, ಸೇವೆ ಮತ್ತು ಸ್ನೇಹತೆಯ ಬಲವನ್ನು ಜಗತ್ತಿಗೆ ತೋರಿಸುವ ಸೇತುವೆಯಾಗಿದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಿವಮೊಗ್ಗದ ವಿವಿಧ ರೋಟರಿ ಕ್ಲಬ್‌ಗಳ ಅಧ್ಯಕ್ಷರು ಭಾಗವಹಿಸಿದ್ದರು. ರೋಟರಿ ಕ್ಲಬ್ ಮಿಡ್‌ಟೌನ್‌ನ ಇಂಟರ್‌ನ್ಯಾಷನಲ್ ಸರ್ವಿಸ್ ಡೈರೆಕ್ಟರ್ ಉಜ್ವಲ್ ರವಿ ಹಾಗೂ ಅವರ ತಂಡ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಿದರು.


