ನಮಾಜಿಗೆ ಹೋದಾಗ 29ಲಕ್ಷ ₹ ದರೋಡೆ ಮಾಡಿ ಪರಾರಿಯಾಗಿದ್ದ ದರೋಡೆಕೋರರು!* *ಹೊನ್ನಾಳಿ ಮೂಲದ ಮೂವರ ಬಂಧನ….* *ಸೈಯದ್ ಅಬ್ದುಲ್ಲ- ನವೀದ್ ಅಹಮದ್- ಜಾವೀದ್ ಬಂಧಿತರು*

*ನಮಾಜಿಗೆ ಹೋದಾಗ 29ಲಕ್ಷ ₹ ದರೋಡೆ ಮಾಡಿ ಪರಾರಿಯಾಗಿದ್ದ ದರೋಡೆಕೋರರು!*

*ಹೊನ್ನಾಳಿ ಮೂಲದ ಮೂವರ ಬಂಧನ….*

*ಸೈಯದ್ ಅಬ್ದುಲ್ಲ- ನವೀದ್ ಅಹಮದ್- ಜಾವೀದ್ ಬಂಧಿತರು*

ಸಾಕಷ್ಟು ಕುತೂಹಲ ಕೆರಳಿಸಿದ್ದ ತೀರ್ಥಹಳ್ಳಿ ದರೋಡೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಹೊನ್ನಾಳಿಯ ಮೂವರು ದರೋಡೆಕೋರರನ್ನು ಬಂಧಿಸಿ ಅವರಿಂದ 29 ಲಕ್ಷ ₹ ನಗದು ಹಣ ಹಾಗೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

*ಏನಿದು ಪ್ಕರಣ?*

14-03-2025 ರಂದು ಬೆಳಗ್ಗೆ *ಮಹಮದ್ ಇರ್ಷಾದ್,* ಬೊಂಬು ಬಜಾರ್ ಹೊನ್ನಾಳಿ ಟೌನ್, ದಾವಣಗೆರೆ ಜಿಲ್ಲೆ ಈತನು ತನ್ನ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ *ರೂ 29,00,000/- (ಇಪ್ಪತ್ತ ಒಂಬತ್ತು ಲಕ್ಷ) ರೂಗಳನ್ನು* ತೆಗೆದುಕೊಂಡು, *ಸ್ಕ್ರಾಪ್ ವ್ಯವಹಾರದ ಸಂಬಂಧ* ಹೊನ್ನಾಳಿಯಿಂದ ಮಂಗಳೂರಿಗೆ ಹೊರಟಿದ್ದು, ಮಾರ್ಗ ಮಧ್ಯೆ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ *ರಂಜದಕಟ್ಟೆ ಮಸೀದಿಯ ಹತ್ತಿರ* ನಮಾಜ್ ಮಾಡುವ ಸಲುವಾಗಿ ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ, *ಹಣವಿದ್ದ ಬ್ಯಾಗ್ ಅನ್ನು ವಾಹನದಲ್ಲಿಯೇ ಇಟ್ಟು* ಮಸೀದಿಗೆ ನಮಾಜ್ ಮಾಡಲು ಹೋಗಿ ವಾಪಸ್ಸು ಬಂದು ನೋಡಿದಾಗ, ವಾಹನವು ಸ್ಥಳದಲ್ಲಿ ಇರಲಿಲ್ಲ, *ರೂ 29,00,000/- ನಗದು ಹಣ ಹಾಗೂ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ಯಾರೋ ಕಳ್ಳರು ಕಳ್ಳತನ* ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಿನ ಮೇರೆಗೆ, ತೀರ್ಥಹಳ್ಳಿ ಪೊಲೀಸ್ ಠಾಣೆ *ಗುನ್ನೆ ಸಂಖ್ಯೆ 94/2025 ಕಲಂ 303(2) ಬಿ.ಎನ್.ಎಸ್ -2023 ರೀತ್ಯಾ* ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪ್ರಕರಣದಲ್ಲಿ ಕಳುವಾದ ನಗದು ಹಣ, ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಮತ್ತು ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್,* ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭೂಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ. ಜಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಅರವಿಂದ ಕಲಗುಜ್ಜಿ,* ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಇಮ್ರಾನ್ ಬೇಗ್,* ಪೊಲೀಸ್ ನಿರೀಕ್ಷಕರು, ತೀರ್ಥಹಳ್ಳಿ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ * ಶಿವನಗೌಡ* ಪಿಎಸ್ ಐ, ತೀರ್ಥಹಳ್ಳಿ ಪೊಲೀಸ್ ಠಾಣೆ, ಮತ್ತು ಸಿಬ್ಬಂದಿಗಳಾದ ಎಎಸ್ಐ ಲೋಕೇಶಪ್ಪ, *ಹೆಚ್ ಸಿಗಳಾದಃ* ಶ್ರೀ ಲಿಂಗೇಗೌಡ, ರಾಜಶೇಖರ್ ಶೆಟ್ಟಿಗಾರ್, *ಸಿಪಿಸಿಗಳಾದಃ* ರವಿ, ಪ್ರದೀಪ್, ಸುರೇಶ್ ನಾಯ್ಕ್, ಪ್ರಮೋದ್, ದೀಪಕ್, ಮಂಜುನಾಥ, ರಾಘವೇಂದ್ರ, ಕರ್ಣೇಶ್, ಚಾಲಕರಾದ ಅವಿನಾಶ್ ಹಾಗು ಜಿಲ್ಲಾ ಪೊಲೀಸ್ ಕಛೇರಿ *ಎ.ಎನ್.ಸಿ ವಿಭಾಗದ* ಗುರುರಾಜ್, ಇಂದ್ರೇಶ್ ಹಾಗೂ ವಿಜಯಕುಮಾರ ರವರುಗಳನ್ನು ಒಳಗೊಂಡ ವಿಶೇಷ *ತನಿಖಾ ತಂಡವನ್ನು ರಚಿಸಲಾಗಿತ್ತು.

ಈ ತನಿಖಾ ತಂಡವು ಹೊನ್ನಾಳಿ ಪೊಲೀಸ್ ಠಾಣೆಯ * ಸುನೀಲ್ ಕುಮಾರ ಹೆಚ್* ಪಿಐ, ಹರೀಶ್ ಎಎಸ್ಐ ಮತ್ತು *ಸಿಬ್ಬಂದಿಗಳಾದ ಸಿ.ಹೆಚ್.ಸಿ* ಜಗದೀಶ, ಹೇಮಾನಾಯ್ಕ್, ಸುರೇಶ್ ನಾಯ್ಕ್ ಮತ್ತು ರಾಜಶೇಖರ್ ರವರ ಸಹಕಾರದೊಂದಿಗೆ ಪ್ರಕರಣದ ಆರೋಪಿಗಳಾದ *1) ಸೈಯದ್ ಅಬ್ದುಲ್ಲಾ,* 45 ವರ್ಷ, ನೂರಾನಿ ಮಸೀದಿ ಹತ್ತಿರ, ಹೊನ್ನಾಳಿ, ದಾವಣಗೆರೆ, *2) ನವೀದ್ ಅಹಮದ್,* 40 ವರ್ಷ, ಹೊನ್ನಾಳಿ ಟೌನ್, ದಾವಣಗೆರೆ ಮತ್ತು *3) ಜಾವೀದ್,* 42 ವರ್ಷ, ನೂರಾನಿ ಮಸೀದಿ ಹತ್ತಿರ, ಹೊನ್ನಾಳಿ, ದಾವಣಗೆರೆ ರವರುಗಳನ್ನು *ದಿನಾಂಕಃ 14-02-2025 ರಂದು* ಪ್ರಕರಣ ದಾಖಲಾದ 24 ಗಂಟೆಗಳ ಒಳಗಾಗಿ ದಸ್ತಗಿರಿ ಮಾಡಿ, *ಆರೋಪಿತರಿಂದ 29 ಲಕ್ಷ ರೂ ನಗದು* ಹಣ ಹಾಗೂ ಅಂದಾಜು ಮೌಲ್ಯ *10,00,000/- ರೂಗಳ ಅಶೋಕ್ ಲೈಲಾಂಡ್ ವಾಹನ* ಮತ್ತು ಕೃತ್ಯಕ್ಕೆ ಬಳಸಿದ *ಅಂದಾಜು ಮೌಲ್ಯ 6,00,000/- ಟೊಯೋಟಾ ಇಟಿಯೋಸ್ ಕಾರು* ಸೇರಿ *ಒಟ್ಟು 45,00,000/- ರೂ ಮೌಲ್ಯದ ನಗದು ಹಣ ಮತ್ತು ವಾಹನಗಳನ್ನು ಅಮಾನತ್ತು* ಪಡಿಸಿಕೊಳ್ಳಲಾಗಿದೆ.

ಈ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು* ಪ್ರಶಂಸಿಸಿ ಅಭಿನಂದಿಸಿರುತ್ತಾರೆ.