20 ಕ್ಕೂ ಹೆಚ್ಚಿನ ಕೇಸ್ ಗಳಿದ್ದ ಕಡೇಕಲ್ ಆಬೀದ್ ಕಾಲಿಗೆ ಗುಂಡು ಹೊಡೆದ ಪಿಎಸ್ ಐ ನಾಗಮ್ಮ*
*20 ಕ್ಕೂ ಹೆಚ್ಚಿನ ಕೇಸ್ ಗಳಿದ್ದ ಕಡೇಕಲ್ ಆಬೀದ್ ಕಾಲಿಗೆ ಗುಂಡು ಹೊಡೆದ ಪಿಎಸ್ ಐ ನಾಗಮ್ಮ*
ಭದ್ರಾವತಿ ಪೇಪರ್ ಟೌನ್ ವ್ಯಾಪ್ತಿಯಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ ಕಡೇಕಲ್ ಆಬೀದ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಪ್ರಕರಣ ಮಂಗಳವಾರದಂದು ನಡೆದಿದೆ.
ಪೇಪರ್ ಟೌನ್ ಇನ್ಸ್‌ಪೆಕ್ಟರ್ ನಾಗಮ್ಮ ಆರೋಪಿ ಕಡೇಕಲ್ ಆಬೀದ್ ನನ್ನು ವಶಕ್ಕೆ ಪಡೆದಿದ್ದಾರೆ.
ಕಡೇಕಲ್ ಆಬೀದ್ ಸುಮಾರು ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ. ಪಿಎಸ್ ಐ ನಾಗಮ್ಮ ಮತ್ತು ತಂಡ ಅವನನ್ನು ಹುಡುಕುತ್ತಿತ್ತು. ಇಂದು ಅವರಿಗೆ ಸುಳಿವು ಸಿಕ್ಕಾಗ ಮತ್ತು ಅವರ ತಂಡ ಅವನನ್ನು ಬಂಧಿಸಲು ಹೋದಾಗ, ಆಬೀದ್ ತಪ್ಪಿಸಿಕೊಳ್ಳಲು ಮತ್ತು ನಮ್ಮ ಸಿಬ್ಬಂದಿಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ.
ಪೊಲೀಸ್ ಅರುಣ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಆರೋಪಿ ಆಬೀದ್ ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿ ಶರಣಾಗದಿದ್ದಾಗ ನಾಗಮ್ಮ ಕಡೇಕಲ್ ಆಬೀದ್‌ನ ಕಾಲಿಗೆ ಗುಂಡು ಹಾರಿಸಿ ಅವನನ್ನು ಸೆರೆಹಿಡಿದಿದ್ದಾರೆ.
ಅವನ ಮೇಲೆ ಕೊಲೆ, ದರೋಡೆ, ಕೊಲೆಯತ್ನ ಸೇರಿದಂತೆ 20 ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.