ಏಪ್ರಿಲ್ ತಿಂಗಳಲ್ಲಿ 15 ದಿನ ಬ್ಯಾಂಕುಗಳು ಬಂದ್!*
*ಏಪ್ರಿಲ್ ತಿಂಗಳಲ್ಲಿ 15 ದಿನ ಬ್ಯಾಂಕುಗಳು ಬಂದ್!*
ಮುಂಬರುವ ಏಪ್ರಿಲ್ ತಿಂಗಳಲ್ಲಿ ಇರುವ 30 ದಿನದಲ್ಲಿ ಅರ್ಧದಷ್ಟು ರಜಾ ದಿನಗಳೇ ಇವೆ. ಆರ್ಬಿಐ ಹಾಲಿಡೇ ಕ್ಯಾಲಂಡರ್ ಪ್ರಕಾರ, ದೇಶಾದ್ಯಂತ ವಿವಿಧ ಪ್ರದೇಶಗಳಲ್ಲಿ 15 ದಿನಗಳವರೆಗೆ ಬ್ಯಾಂಕುಗಳಿಗೆ (Bank holidays) ರಜೆ ಇದೆ. ಕೆಲ ರಾಜ್ಯಗಳ ಸಂಸ್ಥಾಪನಾ ದಿನಗಳಿವೆ. ಕೆಲ ಮಹನೀಯರ ಜಯಂತಿಗಳಿವೆ. ಇದರಲ್ಲಿ ಮಹಾವೀರ, ಬಸವ, ಅಂಬೇಡ್ಕರ್, ಜಗಜೀವನ್ ರಾಮ್ ಅವರ ಜಯಂತಿಯೂ ಸೇರಿವೆ. ನಾಲ್ಕು ಭಾನುವಾರ, ಎರಡು ಶನಿವಾರದ ರಜೆಗಳೂ ಒಳಗೊಂಡಿವೆ. ಕೆಲ ರಾಜ್ಯಗಳಲ್ಲಿ ಸತತ ಮೂರ್ನಾಲ್ಕು ದಿನ ಬ್ಯಾಂಕುಗಳಿಗೆ ರಜೆ ಇದೆ. ಗುಡ್ ಫ್ರೈಡೆ ಕೂಡ ಇದೇ ಏಪ್ರಿಲ್ನಲ್ಲಿ ಇದೆ.
2025ರ ಏಪ್ರಿಲ್ನಲ್ಲಿ ದೇಶದ ವಿವಿಧೆಡೆ ಬ್ಯಾಂಕುಗಳಿಗೆ ಇರುವ ರಜಾ ದಿನಗಳು
ಏಪ್ರಿಲ್ 1, ಮಂಗಳವಾರ: ಸರಹುಲ್ ಹಬ್ಬ (ಜಾರ್ಖಂಡ್ನಲ್ಲಿ ರಜೆ)
ಏಪ್ರಿಲ್ 5, ಶನಿವಾರ: ಬಾಬು ಜಗಜೀವನ್ ರಾಮ್ ಜಯಂತಿ (ತೆಲಂಗಾಣದಲ್ಲಿ ರಜೆ)
ಏಪ್ರಿಲ್ 6: ಭಾನುವಾರದ ರಜೆ
ಏಪ್ರಿಲ್ 10, ಗುರುವಾರ: ಮಹಾವೀರ್ ಜಯಂತಿ (ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ರಜೆ)
ಏಪ್ರಿಲ್ 12: ಎರಡನೇ ಶನಿವಾರದ ರಜೆ
ಏಪ್ರಿಲ್ 13: ಭಾನುವಾರದ ರಜೆ
ಏಪ್ರಿಲ್ 14, ಸೋಮವಾರ: ಅಂಬೇಡ್ಕರ್ ಜಯಂತಿ, ವಿಷು, ಬಿಹು, ತಮಿಳು ಹೊಸ ವರ್ಷ (ಕರ್ನಾಟಕ, ತಮಿಳುನಾಡು ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ರಜೆ)
ಏಪ್ರಿಲ್ 15, ಮಂಗಳವಾರ: ಬಂಗಾಳ ಹೊಸ ವರ್ಷ, ಹಿಮಾಚಲ ದಿನ, ಬೋಹಾಗ್ ಬಿಹು (ಅಸ್ಸಾಂ, ಪಶ್ಚಿಮ ಬಂಗಾಳ, ಅರುಣಾಚಲಪ್ರದೇಶ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ರಜೆ)
ಏಪ್ರಿಲ್ 18, ಶುಕ್ರವಾರ: ಗೂಡ್ ಫ್ರೈಡೆ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
ಏಪ್ರಿಲ್ 20: ಭಾನುವಾರದ ರಜೆ
ಏಪ್ರಿಲ್ 21, ಸೋಮವಾರ: ಗರಿಯಾ ಪೂಜೆ (ತ್ರಿಪುರಾದಲ್ಲಿ ರಜೆ)
ಏಪ್ರಿಲ್ 26: ನಾಲ್ಕನೇ ಶನಿವಾರದ ರಜೆ
ಏಪ್ರಿಲ್ 27: ಭಾನುವಾರದ ರಜೆ
ಏಪ್ರಿಲ್ 29, ಮಂಗಳವಾರ: ಭಗವಾನ್ ಶ್ರೀ ಪರಷುರಾಮ್ ಜಯಂತಿ (ಹಿಮಾಚಲ ಪ್ರದೇಶದಲ್ಲಿ ರಜೆ)
ಏಪ್ರಿಲ್ 30, ಬುಧವಾರ: ಬಸವಜಯಂತಿ (ಕರ್ನಾಟಕ ರಾಜ್ಯದಲ್ಲಿ ರಜೆ)
ಕರ್ನಾಟಕದಲ್ಲಿ ಶನಿವಾರ ಮತ್ತು ಭಾನುವಾರದ್ದೂ ಸೇರಿ ಏಪ್ರಿಲ್ನಲ್ಲಿ ಒಟ್ಟು 10 ರಜಾ ದಿನಗಳಿವೆ. ಅವುಗಳ ಪಟ್ಟಿ ಇಲ್ಲಿದೆ:
ಏಪ್ರಿಲ್ 6: ಭಾನುವಾರದ ರಜೆ
ಏಪ್ರಿಲ್ 10, ಗುರುವಾರ: ಮಹಾವೀರ್ ಜಯಂತಿ
ಏಪ್ರಿಲ್ 12: ಎರಡನೇ ಶನಿವಾರದ ರಜೆ
ಏಪ್ರಿಲ್ 13: ಭಾನುವಾರದ ರಜೆ
ಏಪ್ರಿಲ್ 14, ಸೋಮವಾರ: ಅಂಬೇಡ್ಕರ್ ಜಯಂತಿ
ಏಪ್ರಿಲ್ 18, ಶುಕ್ರವಾರ: ಗೂಡ್ ಫ್ರೈಡೆ
ಏಪ್ರಿಲ್ 20: ಭಾನುವಾರದ ರಜೆ
ಏಪ್ರಿಲ್ 26: ನಾಲ್ಕನೇ ಶನಿವಾರದ ರಜೆ
ಏಪ್ರಿಲ್ 27: ಭಾನುವಾರದ ರಜೆ
ಏಪ್ರಿಲ್ 30, ಬುಧವಾರ: ಬಸವಜಯಂತಿ
ಬ್ಯಾಂಕುಗಳು ಬಾಗಿಲು ಮುಚ್ಚಿದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಎಲ್ಲಾ 365 ದಿನಗಳಲ್ಲೂ ಲಭ್ಯ ಇರುತ್ತವೆ. ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಸದಾ ಚಾಲನೆಯಲ್ಲಿರುತ್ತವೆ. ಕ್ಯಾಷ್ ಪಡೆಯಲು ಎಟಿಎಂ ಸೆಂಟರ್ಗಳಿರುತ್ತವೆ. ಹಣ ಪಾವತಿಗೆ ಯುಪಿಐ ಆ್ಯಪ್್ಗಳು ಇರುತ್ತವೆ. ಹೀಗಾಗಿ, ಕೆಲವೇ ಕೋರ್ ಬ್ಯಾಂಕಿಂಗ್ ಕಾರ್ಯಗಳಿಗೆ ಬ್ಯಾಂಕ್ ಕಚೇರಿಗೆ ಹೋಗಬೇಕಾಗಬಹುದು. ಅಂಥವರು ಮೊದಲೇ ರಜಾ ದಿನಗಳ ಪಟ್ಟಿ ನೋಡಿ ಪ್ಲಾನ್ ಮಾಡಿಕೊಳ್ಳುವುದು ಉತ್ತಮ.