ತ್ಯಾವರೆಕೊಪ್ಪದಲ್ಲಿ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ…* *ಗುದ್ದಲಿಯಿಂದ ತಲೆಗೆ ಹೊಡೆದು ಕೊಲೆ*

*ತ್ಯಾವರೆಕೊಪ್ಪದಲ್ಲಿ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ…*

*ಗುದ್ದಲಿಯಿಂದ ತಲೆಗೆ ಹೊಡೆದು ಕೊಲೆ*

ಗುದ್ದಲಿಯಿಂದ ತಲೆಗೆ ಹೊಡೆದು ವ್ಯಕ್ತಿಯೊಬ್ಬನನ್ನು ಸಮೀಪದ ತ್ಯಾವರೆಕೊಪ್ಪದಲ್ಲಿ ಕೊಲೆ ಮಾಡಲಾಗಿದೆ.

ತ್ಯಾವರೆಕೊಪ್ಪದ ಚಿನ್ನಕುಳಂದೈ ರವರ ಮಗ 31 ವರ್ಷದ ದೇವರಾಜು ಕೊಲೆಯಾದವನು.

ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿರುವ ಚಿನ್ನಾದೊರೈ ಎಂಬಾತನ ಮಗ ವೆಂಕಟೇಶ್ ಕೊಲೆ ಮಾಡಿದವನು.

ಇಬ್ಬರೂ ಸ್ನೇಹಿತರೇ ಆಗಿದ್ದು, ವಿಚಾರ ಭಿನ್ನಾಭಿಪ್ರಾಯದಿಂದಾಗಿ ಕೊಲೆಯಾಗಿರಬಹುದೆಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.